26 C
Hubli
ಏಪ್ರಿಲ್ 20, 2024
eNews Land
ಸುದ್ದಿ

ನೈಋತ್ಯ ರೈಲ್ವೆಯಿಂದ ಬೆಂಕಿ ಅನಾಹುತಗಳನ್ನು ಕುರಿತು ಜಾಗೃತಿ ಆಯೋಜನೆ

ಇಎನ್ಎಲ್ ಹುಬ್ಬಳ್ಳಿ : 

ನೈಋತ್ಯ ರೈಲ್ವೆ ಮೂರೂ ವಿಭಾಗಗಳಲ್ಲಿ ಕಳೆದ ತಿಂಗಳು ವ್ಯಾಪಕವಾದ ಅಗ್ನಿ ಸುರಕ್ಷತಾ ಜಾಗೃತಿ ಆಂದೋಲನವನ್ನು ಪ್ರಾರಂಭಿಸಲಾಗಿದೆ.

ಈ ಆಂದೋಲನದ ಅಂಗವಾಗಿ, ರೈಲು ಬಳಕೆದಾರರು ಹಾಗೂ ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕೆಲಸ ಮಾಡುವ ರೈಲ್ವೆ/ರೈಲ್ವೆಯೇತರ ಸಿಬ್ಬಂದಿಗಳಿಗೆ ರೈಲ್ವೆ ಕಾಯ್ದೆಯ ನಿಬಂಧನೆಗಳ ಅನುಸಾರ “ಧೂಮಪಾನ ನಿಷೇಧ”ವನ್ನು ಜಾರಿಗೊಳಿಸುವುದು, ದಹನಶೀಲ ವಸ್ತುಗಳ ಸಾಗಣೆಯನ್ನು ತಡೆಯುವುದು, ಇತ್ಯಾದಿ ಬೆಂಕಿ ಅನಾಹುತಗಳನ್ನು ತಡೆಗಟ್ಟಲು ಕೊಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ಕುರಿತು ತಿಳುವಳಿಕೆ ನೀಡುವ ಉಪಕ್ರಮಗಳನ್ನು ಕೈಗೊಂಡಿದೆ.

ಈ ಆಂದೋಲನದ ಸಂದರ್ಭದಲ್ಲಿ ರೈಲ್ವೆ ಕಾರ್ಯಾಚರಣೆ ಸಂಬಂಧಿತ ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಗೆ ಅಗ್ನಿಶಾಮಕ ಸಾಧನಗಳನ್ನು ಬಳಸುವ ತರಬೇತಿಯನ್ನು ನೀಡಲಾಗಿದೆ. ಈ ತರಬೇತಿಯನ್ನು ವಾಸ್ತವಿಕವಾಗಿ ಹಾಗೂ ಆಡಿಯೋ ವಿಡಿಯೋಗಳ ಮೂಲಕವೂ ನೀಡಲಾಗುತ್ತಿದೆ. ರೈಲಿನ ಸಿಬ್ಬಂದಿಗಳಿಗೆ ಮಾತ್ರವಲ್ಲದೆ ರೈಲ್ವೆ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೂ ಈ ತರಬೇತಿಯನ್ನು ನೀಡಲಾಗುತ್ತಿದೆ.
.
ನೈಋತ್ಯ ರೈಲ್ವೆಯ ಪ್ರಧಾನ ಮುಖ್ಯ ಸುರಕ್ಷತಾ ಅಧಿಕಾರಿ ಶ್ರೀ ಅಲೋಕ್ ತಿವಾರಿ ಅವರ ನೇತೃತ್ವದಲ್ಲಿ ಸುರಕ್ಷತಾ ವಿಭಾಗದ ವ್ಯಾಪಕ ಪ್ರಯತ್ನಗಳ ಫಲವಾಗಿ ಆಂದೋಲನದಲ್ಲಿ ಈ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು.

1. 131 ನಿಲ್ದಾಣಗಳು ಹಾಗೂ 35 ರೈಲುಗಳಲ್ಲಿ ಅಗ್ನಿ ಸುರಕ್ಷತಾ ಆಂದೋಲನವನ್ನು ಕೈಗೊಳ್ಳಲಾಯಿತು.
2. 10000 ಕ್ಕೂ ಹೆಚ್ಚಿನ ಸಿಬ್ಬಂದಿಗಳಿಗೆ (ರೈಲ್ವೆ ಸಿಬ್ಬಂದಿಗಳ ಶೇಕಡಾ 25 ಭಾಗ) ಅಗ್ನಿ ಸುರಕ್ಷತೆಯನ್ನು ಕುರಿತು ತಿಳುವಳಿಕೆ ನೀಡಲಾಯಿತು.
3. 17000 ಕ್ಕೂ ಹೆಚ್ಚಿನ ಪ್ರಯಾಣಿಕರಿಗೆ ಅಗ್ನಿ ಸುರಕ್ಷತೆಯನ್ನು ಕುರಿತು ತಿಳುವಳಿಕೆ ನೀಡಲಾಯಿತು.
4. ಸ್ಕೌಟ್ಸ್ ಮತ್ತು ಗೈಡ್ಸ್ ಗಳಲ್ಲದೆ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ, ಯಾಂತ್ರಿಕ ಮತ್ತು ವಾಣಿಜ್ಯ ವಿಭಾಗದ ಸಿಬ್ಬಂದಿ ಹಾಗೂ ನಾಗರೀಕ ರಕ್ಷಣೆ (ಸಿವಿಲ್ ಡಿಫೆನ್ಸ್) ಸಿಬ್ಬಂದಿಗಳು ಆಂದೋಲನಗಳಲ್ಲಿ ಪಾಲ್ಗೊಂಡರು.
5. 7000 ಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಅಗ್ನಿಶಾಮಕ ಸಾಧನಗಳ ಬಳಕೆಯ ನಿದರ್ಶನವನ್ನು ನೀಡಲಾಯಿತು.
6. 2300 ಪ್ರಯಾಣಿಕರು/ಸಾರ್ವಜನಿಕರಿಗೆ ಅಗ್ನಿಶಾಮಕ ಸಾಧನಗಳ ಬಳಕೆಯ ನಿದರ್ಶನವನ್ನು ನೀಡಲಾಯಿತು
7. 160 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಅಗ್ನಿಶಾಮಕ ಸಾಧನಗಳನ್ನು ಬಳಸುವ ತರಬೇತಿಯನ್ನು ನೀಡಲಾಯಿತು.
8. 42 ವಿಚಾರಸಂಕಿರಣಗಳನ್ನು ಆಯೋಜಿಸಲಾಯಿತು. .
9. 21000 ಜಾಗೃತಿ ಮೂಡಿಸುವ ಸಂದೇಶ(ಎಸ್ ಎಂ ಎಸ್)ಗಳನ್ನು ಕಳುಹಿಸಲಾಗಿದೆ.
10. ಮುದ್ರಣ ಹಾಗೂ ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಪ್ರಕಟಿಸಲಾಗಿದೆ.
11. 14000 ಕರಪತ್ರಗಳನ್ನು ಹಂಚಲಾಗಿದೆ.

ಧೂಮಪಾನ ಮಾಡದಿರುವುದು ಹಾಗೂ ದಹನಶೀಲ ವಸ್ತುಗಳನ್ನು ತಮ್ಮೊಂದಿಗೆ ಸಾಗಿಸಬಾರದು ಎಂಬ ಅಂಶಗಳ ಪ್ರಾಮುಖ್ಯತೆಯನ್ನು ಕುರಿತು ಒತ್ತಿ ಹೇಳಲಾಯಿತು. ಬೋಗಿಗಳಲ್ಲಿನ ತುರ್ತು ನಿರ್ಗಮನದ ಕಿಟಕಿಗಳ ಕಾರ್ಯಾಚರಣೆಯನ್ನು ಪ್ರಯಾಣಿಕರಿಗೆ ನಿದರ್ಶಿಸಿ ತೋರಿಸಲಾಯಿತು.

ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಶ್ರೀ ಸಂಜೀವ್ ಕಿಶೋರ್ ರವರು ರೈಲು ಬಳಕೆದಾರರು ಹಾಗೂ ಸಾರ್ವಜನಿಕರಲ್ಲಿ ರೈಲ್ವೆ ನಿಲ್ದಾಣಗಳು ಹಾಗೂ ರೈಲಿನಲ್ಲಿ ಬೆಂಕಿ ಅನಾಹುತಗಳನ್ನು ತಡೆಗಟ್ಟಲು ರೈಲ್ವೆಯೊಂದಿಗೆ ಸಹಕರಿಸಲು ಮನವಿ ಮಾಡಿಕೊಂಡಿದ್ದಾರೆ.

ಶ್ರೀ ಸಂಜೀವ್ ಕಿಶೋರ್ ರವರು ಏಪ್ರಿಲ್ 2021 ರಿಂದ ನವೆಂಬರ್ 2021 ರವರೆಗೆ ಪ್ರಯಾಣಿಕರು ಧೂಮಪಾನ ಮಾಡುತ್ತಿದ್ದ 1800 ಪ್ರಕರಣಗಳಿಂದ ರೂ.3,82,600ಗಳನ್ನು ದಂಡವಾಗಿ ಸಂಗ್ರಹಿಸಲಾಗಿದೆ ಮತ್ತು ದಹನಶೀಲ ವಸ್ತುಗಳನ್ನು ಸಾಗಿಸುತ್ತಿದ್ದ 5 ಪ್ರಕರಣಗಳನ್ನು ಗುರುತಿಸಿ ರೂ. 4500 ದಂಡ ಸಂಗ್ರಹಿಸಲಾಗಿದೆ.ಎಂದು ತಿಳಿಸಿದರು.

ಸಾಮಾಜಿಕ ಮಾಧ್ಯಮದ ಜಾಲತಾಣಗಳಲ್ಲಿನ ಪ್ರಚಾರದ ಜೊತೆಗೆ ಸಾರ್ವಜನಿಕ ಸೂಚನಾ ವ್ಯವಸ್ಥೆ ಹಾಗೂ ಸಮೂಹ ಮಾಧ್ಯಮಗಳ ಮೂಲಕವೂ ಪ್ರಕಟಣೆಗಳನ್ನು ನೀಡಲಾಗುತ್ತಿದೆ. ವ್ಯಾಪಕ ಜಾಗೃತಿಯನ್ನು ಮೂಡಿಸಲು ಅಗ್ನಿ ಸುರಕ್ಷತೆಯ ವಿಷಯಗಳನ್ನು ಕುರಿತ ವಿಡಿಯೋ ಹಾಗೂ ಮುದ್ರಣ ಜಾಹೀರಾತುಗಳನ್ನು ಸಹ ಪ್ರಕಟಿಸಲಾಗಿದೆ.
ರೈಲ್ವೆ ಆವರಣದಲ್ಲಿ ಮತ್ತು ಸಂಚಾರದಲ್ಲಿರುವ ರೈಲುಗಳಲ್ಲಿ ಪ್ರಯಾಣಿಕರು ಧೂಮಪಾನ ಮಾಡಬಾರದು ಎಂದು ನೈಋತ್ಯ ರೈಲ್ವೆ ಪ್ರಯಾಣಿಕರಲ್ಲಿ ಮಾಡುತ್ತದೆ, ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ.ವಿಜಯಾ ತಿಳಿದಿದ್ದಾರೆ.

Related posts

ರೈತರು ರಸ್ತೆ ಬಂದ್‌ಗೊಳಿಸಿ ಪ್ರತಿಭಟನೆ, ಬೆಳೆಹಾನಿ ಪರಿಹಾರಕ್ಕೆ ಆಗ್ರಹ!

eNEWS LAND Team

ಪಶ್ಚಿಮ ಶಿಕ್ಷಕರ ಕ್ಷೇತ್ರ: ಮತದಾರರ ಕರಡು ಪಟ್ಟಿ ಪ್ರಕಟ ಡಿ.27 ರವರೆಗೆ ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶ

eNEWS LAND Team

ಉಮ್ಮಳಿಸಿ ಬಂದ ದುಃಖ ತಡೆದು ಮಾತನಾಡಿದ ಸಿಎಂ; ಯಾಕೆ ಗೊತ್ತಾ? ಇದು ದೇಶದ ವಿಷ್ಯ!!

eNewsLand Team