24 C
Hubli
ಸೆಪ್ಟೆಂಬರ್ 27, 2023
eNews Land
ಜಿಲ್ಲೆ

ಧಾರವಾಡ : ಕಸಾಪ ಮತದಾನ ಬಿರುಸು

ಇಎನ್ಎಲ್ ಧಾರವಾಡ

ಕಸಾಪ ಜಿಲ್ಲಾಧ್ಯಕ್ಷ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಮತದಾನ ಬಿರುಸಿನಿಂದ ನಡೆದಿದ್ದು,  ಧಾರವಾಡ ಕರ್ನಾಟಕ ಕಾಲೇಜು ಮತ ಕೇಂದ್ರದಲ್ಲಿ ನಾಡೋಜ ಚನ್ನವೀರ ಕಣವಿ ಅವರು ಮತ ಚಲಾಯಿಸಿದರು.

ಧಾರವಾಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾಲ್ವರು ಸ್ಪರ್ಧಿಸಿದ್ದು ಅಂತಿಮವಾಗಿ ಮೂರನೇ ಬಾರಿ ತಮ್ಮ ಅದೃಷ್ಟ ಪಣಕ್ಕಿಟ್ಟಿರುವ ಡಾ. ಲಿಂಗರಾಜ ಅಂಗಡಿ ಹಾಗೂ ಶಿಕ್ಷಕ, ಜಾನಪದ ತಜ್ಞ ಡಾ. ರಾಮು ಮೂಲಗಿ ಮಧ್ಯೆ ನೇರ ಪೈಪೋಟಿ ಇದೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಗರಾಜ ಕಿರಣಗಿ ರಾಮು ಮೂಲಗಿ ಅವರಿಗೆ ಬೆಂಬಲ ಸೂಚಿಸಿದ್ದಾರೆ. ಇನ್ನೊಬ್ಬ ಅಭ್ಯರ್ಥಿ ವಿಜಯಕುಮಾರ ಕಮ್ಮಾರ ಕಣದಲ್ಲಿದ್ದಾರೆ.

ಡಾ. ಲಿಂಗರಾಜ ಅಂಗಡಿ ಅವರು ಈಗಾಗಲೇ ಎರಡು ಬಾರಿ ಅಧ್ಯಕ್ಷರಾಗಿದ್ದು ಈ ಅವಧಿಯಲ್ಲಿ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಹ ಮಾಡಿದ್ದಾರೆ. ಹೀಗಾಗಿ ಈ ಬಾರಿ ಡಾ. ರಾಮು ಮೂಲಗಿ ಅವರಿಗೆ ಅವಕಾಶ ಮಾಡಿಕೊಡಬೇಕು ಎಂದು ಮತದಾರರು ತೀರ್ಮಾನಿಸಿದರೆ ರಾಮು ಮೂಲಗಿ ಅವರಿಗೆ ಜಯ ಖಂಡಿತ. ಇದೊಂದು ಬಾರಿ ಲಿಂಗರಾಜ ಅಂಗಡಿ ಅವರೇ ಮುಂದುವರೆಯಲಿ, ಮತ್ತಷ್ಟು ಕೆಲಸಗಳನ್ನು ಮಾಡಲಿ ಎಂದು ಅಂಗಡಿ ಪರವಾಗಿಯೇ ಜೈ ಎಂದರೆ ಲಿಂಗರಾಜ ಅಂಗಡಿ ಸತತವಾಗಿ 3 ನೇ ಬಾರಿ ಅಧ್ಯಕ್ಷಗಾದಿ ಏರುವುದು ನಿಶ್ಚಿತ. ಇವರಿಬ್ಬರ ಮಧ್ಯೆ ವಿಜಯಕುಮಾರ ಕಮ್ಮಾರ ತುಸು ಮಟ್ಟಿಗೆ ಸ್ಪರ್ಧೆಯಲ್ಲಿದ್ದು, ಮತದಾರರು ಯಾರ ಪರ ಒಲವು ತೋರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಧಾರವಾಡದ ಕರ್ನಾಟಕ ಕಲಾ ಕಾಲೇಜು ಡಿಪಾರ್ಟ್‌ಮೆಂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ 2 ಮತಗಟ್ಟೆ ಸ್ಥಾಪಿಸಲಾಗಿದೆ. ಅಳ್ಳಾವರ ಪಟ್ಟಣ ಪಂಚಾಯಿತಿ ಕಾರ್ಯಾಲಯ, ಹುಬ್ಬಳ್ಳಿಯ ಹಸೀಲ್ದಾರ್ ಕಾರ್ಯಾಲಯದಲ್ಲಿ ಮೂರು ಮತಗಟ್ಟೆಗಳಿವೆ.
ಕುಂದಗೋಳದಲ್ಲಿ ತಹಸೀಲ್ದಾರ್ ಕೆಲವು ಕಾರ್ಯಾ ಲಯ, ನವಲಗುಂದದಲ್ಲಿ ತಹಸೀಲ್ದಾರ್ ಕಾರ್ಯಾಲಯ, ಅಣ್ಣಿಗೇರಿಯ ತಹಸೀಲ್ದಾರ್‌ ಕಾರ್ಯಾ ಬೆಳಗಿನ ಲಯ ಮತ್ತು ಕಲಘಟಗಿಯ ತಹಸೀಲ್ದಾರ ಕಚೇರಿಯಲ್ಲಿ ಸೇರಿ ಒಟ್ಟು 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಧಾರವಾಡ ತಾಲೂಕು 1790, ಅಳ್ಳಾವರ ತಾಲೂಕು 154, ಹುಬ್ಬಳ್ಳಿ ನಗರ 1512, ಹುಬ್ಬಳ್ಳಿ ಗ್ರಾಮಿಣ 88, ಸೀರೆ ಕುಂದಗೋಳ ತಾಲೂಕು 755, ನವಲಗುಂದ ತಾಲೂಕು 303, ಅಣ್ಣಿಗೇರಿ ತಾಲೂಕು 388, ಕಲಘಟಗಿ 209 ಸೇರಿ ಒಟ್ಟು 5,199 ಮತದಾರರಿದ್ದಾರೆ.

ಇಂದೇ ಮತ ಎಣಿಕೆ ಸಹ ನಡೆಯಲಿದ್ದು ಸಂಜೆ ಹೊತ್ತು ಫಲಿತಾಂಶ ಬೆಳಗಿದ ಸಿಗುವ ಸಾಧ್ಯತೆಗಳಿವೆ. ಚುನಾವಣಾ ಕಾರ್ಯಕ್ಕೆ ಈಗಾಗಲೇ ಚುನಾವಣಾ ಸಿಬ್ಬಂದಿ ನೇಮಕ ಮಾಡಿದ್ದು, ತರಬೇತಿಯನ್ನು ಸಹ ನೀಡಲಾಗಿದೆ.

Related posts

ಅಣ್ಣಿಗೇರಿ: ಮನಕುಲದ ಶ್ರೇಷ್ಠ ದಾರ್ಶನಿಕ ಕನದಾಸರು- ಡಾ.ಬಿ.ಎನ್.ಹೊಸಮನಿ

eNewsLand Team

ಕುಮಾರಸ್ವಾಮಿ ಸಿಎಂ ಆಗೋದು ತಪ್ಪಿಸಲು ಸಾಧ್ಯವಿಲ್ಲ: ಹುಣಸಿಮರದ

eNewsLand Team

ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಆರಂಭ

eNewsLand Team