34 C
Hubli
ಏಪ್ರಿಲ್ 29, 2024
eNews Land
ಸುದ್ದಿ

ಸರ್ಕಾರಿ ಋಣಮುಕ್ತ ಸಾಲದ ಪ್ರಮಾಣ ಪತ್ರ ವಿತರಿಸಿದ ಶಾಸಕ ಎನ್.ಎಚ್.ಕೋನರಡ್ಡಿ

ಇಎನ್‌ಎಲ್ ಅಣ್ಣಿಗೇರಿ: ಪಟ್ಟಣದ ಅಂಜುಮನ್ ಸಂಸ್ಥೆ ಶಾದಿಮಹಲ್ ಕಟ್ಟಡ ನಿರ್ಮಾಣಕ್ಕೆ ರಾಷ್ಟ್ರೀಕೃತ ಬ್ಯಾಂಕಿನಿoದ ಸಾಲ ಪಡೆದಿತ್ತು ಸಾಲ ಪಡೆದ ಹಣ ಮರುಪಾವತಿಸದೇ, ಕಳೆದ  10-15 ವರ್ಷಗಳು ಕಳೆದರೂ ಸಾಲ ಪಾವತಿಸಲು ಆಗಿರಲಿಲ್ಲ. ಅಸಲು ಬಡ್ಡಿ ಸಮೇತ  ಹಣ ಬ್ಯಾಂಕಿನಲ್ಲಿ ಹೆಚ್ಚುತ್ತಿದ್ದರಿಂದ ಸಂಸ್ಥೆಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊoಡಿದ್ದವು. ವಕ್ಪ ಸಚಿವ ಜಮೀರ ಅಹ್ಮದ್ ಅವರಿಗೆ ಸಂಸ್ಥೆಯ ಆರ್ಥಿಕ ಸಂಕಷ್ಟ ಸ್ಥಿತಿಗತಿ ಕುರಿತು ಮನವಿ ಮಾಡಿದಾಗ ಸರ್ಕಾರದಿಂದ ಬ್ಯಾಂಕ್ ಖಾತೆಗೆ ಹಣ ತುಂಬಿ ಋಣಮುಕ್ತ ಸಾಲ  ಪ್ರಮಾಣ ಪತ್ರವನ್ನು ನೀಡಿದ್ದರಿಂದ ಅಂಜುಮನ್ ಸಂಸ್ಥೆಗೆ ಸರ್ಕಾರದ ವತಿಯಿಂದ ಶಾಸಕ ಎನ್.ಎಚ್.ಕೋನರಡ್ಡಿ ಸಂಸ್ಥೆ ಆಡಳಿತ ವರ್ಗಕ್ಕೆ ಋಣಮುಕ್ತ ಸಾಲದ ಪ್ರಮಾಣ ಪತ್ರ  ವಿತರಿಸಿದರು.

ಸರ್ವಧರ್ಮಗಳ ಸಮುದಾಯದ ಅಭಿವೃದ್ಧಿ ಕಾರ್ಯಗಳಿಗೆ ಸಹಾಯ, ಸಹಕಾರ, ನೀಡುವುದಾಗಿ ಭರವಸೆ ಕೊಟ್ಟರು. ವಕ್ಪ ಸಚಿವ ಜಮೀರ ಅಹ್ಮದ್ ಪಟ್ಟಣದ ಮುಸ್ಲಿಂ ಸಮುದಾಯದ ಖಬರಸ್ಥಾನ ಅಭಿವೃದ್ಧಿಗೆ 20 ಲಕ್ಷ ರೂಗಳನ್ನು ಈಗಾಗಲೇ ಮಂಜೂರ ಮಾಡಿದ್ದಾರೆ. ಅಂಜುಮನ್ ಸಂಸ್ಥೆ ಅಭಿವೃದ್ಧಿಗೆ ಶಾಸಕರ ಅನುದಾನದಡಿಯಲ್ಲಿ 15 ಲಕ್ಷ ರೂಗಳನ್ನು ಶೀಘ್ರದಲ್ಲಿ ನೀಡುವುದಾಗಿ ಹೇಳಿದರು. ಅಂಜುಮನ್ ಸಂಸ್ಥೆ ಆಡಳಿತ ಮಂಡಳಿ ಶಾಸಕ ಎನ್.ಎಚ್.ಕೋನರಡ್ಡಿ ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಎ.ಆಯ್.ನಡಕಟ್ಟಿನ, ಸಂಸ್ಥೆ ಅಧ್ಯಕ್ಷ ಪಕ್ರುಅಲಿ ಲೋಕಾಪುರ, ರಫೀಕ ಬಡಿಗೇರ, ಅಸೀಪ್ ಗುಳೇದಗುಡ್ಡ ಹಸನಸಾಬ ಗೂಡನಾಯ್ಕರ, ಹಸನಸಾಬ ಗುಡ್ಡದ, ಅಹ್ಮದ ಕಾಗದಗಾರ, ಶೇಖ ಅಹ್ಮದ ಶೇಖಸನದಿ, ಮಾಬುಸಾಬ ಖುದ್ದಣ್ಣವರ, ಇಬ್ರಾಹಿಂ ಲೋಕಾಪುರ, ಅಮೀನ ನಡಕಟ್ಟಿನ ಹರಜರೇಸಾಬ ಸುಂಕದ, ದಾವಲಸಾಬ ಮುಳಗುಂದ, ಬಾಬಾಜಾನ ಮುಲ್ಲಾನವರ, ಚಾಂದೂಸಾಬ ಧಾರವಾಡ, ಹಟೇಲಸಾಬ ಗಾಡಗೊಳಿ,  ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.  

MLA N.H. Konaraddy distributed the government debt free loan certificate

ENL Annigeri: The Anjuman organization of the town had taken a loan from a nationalized bank for the construction of the Shadimahal building.  The development work of the organization was stunted as the money with principal and interest was increasing in the bank.  When Wakpa Minister Jameer Ahmed appealed about the financial distress of the organization, the government gave a debt-free loan certificate to the Anjuman organization by filling the bank account with money.

He promised to help, cooperate and give development works of the community of all religions.  Wakpa Minister Jameer Ahmed has already sanctioned Rs 20 lakh for the development of Khabarasthan for the Muslim community in the town.  He said that 15 lakh rupees will be given soon under the MLA grant for the development of the Anjuman organization.  The Anjuman Organization Governing Body honored MLA NH Konaraddy.
On this occasion Padma Shri awardee Dr. AI Nadakattina, Institute President Pakruali Lokapura, Rafika Badigera, Aseep Guledagudda Hasanasaba Goodanaykara, Hasanasaba Gudada, Ahmada Papgara, Sheikh Ahmada Shekhasanadi, Mabusaba Khuddannavara, Ibrahim Lokapura, Ameena Nadakattina Harjaresaba Sunka. Davalasabha Mulagunda, Babajana Mullanavara, Chandusaba Dharwad, Hatelasabha Gadagoli, members of the governing body were present.

Related posts

ಮದಗಜ: ಭರ್ಜರಿ ಟ್ರೇಲರ್,‌‌ ಶ್ರೀಮುರುಳಿ ಹೊಸ ಅವತಾರ, ಹಾಟ್ ಆಶಿಕಾ ಇಲ್ಲಿ ಹಳ್ಳಿ ಬೆಡಗಿ!

eNewsLand Team

ಸುಳ್ಳು ಭರವಸೆಗಳನ್ನು ಪಡಿತರದಲ್ಲಿ ವಿತರಿಸುವುದೊಂದೇ ಬಾಕಿ ಉಳಿದಿದೆ ಬಿಜೆಪಿಗೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

eNEWS LAND Team

ನಾಲ್ಕು ವರ್ಷ ಅಧಿಕಾರ ಮಾಡಿದ್ರೂ ಗುಂಡಿ ಮುಚ್ಚದ ಬಿಜೆಪಿ: ಸಿಎಂ ಸಿದ್ದು

eNewsLand Team