eNews Land
ಸುದ್ದಿ

ಧಾರವಾಡದ ಸಾವಿನ ಹೆದ್ಧಾರಿಗೆ ಮುಕ್ತಿ: ದಶಪಥ ಆಗಲಿದೆ ಬೈಪಾಸ್!! ಎಷ್ಟು ಕೋಟಿ ಪ್ರಾಜೆಕ್ಟ್ ಗೊತ್ತಾ?

Listen to this article

ಬರೋಬ್ಬರಿ ₹ 1200 ಕೋಟಿ ವೆಚ್ಚದಲ್ಲಿ ನಿರ್ಮಾಣ

ಇಎನ್ಎಲ್ ಧಾರವಾಡ: ಕಳೆದ ವರ್ಷವಷ್ಟೇ ಭೀಕರ ಅಪಘಾತ ಸಂಭವಿಸಿ 12 ವೈದ್ಯೆಯರು ಮೃತಪಟ್ಟ ಹುಬ್ಬಳ್ಳಿ ಧಾರವಾಡ ಸಾವಿನ ಬೈಪಾಸ್ ರಸ್ತೆಗೆ ಮುಕ್ತಿ ಸಿಗುವ ಕಾಲ ಅಂತೂ ಸನ್ನಿಹಿತವಾಗಿದೆ.

 ಗಬ್ಬೂರು NH4 ರಸ್ತೆಯಿಂದ ಧಾರವಾಡದ ನರೇಂದ್ರ ಕ್ರಾಸ್ ಬಳಿ ವರೆಗಿನ ಒಟ್ಟು 31.6 ಕಿಮೀ 6 ಪಥದ ಎಕ್ಸ್‍ಪ್ರೆಸ್ ವೇ ಹಾಗೂ 4 ಪಥದ ರಸ್ತೆಯ ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಗೆ ದಶಪಥವಾಗಿ ರೂಪಿಸಲು 1200 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ￰ಕರೆಯಲಾಗಿದೆ.

ನವದೆಹಲಿಯಲ್ಲಿ ಇಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನವದೆಹಲಿ ಇವರು ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯನ್ನು ನಿರ್ಮಿಸಲು ಇ.ಪಿ.ಸಿ. Engineering, procurement, and construction ಮಾದರಿಯಲ್ಲಿ ಟೆಂಡರ್ ಕರೆಯಲಾಗಿದೆ.

ಕಾಮಗಾರಿ ಮುಗಿಸಲು 2.5 ವರ್ಷ ನಿಗದಿಗೊಳಿಸಲಾಗಿದೆ ಹಾಗೂ ನಿರ್ಮಾಣದ ನಂತರ 5 ವರ್ಷದ ನಿರ್ವಹಣೆಯನ್ನೂ ಗುತ್ತಿಗೆದಾರರೆ ನಿರ್ವಹಿಸುವ ಕರಾರೊಂದಿಗೆ ಟೆಂಡರಿನಲ್ಲಿ ಸೂಚಿಸಲಾಗಿದೆ.

ಮುಖ್ಯವಾಗಿ ಈಗಿರುವ ಬೈಪಾಸ್‍ನ ಎಲ್ಲಾ ಟೋಲ್ ಪ್ಲಾಜಾಗಳನ್ನು ತೆಗೆದು ಕೇವಲ ಒಂದು ಟೋಲ್ ಪ್ಲಾಜಾ ಮಾತ್ರ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಟೋಲ್ ಕೆಲಗೇರಿ ಮತ್ತು ನರೆಂದ್ರ ಮದ್ಯೆ ಮಾಡಲಾಗಿದ್ದು ಇದರಿಂದ ಹುಬ್ಬಳ್ಳಿ –ಧಾರವಾಡ ಮಧ್ಯ ಸಂಚರಿಸುವ ಪ್ರಯಾಣಿಕರು ಟೋಲ್ ನಿಂದ ವಿನಾಯಿತಿ ನೀಡಲಾಗಿದೆ. ಈ ಬೈಪಾಸ್ ನಿರ್ಮಾಣದಿಂದ ನಗರ ಮದ್ಯದೊಳಗಿನ ಸಂಚರಿಸುವ ವಾಹನ ದಟ್ಟಣೆ ಕಡಿಮೆಯಾಗಲಿದೆ.

ಪುಣೆ-ಬೆಂಗಳೂರು ಹೆದ್ದಾರಿ ವಿಸ್ತರಣೆ ಆಯಿತು. ಆದರೆ ಹು-ಧಾ ಬೈಪಾಸ್ ವಿಸ್ತರಣೆ ಆಗಿಲ್ಲ. 6 ಪಥದ ರಸ್ತೆಯಲ್ಲಿ ವೇಗವಾಗಿ ವಾಹನ ಚಲಾಯಿಸಿಕೊಂಡು ಬರುವ ಚಾಲಕರು ಬೈಪಾಸ್ ನಲ್ಲಿಯೂ ಅದೇ ವೇಗದಲ್ಲಿ ಬರುವುದರಿಂದ ಇಂತಹ ಅಪಘಾತಗಳು ಸಂಭವಿಸುತ್ತವೆ ಎಂಬುದು ತಜ್ಞರ ಅಭಿಪ್ರಾಯದೊಂದಿಗೆ ಬೈಪಾಸ್ ಕೂಡಾ ಕನಿಷ್ಠ 6 ಪಥಗಳಿಗೆ ವಿಸ್ತರಣೆ ಆಗಬೇಕೆಂಬುದು ನನ್ನ ಆಗ್ರಹವಾಗಿತ್ತು.
ಈ ಯೋಜನೆ ಒಟ್ಟು ₹ 1200 ಕೋಟಿ ವೆಚ್ಚದಲ್ಲಿ ಹುಬ್ಬಳಿಯ ಗಬ್ಬೂರು ಎನ್.ಎಚ್. 4 ರಸ್ತೆಯ 402.6 ಕಿಮೀ ಯಿಂದ ಧಾರವಾಡದ ನರೇಂದ್ರ ಕ್ರಾಸ್ ಬಳಿ 433.2 ಕಿಮೀ ವರೆಗಿನ ಒಟ್ಟು 31 ಕಿಮೀ 6 ಪಥದ ಎಕ್ಸ್‌ಪ್ರೆಸ್ ವೇ ಹಾಗೂ ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ 800 ಕೋಟಿ ರು. ಹಾಗೂ ಭೂ ಸ್ವಾದೀನ ಡಿಪಿಆರ್ ತಯಾರಿಕೆ ಹಾಗೂ ಇನ್ನಿತರೆ ಕಾರ್ಯಕ್ಕೆ 400 ಕೋಟಿ ರುಪಾಯಿ ಕೇಂದ್ರ ಸರ್ಕಾರ ನೀಡಿದೆ.

ಈ ಬೈಪಾಸ್ ರಸ್ತೆಗೆ ಅನುಮೋದನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರಿಗೆ ಅವಳಿ ನಗರದ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಧನ್ಯವಾದ ಸಲ್ಲಿಸಿದ್ದಾರೆ.

Related posts

ಫ್ಲಿಪ್ ಕಾರ್ಟಲ್ಲಿ ಹೂಡಿಕೆ ಮಾಡಿದ್ರೆ ಕೋಟಿ ಕೊಡ್ತಿನಿ ಅಂದು ಚೊಂಬು ಕೈಗಿಟ್ಟ!!

eNewsLand Team

ನೈಋತ್ಯ ರೈಲ್ವೆ ಭರ್ಜರಿ ಗಳಿಕೆ; ಸರಕು ಸಾಗಾಣಿಕೆಯಿಂದ ₹ 4160 ಕೋಟಿ ಗಳಿಕೆ

eNewsLand Team

ಬ್ಲೈಂಡ್ ಲವ್; ಮಾತುಕತೆಗೆ ಕರೆದು ಯುವಕನ ಮರ್ಡರ್ ಮಾಡಿದ್ರು.‌!! ಘೋರ ವಿಧಿಬರಹ

eNewsLand Team