34 C
Hubli
ಏಪ್ರಿಲ್ 19, 2024
eNews Land
ಸುದ್ದಿ

ಬಿಪಿನ್ ರಾವತ್ ದುರಂತದ ಬಳಿಕ ಹುಬ್ಬಳ್ಳಿಯಲ್ಲಿ ಆತಂಕ ಸೃಷ್ಟಿಸಿದ ವಿಮಾನ! ಸಿಎಂ, ಸೆಂಟ್ರಲ್ ಮಿನಿಸ್ಟರ್ ವಿಮಾನದಲ್ಲಿ ಇದ್ರು.!!

ಇಎನ್ಎಲ್ ಧಾರವಾಡ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿದ್ದ ವಿಮಾನ
ಹವಾಮಾನ ವೈಪರೀತ್ಯದಿಂದ ವಿಮಾನ ಲ್ಯಾಂಡ್ ಆಗದೆ 24 ನಿಮಿಷಗಳ ಕಾಲ ಆಗಸದಲ್ಲಿ ಸುತ್ತು ಹೊಡೆದ ಘಟನೆ ಹುಬ್ಬಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಸಿಡಿಎಸ್ ಬಿಪಿನ್ ರಾವತ್ ಅವರ ದುರ್ಮರಣದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಶುಕ್ರವಾರ ಬೆಳಗ್ಗೆ ಬೆಂಗಳೂರಿಂದ ಬೆಳಗ್ಗೆ 6:5ಕ್ಕೆ ಹೊರಟ ಇಂಡಿಗೋ 6E7227 ( AT76) ವಿಮಾನ ಹುಬ್ಬಳ್ಳಿಯಲ್ಲಿ 7:30ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ, ದಟ್ಟವಾದ ಮಂಜು ಆವರಿಸಿದ್ದರಿಂದ ಲ್ಯಾಂಡ್ ಆಗಲು ಸಾಧ್ಯವಾಗಲಿಲ್ಲ. ಸುಮಾರು 500 ಮೀಟರ್ ವರೆಗೆ ವಿಸಿಬಲಿಟಿ ಇರಲಿಲ್ಲ.

ವಿಮಾನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಒಟ್ಟಾರೆ 22 ಪ್ರಯಾಣಿಕರು ಇದ್ದರು.

ಅಕಾಶದಲ್ಲೇ 3 ಸುತ್ತುಗಳನ್ನು ಸುತ್ತಿದ ವಿಮಾನ ಅಂತಿಮವಾಗಿ 24 ನಿಮಿಷಗಳ ಬಳಿಕ ಲ್ಯಾಂಡ್ ಆಯಿತು.

ಈ ಬಗ್ಗೆ ಇಎನ್ಎಲ್ ಜೊತೆಗೆ ಮಾತನಾಡಿದ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ್ ಠಾಕ್ರೆ, ದಟ್ಟವಾಗಿ ಮಂಜು ಮುಸುಕಿದ ಕಾರಣ ಲ್ಯಾಂಡ್ ಸಮಸ್ಯೆ ಆಗಿತ್ತು‌. ಲೋ ಕ್ಲೌಡ್ ಇಳಿದ ಬಳಿಕ ಎಟಿಸಿ ಮೂಲಕ ಸಿಗ್ನಲ್ ನೀಡಿ ಪೈಲಟಿಗೆ ಲ್ಯಾಂಡ್ ಮಾಡುವಂತೆ ತಿಳಿಸಿದೆವು ಎಂದರು.

Related posts

ಕರ್ನಾಟಕಕ್ಕೆ ಕಂಚು ತಂದ ಅಣ್ಣಿಗೇರಿಯ ಹುಡುಗ

eNEWS LAND Team

ಎಲ್ಲರೂ ಸೇರಿ ಅಭಿವೃದ್ಧಿ ಕೆಲಸ ಮಾಡೋಣ: ಗ್ರಾಪಂ ಅಧ್ಯಕ್ಷೆ ಶಿವಕ್ಕ ಮಾರುತಿ ಗೌಡ್ರ

eNEWS LAND Team

ತಾಂತ್ರಿಕ ದೋಷ: ಕಾರ್ಯಕಾರಿಣಿಗೆ‌ ಸಿಎಂ ಬರೋದು ಲೇಟಾಗತ್ತೆ

eNEWS LAND Team