34 C
Hubli
ಫೆಬ್ರವರಿ 28, 2024
eNews Land
ಜಿಲ್ಲೆ

ವಿವಿಧ ಅನುದಾನದಡಿ ಹುಧಾ ಒಳ ರಸ್ತೆ ಅಭಿವೃದ್ಧಿ; ಶೆಟ್ಟರ್

ಇಎನ್ಎಲ್ ಹುಬ್ಬಳ್ಳಿ: ಪಾಲಿಕೆ, ಕೇಂದ್ರ ರಸ್ತೆ ನಿಧಿ, ಲೋಕೋಪಯೋಗಿ, ಸ್ಮಾರ್ಟ್ ಸಿಟಿ ಸೇರಿದಂತೆ ವಿವಿಧ ಅನುದಾನದಡಿ ಮುಂದಿನ ಆರು ತಿಂಗಳ ಒಳಗಾಗಿ ಹುಬ್ಬಳ್ಳಿ ಧಾರವಾಡ ಅವಳಿ ನಗರದ ಎಲ್ಲಾ ಒಳ ರಸ್ತೆಗಳ ಅಭಿವೃದ್ಧಿ ಪಡಿಸಲು ಚಿಂತಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ್ ಹೇಳಿದರು.

ಹುಬ್ಬಳ್ಳಿ ಸುಳ್ಳ ರಸ್ತೆಯ ಮನೋಜ ಪಾರ್ಕ್‌ನ, ಪೂರ್ಣಗೊಂಡ ನವೀಕೃತ ಮುಖ್ಯ ರಸ್ತೆ ಡಾಂಬರೀಕರಣ ಹಾಗೂ ಕುಡಿಯುವ ನೀರಿನ ಪೈಪಲೈನ್ ಕಾಮಗಾರಿ ಉದ್ಘಾಟಿಸಿ ಅವರು ಮಾತನಾಡಿದರು.

ಹುಬ್ಬಳ್ಳಿಯನ್ನು ಸುಸಜ್ಜಿತ ಹಾಗೂ ಸುಂದರ ನಗರವನ್ನಾಗಿಸುವ ಕನಸಿದೆ. ಹಲವಾರು ಕಾಮಗಾರಿಗಳು ಪೂರ್ಣಗೊಂಡಿದ್ದು, ಅಭಿವೃದ್ಧಿಯ ಬದಲಾವಣೆ ಜನರ ಗಮನಕ್ಕೆ ಬರಲಿದೆ. ಮಹಾನಗರ ಪಾಲಿಕೆಗೆ ಹೊಸದಾಗಿ ಚುನಾಯಿತ ಪ್ರತಿನಿಧಿಗಳು ಆಯ್ಕೆಯಾಗಿ ಬಂದಿದ್ದಾರೆ. ಶೀಘ್ರವಾಗಿ ಪಾಲಿಕೆ ಜನಪ್ರತಿನಿಧಿಗಳ ಬಾಡಿ ಅಸ್ತಿತ್ವಕ್ಕೆ ಬರಲಿದೆ. ಅವಳಿ ನಗರದ ಎಲ್ಲಾ ಬಡಾವಣೆಗಳಿಗೆ 24*7 ಕುಡಿಯುವ ನೀರು ಸರಬರಾಜು ಮಾಡುವ ಕಾರ್ಯ ಆರಂಭವಾಗಲಿದೆ. ನಗರದಲ್ಲಿ ಹಂದಿಗಳ ಉಪಟಳ ತಪ್ಪಿಸಲು ಪಾಲಿಕೆ ಆಯುಕ್ತರು ಹೈದರಾಬಾದ್‌ನಿಂದ ತಂಡವನ್ನು ಕರೆತಂದು, ಹಂದಿ ಸರೆ ಕಾರ್ಯಾಚರಣೆ ಆರಂಭಿಸಲಿದ್ದಾರೆ. ಹೆದ್ದಾರಿ ಸಂಪರ್ಕಿಸುವ ಸುಳ್ಳ ರಸ್ತೆಯನ್ನು ಸಹ ಅಭಿವೃದ್ಧಿ ಪಡಿಸಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಭೀರಪ್ಪ ಖಾಂಡೇಕರ್, ಸಂತೋಷ ಚವ್ಹಾಣ್, ಆನಂದ ಬೇಂಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

*ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ*

15 ಲಕ್ಷ ವೆಚ್ಚದಲ್ಲಿ ಗೊಕುಲ ರಸ್ತೆಯ ಅಕ್ಷಯ ಪಾರ್ಕ್‌ ಬಡಾವಣೆ ಒಳರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ 14.80 ಲಕ್ಷ ವೆಚ್ಚದ ರುದ್ರಗಂಗಾ ಲೇ ಔಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಜಗದೀಶ್ ಶೆಟ್ಟರ್ ಭೂಮಿ ಪೂಜೆ ನೆರವೇರಿಸಿದರು.

*ಕಾರ್ಮಿಕರಿಗೆ ಕಿಟ್ ವಿತರಣೆ*

ಕೃಷ್ಣಾ ನಗರದ ನೂತನ ಕಾರ್ಮಿಕ ಭವನದಲ್ಲಿ ಜಗದೀಶಗ ಶೆಟ್ಟರ್ ಕಟ್ಟಡ ಕಾರ್ಮಿಕರಿಗೆ ಮೇಸನ್ ಕಿಟ್, ಕೋವಿಡ್ ಇಮ್ಯುನಿಟಿ ಬೂಸ್ಟರ್ ಹಾಗೂ ಸ್ಯಾನಿಟೈಸರ್ ಕಿಟ್ ವಿತರಿಸಿದರು.

ಈ ಸಂದರ್ಭದಲ್ಲಿ ಧಾರವಾಡ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಶ್ವೇತಾ.ಎಸ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ಮತ ಎಣಿಕೆ: ಬಂದೋಬಸ್ತ್’ಗೆ 548 ಪೊಲೀಸರ ನೇಮಕ: ಪೊಲೀಸ್ ಕಮೀಷನರ್ ರಮಣ ಗುಪ್ತ

eNEWS LAND Team

ನರೇಗಾ : ಧಾರವಾಡದಲ್ಲಿ ಶೇ.91 ರಷ್ಟು ಸಾಧನೆ ಮಾಡಲಾಗಿದೆ: ಸಿಇಒ

eNewsLand Team

ಭಜರಂಗಿಗಳು ಸಿಡಿದೆದ್ದರೆ ಕಾಂಗ್ರೆಸ್ ದೇಶಬಿಟ್ಟು ಹೋಗಬೇಕಾಗುತ್ತೆ: ಸಿಎಂ ಬೊಮ್ಮಾಯಿ

eNEWS LAND Team