ಇಎನ್ಎಲ್ ಹುಬ್ಬಳ್ಳಿ: ಸಾಫ್ಟ್‌ವೇರ್ ಹಾಗೂ ಐಟಿ ಕಂಪನಿಯ ವಿವಿಧ ಪ್ರಾಜೆಕ್ಟ್ ನೀಡುವುದಾಗಿ ಸಿಬಿಟಿ ಕಿಲ್ಲಾದ ಉದ್ಯಮಿ ವಿನೋದ ರಾಥೋಡ್ ಅವರಿಂದ ಕೋಟ್ಯಂತರ ರುಪಾಯಿ ಪಡೆದು ವಂಚಿಸಿ ಬಳಿಕ ಜೀವ ಬೆದರಿಕೆ ಹಾಕಿದ ನಾಲ್ವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪೆಹೆಲೆ ಲೋನ್ ಲೋ, ಬಾದ್ ಮೆ ಸೆಕ್ಸ್ ವರ್ಕರ್ ಲೋ..? ಏನಿದು ಸೈಬರ್ ಕ್ರೈಮ್ ಹಾವಳಿ!!
ಸ್ಥಳೀಯ ನಿವಾಸಿಗಳಾದ ಅಮಿತ್ ಪ್ರಭು, ಅಂಕಿತಾ ಕಾಮತ್, ಬೆಂಗಳೂರಿನ ದೀಪಕ ಸುಂದರರಾಜನ್ ಮತ್ತು ಹೈದರಾಬಾದ್‌ನ ಶ್ರವಣಕುಮಾರ ವಂಚಿಸಿದ ಆರೋಪಿಗಳು.
ಇದನ್ನೂ ಓದಿ:ಪುನೀತ್ ಪುತ್ಥಳಿ ಅನಾವರಣ ಮಾಡಿದ ಸಿಎಂ ಬೊಮ್ಮಾಯಿ
ವಿನೋದ ರಾಥೋಡ್, ಅಮಿತ್ ಪ್ರಭು ಹಾಗೂ ಅಂಕಿತಾ ಕಾಮತ್ ಇವರು ಪಾರ್ಟನರ್‌ಷಿಪ್ ಆಧಾರದ ಮೇಲೆ 2019ರಲ್ಲಿ ಕೊಪ್ಪಿಕರ ರಸ್ತೆಯ ಸೆಟ್ಲಲೈಟ್ ಬಿಲ್ಡಿಂಗ್‌ನಲ್ಲಿ ಬಿಎಲ್‌ಎಚ್ ಹೈಟೆಕ್ ಪ್ರೈ.ಲಿ. ಆರಂಭಿಸಿದ್ದರು. ಸಿಂಗಪುರದಲ್ಲಿ ಪ್ರಾಜೆಕ್ಟ್ ಇದ್ದು, ಅದನ್ನು ಪಡೆಯಲು ಹಣ ಬೇಕಾಗುತ್ತದ ಎಂದು ವಿನೋದ ಅವರಿಂದ ಅಮಿತ್ ಹಾಗೂ ಅಂಕಿತಾ ₹15 ಲಕ್ಷ ಪಡೆದುಕೊಂಡಿದ್ದರು. ಹೀಗೆ ಬೇರೆ ಬೇರೆ ಪ್ರಾಜೆಕ್ಟ್ ಹೆಸರಿನಲ್ಲಿ ಹಾಗೂ ಇತರೆ ವೆಚ್ಚ ಎಂದು ಮೂವರೂ ಶ್ರವಣಕುಮಾರ ಜೊತೆ ಸೇರಿ ವಿನೋದ ಅವರಿಂದ 3.50 ಕೋಟಿಗೂ ಹೆಚ್ಚು ಹಣ ಪಡೆದಿದ್ದರು. 2020ರ ಡಿಸೆಂಬರ್ ಅಂತ್ಯದೊಳಗೆ ಪ್ರಾಜೆಕ್ಟ್ ಆರಂಭಿಸದಿದ್ದರೆ ಆ ಹಣವೆಲ್ಲ ಮರಳಿಸುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: ‘ಆ’ ಚಿತ್ರಕ್ಕೆ ನಿಮ್ಮ ಫೋಟೊ..! ಲೋನ್ ಆ್ಯಪ್ ಡೌನ್ಲೋಡ್ ಮಾಡೋ ಮೊದ್ಲು ಎಚ್ಚರ! ಧಾರವಾಡ ಮಹಿಳೆಗೆ ಆಗಿದ್ದೇನು??
ವರ್ಷವಾದರೂ ಪ್ರಾಜೆಕ್ಟ್ ನೀಡಿಲ್ಲ ಎಂದು ಹಣ ಮರಳಿಸುವಂತೆ ವಿನೋದ ಅವರಲ್ಲಿ ಹೇಳಿದ್ದರು. ಆಗ ದೀಪಕ ಎಂಬಾತ ದುಋಗದ ಬಯಲಿಗೆ ಬಂದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಮನುಷ್ಯನಿಗೆ ಹೇಗೆಲ್ಲಾ ಸಾವು ಬರಬಹುದು? ಕಲಘಟಗಿಯಲ್ಲಿ ಬರ್ಬರವಾಗಿ ಅಪ್ಪಳಿಸಿದ ಮೃತ್ಯು!!