23.9 C
Hubli
ಏಪ್ರಿಲ್ 1, 2023
eNews Land
ಆರೋಗ್ಯ ಜಿಲ್ಲೆ

ಮಾನಸಿಕ ಖಾಯಿಲೆಗಳಿಗೆ ಕಾರಣ ಏನು ಗೊತ್ತಾ? -ಡಾ. ಪಾಂಡುರಂಗಿ ಹೇಳಿದ ವಿಶೇಷ!!

Listen to this article

ಇಎನ್ಎಲ್ ಧಾರವಾಡ: ನಮ್ಮ ಸಮಾಜದಲ್ಲಿ ಮಾನಸಿಕ ಕಾಯಿಲೆಗಳ ಬಗ್ಗೆ ಮೂಢನಂಬಿಕೆಗಳಿವೆ. ಮಿದುಳಿನ ಒಳಭಾಗದ ರಸಾಯನಿಕ ಏರು ಪೇರಿನಿಂದ ಮಾನಸಿಕ ಖಾಯಿಲೆಗಳು ಉಂಟಾಗುತ್ತವೆ. ವಿಶ್ವದಾದ್ಯಂತ ಅಂದಾಜು ಶೇಕಡಾ 2 ರಿಂದ 3 ರಷ್ಟು ಜನರಲ್ಲಿ ಮಾನಸಿಕ ಖಾಯಿಲೆಯನ್ನು ಕಾಣಬಹುದಾಗಿದೆ ಎಂದು ಡಿಮ್ಹಾನ್ಸ್ ಮನೋರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಆದಿತ್ಯ ಪಾಂಡುರಂಗಿ ಹೇಳಿದರು.

ಧಾರವಾಡ ಮಾನಸಿಕ ಹಾಗೂ ನರವಿಜ್ಞಾನ ಸಂಸ್ಥೆಯ (ಡಿಮ್ಹಾನ್ಸ್) ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ವತಿಯಿಂದ ಇಂದು ವಿಶ್ವ ಬೈಪೆÇೀಲಾರ್ ದಿನಾಚರಣೆ ಕಾರ್ಯಕ್ರಮ ಜರುಗಿತು. ಈ ಹೊತ್ತಿಗಾಗಿ ಸಾಮಥ್ರ್ಯ ಮತ್ತು ನಾಳೆಗಾಗಿ ಭರವಸೆ ಎಂಬ ಧ್ಯೇಯ ವಾಕ್ಯದೊಂದಿಗೆ ದಿನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ. ಆದಿತ್ಯ ಪಾಂಡುರಂಗಿ ಅವರು, ಮಾನಸಿಕ ರೋಗದಲ್ಲಿ ಕೆಲವು ದಿವಸಗಳ ಕಾಲ ರೋಗಿ ಹೆಚ್ಚು ಮಾತನಾಡುವುದು, ನೀಗಲಾರದ ವಿಷಯಗಳಲ್ಲಿ ಆಸಕ್ತಿ ತೋರಿಸುವುದು, ಕೋಪಗೊಳ್ಳುವುದು, ಕೆಲವೊಮ್ಮೆ ದುಶ್ಚಟಗಳನ್ನು ಮಾಡುವುದು ಸಾಮಾನ್ಯವಾಗಿರುತ್ತದೆ. ಮಾನಸಿಕ ರೋಗದಿಂದ ಹೊರಬಂದ ನಂತರ ಕೆಲವು ದಿವಸಗಳ ಕಾಲ ಖಿನ್ನತೆಗೆ ಒಳಗಾಗಿ ಯಾವುದರಲ್ಲೂ ಆಸಕ್ತಿ ತೋರಿಸದೇ ದು:ಖಿತರಾಗಿ, ಜೀವನದಲ್ಲಿ ನಿರುತ್ಸಾಹಗೊಂಡು ಆತ್ಮಹತ್ಯೆಯ ವಿಚಾರಗಳನ್ನು ಕೂಡ ಮಾಡುತ್ತಾರೆ. ಇವು ಬೈಪೆÇೀಲಾರ್ ಮಾನಸಿಕ ಖಾಯಿಲೆಯ ಎರಡು ಮುಖಗಳಿದ್ದಂತೆ. ಉಳಿದಂತೆ ಅವರು ಯಾವುದೇ ರೋಗಲಕ್ಷಣಗಳಿಲ್ಲದೇ ಸಾಮಾನ್ಯ ಜೀವನ ನಡೆಸುತ್ತಾರೆ. ಈ ರೀತಿಯ ಭಾವನೆಗಳ ಏರುಪೇರಿನಿಂದ ಅನೇಕ ಜನರು, ರೋಗಪೀಡಿತ ವ್ಯಕ್ತಿಯು ಬೇಕೆಂದೇ ಈ ರೀತಿ ವರ್ತಿಸುತ್ತಾರೆ ಎಂದು ಭಾವಿಸುತ್ತಾರೆ. ಇವುಗಳನ್ನು ವೈಜ್ಞಾನಿಕ ದೃಷ್ಠಿಯಿಂದ ನೋಡಿ, ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದರೆ ರೋಗಿಗಳು ಗುಣಮುಖರಾಗಿ ಎಲ್ಲರಂತೆ ಸಮಾಜದ ಮುಖ್ಯವಾಹಿನಿಯಲ್ಲಿ ಬದುಕನ್ನು ನಡೆಸುತ್ತಾರೆ. ಮನೋವೈದ್ಯರ ಮಾರ್ಗದರ್ಶನದಂತೆ ಚಿಕಿತ್ಸೆ ಪಡೆಯುವುದು ಸೂಕ್ತ. ಅನೇಕ ಜನ ಈ ಲಕ್ಷಣಗಳು ಗುಣಮುಖವಾದ ನಂತರ ಮನೋವೈದ್ಯರ ಸಲಹೆ ಪಡೆಯದೇ ಚಿಕಿತ್ಸೆಯನ್ನು ಬಿಟ್ಟುಬಿಡುತ್ತಾರೆ. ಆಗ ರೋಗದ ಲಕ್ಷಣಗಳು ಮರುಕಳಿಸಿ ಬರುವ ಸಾಧ್ಯತೆಗಳಿರುತ್ತವೆ. ಮಾನಸಿಕ ರೋಗವನ್ನು ನಿಯಂತ್ರಿಸಲು ವೈದ್ಯರಲ್ಲಿ ವಿಶ್ವಾಸವಿಟ್ಟುಕೊಳ್ಳುವುದು ಬಹಳ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಮನೋವೈದ್ಯಕೀಯ ಸಮಾಜಕಾರ್ಯ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಎಂ.ಫಿಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮನೋವೈದ್ಯಕೀಯ ಸಮಾಜಕಾರ್ಯಕರ್ತ ಅಶೋಕ ಕೋರಿ ಸ್ವಾಗತಿಸಿದರು. ಪ್ರಶಾಂತ ಪಾಟೀಲ ವಂದಿಸಿದರು.

**************

Related posts

ಧಾರವಾಡ: 26ನೇಯ ರಾಷ್ಟ್ರೀಯ ಯುವಜನೋತ್ಸವಕ್ಕೆ ಭರ್ಜರಿ ಸಿದ್ಧತೆ

eNewsLand Team

ರಾಜ್ಯದಲ್ಲಿ ಒಮಿಕ್ರಾನ್ ಕುರಿತು ತಜ್ಞರ ಸಭೆ ನಾಳೆ, ಹೊಸ ಮಾರ್ಗಸೂಚಿ ಜಾರಿಗೆ ಕ್ರಮ: ಬೊಮ್ಮಾಯಿ‌

eNewsLand Team

ಅಣ್ಣಿಗೇರಿ: ಪುರಸಭೆ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ

eNewsLand Team