ಇಎನ್ಎಲ್ ಧಾರವಾಡ: ಲೋನ್ ನೀಡುವ ರೋಪೇಲೋ ಆ್ಯಪ್ ಡೌನ್ಲೋಡ್ ಮಾಡಿದ ಮಹಿಳೆಗೆ ಕರೆ ಮಾಡಿದ ಸೈಬರ್ ಖದೀಮರು ಸಾಲ ತೀರಿಸದಿದ್ದರೆ ನಿಮ್ಮ ಫೋಟೊವನ್ನು ನೆಕೆಡ್ ಚಿತ್ರಕ್ಕೆ ಎಡಿಟ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ ಬಗ್ಗೆ ಹುಬ್ಬಳ್ಳಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಧಾರವಾಡದ ಸೈದಾಪುರದ 24 ವರ್ಷದ ಮಹಿಳೆ ಈಗ ಸಂಕಷ್ಟಕ್ಕೆ ಸಿಲುಕಿದ್ದು, ಪೊಲೀಸರ ನೆರವು ಕೋರಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಇವರು ರೋಪೇಲೋ ಆ್ಯಪ್ ಡೌನ್ಲೋಡ್ ಮಾಡಿದ್ದರು. ಮಾ. 26ರಂದು 7234960770, 8877531224, 638416842, 8320496469, 6496077575 ನಂಬರ್ ಗಳಿಂದ ಕರೆ ಮಾಡಿದ ಅಪರಿಚಿತ ನೀವು ಪಡೆದ ಆನ್ ಲೈನ್ ಲೋನನ್ನು ಮರಳಿ ತುಂಬಿರಿ. ಇಲ್ಲದಿದ್ದರೆ ನಿಮ್ಮ ಮೊಬೈಲಲ್ಲಿ ಇರುವ ಫೋಟೋಗಳನ್ನು ತಾವು ಪಡೆದಿದ್ದು, ಅವುಗಳಿಗೆ ನೆಕಡ್ ಫೋಟೋಗಳನ್ನು ಎಡಿಟ್ ಮಾಡಿ ನಿಮ್ಮ ಮೊಬೈಲದಲ್ಲಿ ಇರುವ ಕಾಂಟಾಕ್ಟ್ ನಂಬರಗಳಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರು ದಾಖಲಿಸಲಾಗಿದೆ.