27 C
Hubli
ಮೇ 25, 2024
eNews Land
ಸುದ್ದಿ

ಸುಳ್ಳು ಭರವಸೆಗಳನ್ನು ಪಡಿತರದಲ್ಲಿ ವಿತರಿಸುವುದೊಂದೇ ಬಾಕಿ ಉಳಿದಿದೆ ಬಿಜೆಪಿಗೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

ಇಎನ್ಎಲ್ ಹುಬ್ಬಳ್ಳಿ: ನಾವು ಭಾರತಕ್ಕೆ ಒಳ್ಳೇಯ ದಿನಗಳನ್ನು ತರುತ್ತೇವೆ ನಿಮ್ಮ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆಂದು ಮತದಾರರನ್ನು ನಂಬಿಸಿ ಜನರಿಗೆ ಇಂಧನ ಗ್ಯಾಸ್ ಗಳ ಬೆಲೆ ಗಗನಕ್ಕೇರಿಸಿ ಜನರಿಗೆ ರಾಮರಾಜ್ಯದ ಸಿನಿಮಾ ತೋರಿಸಿ ಭ್ರಮನಿರಶನವಾಗುವಂತೆ ಆಡಳಿತ ಕೊಟ್ಟ ಇವರಿಂದ ಎಂದೂ ನಾಡು ಉದ್ಧಾರವಾಗೋಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಜಗದೀಶ್ ಶೆಟ್ಟರ್ ರವರ ಪ್ರಚಾರಾರ್ಥವಾಗಿ ಜವಳಿ ಗಾರ್ಡನ್ ನಲ್ಲಿ ಏರ್ಪಡಿಸಿದ ಪ್ರಚಾರ ಸಭೆಯನ್ನು ಉದ್ದೇಶಿಸಿ ಕೆಪಿಸಿಸಿ ಕಾರ್ಯಧ್ಯಕ್ಷ ಶ್ರೀಸಲೀಂ ಅಮ್ಮದ್ ರವರು ಹೇಳಿದರು ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ರಚಿಸುತ್ತಿದ್ದು ಜಗದೀಶ್ ಶೆಟ್ಟರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ದೆಹಲಿಯ ಎಲ್ಲ ಮುಖಂಡರು ಬಂದು ಕುಳಿತು ಶೆಟ್ಟರಿಗೆ ಮತ ಹಾಕಬೇಡಿ ಎಂದರೂ ಸಹ ಈ ಭಾಗದ ಜನತೆ ಶೆಟ್ಟರ ಅವರನ್ನು ಬಹುಮತದಿಂದ ಗೆಲ್ಲಿಸುತ್ತಾರೆ ಎಂದು ಹೇಳಿದರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ ಮತಯಾಚಿಸಿ ಏಳನೇಯ ಬಾರಿಗೆ ನನಗೆ ಆಶೀರ್ವಾದಿಸಿ ಏಳೇಳು ಜನ್ಮದಲ್ಲಿಯೂ ಬಿಜೆಪಿಗೆ ಮತ ಹಾಕಬಾರದೆಂದು ಮನವಿ ಮಾಡಿದರು ಧಾರವಾಡ ಗ್ರಾಮಾಂತರ ಜಿಲ್ಲಾಧ್ಯಕ್ಷ  ಅನಿಲ್ ಕುಮಾರ ಪಾಟೀಲ ಮಾತನಾಡಿ ಶೆಟ್ಟರ ಗೆಲುವು ನಿಶ್ಚಿತ ಎಂದು ಹೇಳಿದರು. ಪಾಲಿಕೆ ಮಾಜಿ ಸದಸ್ಯ ಮೋಹನ ಹಿರೇಮನಿ ಪಾಲಿಕೆಯ ವಿರೋಧ ಪಕ್ಷದ ನಾಯಕ ದೊರೈರಾಜ ಮನಿಕುಂಟ್ಲ, ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ, ನೂರಅಹ್ಮದ್ ನದಾಫ, ಚಂದ್ರಕಾಂತ ಯಾದವ, ರಾಜು ಅಂಬೋರೆ, ಮೋಹನ ಹೊಸಮನಿ, ನದಾಫ ವಕೀಲರು ಉಪಸ್ಥಿತರಿದ್ದರು ಯುವ ಕಾಂಗ್ರೆಸ್ ಮುಖಂಡ ರೆಹಾನ್ ಐನಾಪುರಿ ಕಾರ್ಯಕ್ರಮ ಆಯೋಜಿಸಿ ಸ್ವಾಗತಿಸಿದರು.

Related posts

ಅಣ್ಣಿಗೇರಿ ಪುರಸಭೆ ಚುನಾವಣೆ ಅಖಾಡಕ್ಕೆ ಆಮ್ ಆದ್ಮಿ- ಸಂತೋಷ ನರಗುಂದ

eNewsLand Team

ರೆಡ್ ರೋಸ್ ಕೊಡಲು ಹೋಗಿ, ಪೊಲೀಸರ ಅತಿಥಿಯಾದ ಕಾಂಗ್ರೆಸಿಗರು

eNEWS LAND Team

ನೌಕರರಲ್ಲಿ ಉಲ್ಲಾಸ ಮತ್ತು ಚೈತನ್ಯ ಪಡೆಯಲು ಸಾಂಸ್ಕøತಿಕ ಸ್ಪರ್ಧೆಗಳು ಅಗತ್ಯ: ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ

eNEWS LAND Team