31 C
Hubli
ಏಪ್ರಿಲ್ 26, 2024
eNews Land
ಸುದ್ದಿ

ಸುರಕ್ಷಿತವಾಗಿರಿ ಎನ್ನತ್ತಲೇ 2ಲಕ್ಷ ದೋಚಿದ್ರು! ಹುಬ್ಬಳ್ಳಿಲಿ ಯಾರನ್ನ ನಂಬೇಕು? ಯಾರನ್ನ ಬಿಡಬೇಕು?

ಇಎನ್ಎಲ್ ಧಾರವಾಡ: ಹುಬ್ಬಳ್ಳಿಯ ಅಕ್ಷಯ ಕಾಲನಿ ನಿವಾಸಿ ಎಸ್.ಎಂ.ಹುಲಮನಿ ಅವರಿಗೆ ಕರೆ ಮಾಡಿದ ಕಳ್ಳರು ಸೈಬರ್ ಕ್ರೈಮ್ ಬಗ್ಗೆ ಎಚ್ಚರಿಕೆ ವಹಿಸಿ, ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಿ ಎಂದು ನಂಬಿಸಿ 2.85 ಲಕ್ಷ ರುಪಾಯಿ ವಂಚನೆ ಮಾಡಿದ್ದಾರೆ.

ಅವರಿಗೆ ಕಳೆದ ಮಾ.24ರಂದು ರಂದು ಮದ್ಯಾಹ್ನ 04-07 ಗಂಟೆಯಿಂದ 05-17 ಗಂಟೆಯ ನಡುವಿನ ಅವಧಿಯಲ್ಲಿ ಆರೋಪಿತರು ಮೊಬೈಲ ನಂ. 8917895209, 7618963261 ಹಾಗೂ +18604195555 ರಿಂದ ಫೋನ್ ಮಾಡಿ ಸೈಬರ್ ಅಪರಾಧಗಳ ಬಗ್ಗೆ ಮುಂಜಾಗ್ರತೆ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಇದನ್ನು ಓದಿ

ಹುಬ್ಬಳ್ಳಿ ಟೆಕ್ಕಿಗೆ 7.50ಕೋಟಿ ಪಂಗನಾಮ!! ದುರ್ಗದ ಬೈಲಲ್ಲಿ ಕತ್ತರಿಸುವುದಾಗಿ ಕೊಲೆ ಬೆದರಿಕೆ..

ಅಲ್ಲದೇ ತಾವು ಬ್ಯಾಂಕಿನವರೆಂದು ನಂಬಿಸಿ ಎಕ್ಸಸ್ ಬ್ಯಾಂಕ ಕ್ರೆಡಿಟ್ ಕಾರ್ಡ ಕ್ರೇಡಿಟ್ ಲಿಮಿಟ್ ಜಾಸ್ತಿ ಮಾಡಿಕೊಡುತ್ತೇವೆ ಹಾಗೂ ರಿವಾರ್ಡ್ ಪಾಯಿಂಟ್’ಗಳನ್ನು ನಗದೀಕರಣ ಗೊಳಿಸಿಕೊಡುತ್ತೇವೆ ಎಂದು ಅವರ ಮೊಬೈಲದಲ್ಲಿ Cardonlineapplication.com/axisbank ಲಿಂಕ್ ನ್ನು ಒಪನ್ ಮಾಡಿಸಿ ಫಿರ್ಯಾದಿಯ ಕ್ರೇಡಿಟ್ ಕಾರ್ಡ್’ದಿಂದ ರೂ. 2,85,000/- ಹಣದ ವ್ಯವಹಾರ ಮಾಡಿ ವಂಚಿಸಿದ್ದಾರೆ ಎಂದು ಹುಬ್ಬಳ್ಳಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 ‘ಆ’ ಚಿತ್ರಕ್ಕೆ ನಿಮ್ಮ ಫೋಟೊ..! ಲೋನ್ ಆ್ಯಪ್ ಡೌನ್ಲೋಡ್ ಮಾಡೋ ಮೊದ್ಲು ಎಚ್ಚರ! ಧಾರವಾಡ ಮಹಿಳೆಗೆ ಆಗಿದ್ದೇನು??

Related posts

ಮಜೇಥಿಯಾ ಫೌಂಡೇಶನ್: ಕೆಸಿಟಿಆರ್‌ಐ ಕ್ಯಾಂಪಸ್‌ನ ಹಾಸ್ಪೈಸ್ ರಮಿಲಾ ಪ್ರಶಾಂತಿ ಮಂದಿರದಲ್ಲಿ ಜಾಗತಿಕ ಶಸ್ತ್ರಚಿಕಿತ್ಸಾ ದಿನಾಚರಣೆ

eNEWS LAND Team

ನೈಋತ್ಯ ರೈಲ್ವೆಯಿಂದ ಬೆಂಕಿ ಅನಾಹುತಗಳನ್ನು ಕುರಿತು ಜಾಗೃತಿ ಆಯೋಜನೆ

eNEWS LAND Team

ಹುಬ್ಬಳ್ಳಿಯಲ್ಲಿ ಅಕ್ರಮ ಮದ್ಯದ ಅಮಲು!

eNewsLand Team