29 C
Hubli
ಸೆಪ್ಟೆಂಬರ್ 26, 2023
eNews Land
ಕ್ರೀಡೆ

ಭಾರತಕ್ಕೆ ಕ್ಲೀನ್ ಸ್ವೀಪ್ ಗುರಿ

ತಂಡದಲ್ಲಿ ಬದಲಾವಣೆ ನಿರೀಕ್ಷೆ | ರಾಹುಲ್ ಬದಲು ಋತುರಾಜ್

ಇಎನ್ಎಲ್ ಸ್ಪೋರ್ಟ್ಸ್ ಬ್ಯೂರೋ

ಕೋಲ್ಕತಾ: ‌ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಕೈವಶ ಮಾಡಿಕೊಂಡ ಭಾರತ ತಂಡ ಭಾನುವಾರ ಈಡನ್ ಗಾರ್ಡನ್ಸ್ ನಲ್ಲಿ ನಡೆಯಲಿರುವ 3ನೇ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

ನಾಯಕ ರೋಹಿತ್ ಶರ್ಮಾ ತಂಡದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದೆ. ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಸಿಗದ ಆಟಗಾರರಿಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಗುವ ನಿರೀಕ್ಷೆ ಇದೆ.

ಟೆಸ್ಟ್ ಸರಣಿ ಆಡಲಿರುವ ಕೆ.ಎಲ್. ರಾಹುಲ್‌ಗೆ ವಿಶ್ರಾಂತಿ ನೀಡಿ ಋತುರಾಜ್ ಗಾಯಕ್ವಾಡ್‌ಗೆ ಸ್ಥಾನ ನೀಡಬಹುದು. ರಿಷಭ್ ಪಂತ್ ಬದಲು ಇಶಾನ್ ಕಿಶನ್, ಭುವನೇಶ್ವರ್ ಕುಮಾರ್ ಇಲ್ಲವೇ ದೀಪಕ್ ಚಹರ್ ಬದಲಿಗೆ ಆವೇಶ್ ಖಾನ್, ಅಕ್ಷರ್ ಪಟೇಲ್ ಬದಲಿಗೆ ಯಜುವೇಂದ್ರ ಚಹಲ್‌ಗೆ ಸ್ಥಾನ ಸಿಗುವ ನಿರೀಕ್ಷೆ ಇದೆ. ಆರ್.ಅಶ್ವಿನ್ ಟಿ20 ತಂಡಕ್ಕೆ ವಾಪಸಾಗಿರುವುದು ತಂಡದ ಬಲ ಹೆಚ್ಚಿಸಿದೆ.

ಕಿವೀಸ್ ಗೆ ವೈಟ್ ವಾಶ್ ಭೀತಿ:
ಟಿ20 ವಿಶ್ವಕಪ್ ಫೈನಲ್‌ ಆಡಿದ ಮರು ದಿನವೇ ಭಾರತಕ್ಕೆ ಆಗಮಿಸಿ ಟಿ20 ಸರಣಿಯಲ್ಲಿ ಪಾಲ್ಗೊಂಡ ನ್ಯೂಜಿಲೆಂಡ್ ವೈಟ್‌ವಾಶ್ ತಪ್ಪಿಸಿಕೊಳ್ಳಲು ಹೋರಾಡಬೇಕಿದೆ.
ನಾಯಕ ವಿಲಿಯಮ್ಸ್ ಅನುಪಸ್ಥಿತಿಯಲ್ಲಿ ಕಿವೀಸ್ ಬ್ಯಾಟಿಂಗ್ ಪಡೆ ದುರ್ಬಲವಾದಂತೆ ತೋರುತ್ತಿದೆ. ಟೆಸ್ಟ್ ಸರಣಿಗೂ ಮುನ್ನ ನ್ಯೂಜಿಲೆಂಡ್ ಗೆಲುವು ಸಾಧಿಸಿ ಆತ್ಮವಿಶ್ವಾಸ ಮಾಡಿಸಿಕೊಳ್ಳಬೇಕಿದೆ.

ಹೇಗಿದೆ ಪಿಚ್ ?

ಸಂಜೆ ಬಳಿಕ ಇಬ್ಬನಿ ಬೀಳುವ ಕಾರಣ ಟಾಸ್ ಪ್ರಮುಖ ಪಾತ್ರ ವಹಿಸಲಿದೆ. ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಎರಡನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಲಾಭ ಹೆಚ್ಚು.

Related posts

ಯಾರೀತ ಭಾರತದ 71ನೇ ಗ್ರ್ಯಾಂಡ್‌ಮಾಸ್ಟರ್?

eNEWS LAND Team

ಟಿ-20 ಸರಣಿ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಜಯ

eNewsLand Team

ರೋ’ಹಿಟ್’ ನಾಯಕತ್ವದಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯಾವಳಿ

eNEWS LAND Team