27.8 C
Hubli
ನವೆಂಬರ್ 12, 2024
eNews Land
ಸಣ್ಣ ಸುದ್ದಿ

ಅಣ್ಣಿಗೇರಿ: ಶಾoತಿಯುತ ವಿಕೆಂಡ್ ಕರ್ಪ್ಯೂ

ಇಎನ್ಎಲ್ ಅಣ್ಣಿಗೇರಿ: ಕೋವಿಡ್ 3ನೇ ಅಲೆ ವ್ಯಾಪಿಸಿದ ಹಿನ್ನಲೆಯಲ್ಲಿ ಸರ್ಕಾರ, ಆರೋಗ್ಯ ಇಲಾಖೆ ಜನರ ಆರೋಗ್ಯ ಹಿತದೃಷ್ಟಿಯಿಂದ ವಿಕೆಂಡ್ ಕರ್ಪ್ಯೂ ಜಾರಿಗೆ ತಂದಿದ್ದು, ಆ ನಿಮಿತ್ಯ ಮಾರ್ಕೆಟ್, ಹಾಗೂ ಇನ್ನೀತರ ವಾರ್ಡಗಳಲ್ಲಿಯ ದಿನಸಿ ಅಂಗಡಿಗಳು ಮಾತ್ರ ತೆರೆದಿದ್ದವು. ಆಸ್ಪತ್ರೆ, ಮೆಡಿಕಲ್ ಶಾಪ್, ಬಸ್ ನಿಲ್ದಾಣ, ರೇಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಜನಸಂದಣಿ ಮಾತ್ರ ಕಂಡುಬoತು.


ಜನೇವರಿ 8 ಮತ್ತು 9ರಂದು ಜರುಗಬೇಕಾದ ದಾಸೋಹಮಠದ ಅದ್ದೂರಿ ಜಾತ್ರಾ ಮಹೋತ್ಸವಕ್ಕೆ ಬ್ರೇಕ್ ಹಾಕಿದ ಪರಿಣಾಮ ಮಠದ ಸದ್ಭಕ್ತರು ಪಾಲ್ಗೊಂಡಿರಲಿಲ್ಲ. ತಾಲೂಕಾಡಳಿತ ಕೋವಿಡ ಕಟ್ಟುನಿಟ್ಟಿನ ನಿಯಮಗಳನ್ನು ಸಾರ್ವಜನಿಕರು ಪಾಲಿಸುವಲ್ಲಿ ಕ್ರಮಕೈಗೊಂಡಿದ್ದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರ ಇದ್ದಿಲ್ಲ. ಇನ್ನೀತರ ಅಂಗಡಿ ಮುಗ್ಗಟ್ಟುಗಳು ಬಂದ್ ಆದ ಪರಿಣಾಮ ಜನಸಂದಣಿ ಪ್ರದೇಶಗಳು ಬೀಕೋ ಎನ್ನುತ್ತಿದ್ದವು.
ಪಟ್ಟಣದ ಶಾಲಾ ಕಾಲೇಜುಗಳು, ಸರ್ಕಾರಿ ಕಛೇರಿಗಳು, ರಾಷ್ಟಿಕೃತ ಬ್ಯಾಂಕಗಳು, ಇನ್ನೀತರ ಸಂಘಸoಸ್ಥೆಗಳ ಕಛೇರಿಗಳು ಬಂದ್ ಆಗಿದ್ದವು.ಕೋವಿಡ್ 3ನೇ ಅಲೆಯಿಂದ ಸಾರ್ವಜನಿಕರು ತಮ್ಮ ಆರೋಗ್ಯ ಕಡೆಗೆ ಗಮನ ಹರಿಸುತ್ತಿರುವ ಲಕ್ಷಣಗಳು ಕಂಡುಬoತು. ಪೋಲಿಸ್ ಇಲಾಖೆ ಬಂದೊಬಸ್ತ್ ವ್ಯವಸ್ಥೆ ಮಾಡಿತ್ತು.
ರೈತರು, ಕೂಲಿಕಾರ್ಮಿಕರು, ಮಹಿಳೆಯರು, ಕೃಷಿ ಚಟುವಟಿಕೆ ಕೆಲಸ ಕಾರ್ಯದಲ್ಲಿ ತೊಡಗಿದ್ದರು.ಮಕ್ಕಳು ಮನೆಯಿಂದ ಹೊರಗೆ ಆಟಕ್ಕೆ ಬರದಂತೆ ಪಾಲಕರು ತಡೆವೊಡ್ಡಿದಂತೆ ಪಟ್ಟಣದಲ್ಲಿ ಕಂಡುಬoತು.ಬೈಕ್ ಸವಾರರು, ಖಾಸಗಿ ವಾಹನಗಳ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು. ಅಟೋರಿಕ್ಷಾಗಳು ಮಾತ್ರ ಅಗತ್ಯ ಸೇವೆಗನುಗುಣವಾಗಿ ಸಂಚರಿಸುತ್ತಿದ್ದವು.

Related posts

ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸೂಚನೆ: ಜಿ.ಪಂ.ಸಿಇಓ ಡಾ.ಬಿ.ಸುಶೀಲಾ

eNEWS LAND Team

ಮನೆ ಮನೆಗೆ ಗಂಗೆ ಉತ್ತಮ ಯೋಜನೆ: ಸಿ.ಎಂ.ನಿಂಬಣ್ಣವರ

eNEWS LAND Team

ನಾವಳ್ಳಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ  

eNewsLand Team