30 C
Hubli
ಮಾರ್ಚ್ 21, 2023
eNews Land
ಸಿನೆಮಾ ಸುದ್ದಿ

ಮದಗಜ: ಭರ್ಜರಿ ಟ್ರೇಲರ್,‌‌ ಶ್ರೀಮುರುಳಿ ಹೊಸ ಅವತಾರ, ಹಾಟ್ ಆಶಿಕಾ ಇಲ್ಲಿ ಹಳ್ಳಿ ಬೆಡಗಿ!

Listen to this article

ಇಎನ್ಎಲ್ ಫಿಲ್ಮ್ ಕ್ಲಬ್

ಸ್ಯಾಂಡಲ್ ವುಡ್ ನಲ್ಲಿ ಮದಗಜ ಹವಾ ಶುರುವಾಗಿದೆ. ಟ್ರೈಲರ್ ಬಿಡುಗಡೆ ಆದ ಒಂದೇ ಗಂಟೆಯಲ್ಲಿ ಒಂದು ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದೆ.

ಮಹೇಶ್ ಕುಮಾರ್ ನಿರ್ದೇಶನ, ಉಮಾಪತಿ ಶ್ರೀನಿವಾಸ್ ನಿರ್ಮಾಣದ ಮಾಡಿದ್ದಾರೆ. ರೋರಿಂಗ್ ಸ್ಟಾರ್  ಶ್ರೀಮುರಳಿ, ಆಶಿಕಾ ರಂಗನಾಥ್ ಬೆಡಗು, ಚಿಕ್ಕಣ್ಣ, ಶಿವರಾಜ್ ಕೆ.ಆರ್.ಪೇಟೆ ತೆರೆ ಮೇಲಿರುವ ಚಿತ್ರ ಈಗಾಗಲೇ ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ರವಿ ಬಸ್ರೂರು ಸಂಗೀತ ನೀಡಿದ್ದಾರೆ.

ಟ್ರೈಲರ್ ನಲ್ಲಿ ಬಿಜಿಎಂ‌ ಎಡಿಟಿಂಗ್ ಹಾಗೂ ಮೇಕಿಂಗ್ ಸ್ಟೈಲ್, ‘ಕ್ರೌರ್ಯದಲ್ಲಿ ಶಾಂತಿ ಇಷ್ಟ’ , ‘ದ್ವೇಷದಲ್ಲಿ ತಾಳ್ಮೆ ಇಷ್ಟ’ ಎಂಬ ಡೈಲಾಗು ವಿಶೇಷ ಎನಿಸುತ್ತದೆ. ಮಚ್ಚು, ಕುಡುಗೋಲಿಗಂಟಿದ ರಕ್ತ, ಮರದ ರೆಂಬೆಗೆ ಜೋತುಬಿದ್ದ ಶವಗಳ ರಾಶಿ, ಇವೆಲ್ಲದರ ಜೊತೆಗೆ ತಾಯಿ ಸೆಂಟಿಮೆಂಟ್ಸ್ ತುಣುಕುಗಳು, ಬಂಗಿ ಸೇದುವ ದ್ರಶ್ಯ ಶ್ರೀಮುರುಳಿ ಫ್ಯಾನ್ಸ್ ಕಣ್ಣು ಅರಳಿಸಿವೆ.

ಗ್ರಾಮೀಣ ಶೈಲಿಯಲ್ಲಿ ಆಶಿಕಾ ರಂಗನಾಥ ಮುದ್ದಾಗಿ ಕಾಣುತ್ತಲೆ ಇನ್ನೊಂದು ಕಡೆ ಸಿಗರೆಟ್ ಹೊಗೆ ಬಿಡುವ ಸೀನ್  ಭಿನ್ನವಾಗಿವೆ.

ಜಗಪತಿ ಬಾಬು, ಕೆಜಿಎಫ್ ಖ್ಯಾತಿಯ ಗರುಡ ರಾಮ್ ಗರ್ಜನೆ, ರಕ್ತದೋಕುಳಿಯ ತುಣುಕು ಇದು ಭರ್ಜರಿ ಮಾಸ್ ಚಿತ್ರ ಎನ್ನುವುದನ್ನು ಮತ್ತಷ್ಟು ಒತ್ತಿ ಹೇಳುತ್ತಿವೆ.

ಇಂತಹ ಮದಗಜ ಡಿ. 3 ರಂದು ಕನ್ನಡ ತೆಲುಗು, ತಮಿಳು ಭಾಷೆಯಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಸಲಿದ್ದಾನೆ.

ಟ್ರೇಲರ್ ನೋಡಲು ಕ್ಲಿಕ್ ಮಾಡಿ..

https://youtu.be/JI3zbyjRBNM

Related posts

ಕೆ ಎಸ್ ಎಲ್ ಯು: ಕುಲಪತಿ ಈಶ್ವರ ಭಟ್ಟಗೆ ಶಾಯಿ ಬಳಿದು ವಿದ್ಯಾರ್ಥಿಗಳ ಆಕ್ರೋಶ

eNewsLand Team

ಗೋಡೆಗೆ ಬಣ್ಣ ಬಳಿವಾಗ ಶಾಕ್: ಹುಬ್ಬಳ್ಳಿಯಲ್ಲಿ ಕಾರ್ಮಿಕ ಅಬ್ಬಾಸ್’ಅಲಿ ಸತ್ತಿದ್ದು, ಭಯಾನಕ!!

eNewsLand Team

ಡಿ. 18 ರಂದು ಮೆಗಾ ಲೋಕ ಅದಾಲತ್

eNEWS LAND Team