ಇಎನ್ಎಲ್ ಸ್ಪೋರ್ಟ್ಸ್ ಬ್ಯೂರೋ
ಐಎಸ್‌ಎಲ್ ಟೂರ್ನಿಯ ಎಂಟನೇ ಆವೃತ್ತಿಯಲ್ಲಿ ಎಸ್‌ಸಿ ಈಸ್ಟ್ ಬೆಂಗಾಲ್ ತಂಡ ತನ್ನ ಮೊದಲ ಪಂದ್ಯವನ್ನು ಗೋವಾದ ತಿಲಕ್ ಮೈದಾನದಲ್ಲಿ ಜೆಮ್ಶೆಡ್‌ಪುರ ಎಫ್‌ಸಿ ವಿರುದ್ಧ ಭಾನುವಾರ ಸೆಣೆಸಲಿದೆ
ಕಳೆದ ಬಾರಿ ಈಸ್ಟ್ ಬೆಂಗಾಲ್ 20 ಪಂದ್ಯಗಳ ಪೈಕಿ ಕೇವಲ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಈ ಮೂಲಕ ಲೀಗ್ ಹಂತದ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿತ್ತು.
ಜೆಮ್ಶೆಡ್‌ಪುರ ಕಳೆದ ಆವೃತ್ತಿಯಲ್ಲಿ ಅಮೋಘ ಆಟವಾಡಿತ್ತು. ಕೇವಲ ನಾಲ್ಕು ಪಾಯಿಂಟ್‌ಗಳಿಂದ ಸೆಮಿಫೈನಲ್ ಅವಕಾಶ ಕಳೆದುಕೊಂಡಿದ್ದ ತಂಡ ಒಟ್ಟಾರೆ ಆರನೇ ಸ್ಥಾನ ಗಳಿಸಿತ್ತು.