31 C
Hubli
ಏಪ್ರಿಲ್ 26, 2024
eNews Land
ರಾಜ್ಯ

ರಾಜ್ಯದ ಆರು ಪ್ರಾದೇಶಿಕ ಸ್ಥಳಗಳಲ್ಲಿ ಚಿತ್ರ ಕಲಾ ಗ್ಯಾಲರಿ ಪ್ರಾರಂಭ: ಬೊಮ್ಮಾಯಿ

ಇಎನ್ಎಲ್ ಬೆಂಗಳೂರು: ಇಡೀ ಕರ್ನಾಟಕದ ಚಿತ್ರಕಲೆಗೆ ತವರೂರು ಚಿತ್ರಕಲಾ ಪರಿಷತ್ತು. ಇದು ಎಲ್ಲೆಡೆ ವ್ಯಾಪಿಸಬೇಕೆಂಬ ಉದ್ದೇಶವಿದೆ. ಆರು ಪ್ರಾದೇಶಿಕ ಸ್ಥಳಗಳಲ್ಲಿ ಚಿತ್ರ ಕಲಾ ಗ್ಯಾಲರಿಗಳನ್ನು ಪ್ರಾರಂಭಿಸಲು ಕ್ರಮ‌ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕರ್ನಾಟಕ ಚಿತ್ರಕಲಾ ಪರಿಷತ್ತು ವತಿಯಿಂದ ಆಯೋಜಿಸಿದ್ದ ಚಿತ್ರಸಂತೆಯ 19ನೇ ಆವೃತ್ತಿನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾಯತ್ತ ಸಂಸ್ಥೆಯಾಗಿರುವ ಚಿತ್ರ ಕಲಾ ಪರಿಷತ್ತನ್ನು ಡೀಮ್ಡ್ ವಿಶ್ವವಿದ್ಯಾಲಯ ಮಾಡಬೇಕೆಂಬ ಬೇಡಿಕೆ ಇದ್ದು, ಬರುವ ಅಧಿವೇಶನದಲ್ಲಿ ಡೀಮ್ಡ್ ವಿಶ್ವವಿದ್ಯಾಲಯವೆಂದು ಘೋಷಿಸಲು ಕ್ರಮ ವಹಿಸಲಾಗುವುದು. ಇದರಡಿಯಲ್ಲಿ ಹಲವಾರು ಸಂಸ್ಥೆಗಳನ್ನು ತಂದು ಚಿತ್ರಕಲೆಗೆ ಹೊಸ ಆಯಾಮ ನೀಡುವ ಕೆಲಸವನ್ನು ಬಿ.ಎಲ್.ಶಂಕರ್ ಅವರ ನೇತೃತ್ವದಲ್ಲಿ ಮಾಡಲಾಗುವುದು ಎಂದರು.

*ಅಭೂತಪೂರ್ವ ಕಲ್ಪನೆ*
ಚಿತ್ರಸಂತೆ ಒಂದು ಅಭೂತಪೂರ್ವ ಕಲ್ಪನೆ. ಹಲವಾರು ಉದಯೋನ್ಮುಖ ಕಲಾವಿದರಿದ್ದಾರೆ. ಕಲೆ ಎನ್ನುವುದು ಪ್ರತಿ ಮನುಷ್ಯನೊಳಗಿರುವ ಪ್ರತಿಭೆ. ಕೆಲವು ಕಲೆ ಕುಲಧರ್ಮದಿಂದ ಬಂದಿರುತ್ತವೆ. ವಿಶ್ವಕರ್ಮ ಜನಾಂಗದವರು ಪಂಚ ಕಲೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ ಎಂದರು.

*ಚಿತ್ರಸಂತೆ ಕಲೆಗೆ ಬೆಲೆ ಕೊಡುವ ಪ್ರಯೋಗ*
ಕಲೆ ನಮ್ಮೊಂದಿದ್ದರೆ ಅದಕ್ಕೆ ಬೆಲೆ ಇರುವುದಿಲ್ಲ. ಸಾರ್ವಜನಿಕ ವಾಗಿ ಜಗತ್ತಿಗೆ ತಿಳಿದರೆ ಕಲೆಗೆ ಬೆಲೆ ಬರುತ್ತದೆ. ಚಿತ್ರಸಂತೆ ಕಲೆಗೆ ಬೆಲೆ ಕೊಡುವ ಪ್ರಯೋಗ ಲಕ್ಷಾಂತರ ಜನ ವೀಕ್ಷಿಸುತ್ತಾರೆ, ಸ್ಫೂರ್ತಿ ಪಡೆಯುತ್ತಾರೆ. ಕಲಾವಿದರಿಗಂತೂ ಉತ್ತಮ ಪ್ರತಿಕ್ರಿಯೆ ಬಹಳ ಮುಖ್ಯ.

ಕಲೆಯಲ್ಲಿ ಕ್ರಿಟಿಕ್ ಎಂಬ ವರ್ಗವಿದೆ. ಸೃಷ್ಟಿಕರ್ತನಿಗೇ ಪರಿಪೂರ್ಣತೆ ಸಾಧ್ಯವಾಗಿಲ್ಲ. ಹಾಗಾಗಿ ಕ್ರಿಟಿಕ್ ಗಳ ಟೀಕೆಗೆ ಹೆಚ್ಚು ಗಮನ ನೀಡಬೇಕಿಲ್ಲ. ನಮ್ಮಲ್ಲಿ ಸುಧಾರಣೆ ತರಲು ಇದ್ದಾರೆ. ಕಲಾವಿದನಿಗೆ ತನ್ನ ಕಲೆಯ ಬಗ್ಗೆ ಸಮಾಧಾನ ಮತ್ತು ತೃಪ್ತಿ ಇರಬೇಕು. ಆಗ ಮಾತ್ರ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯ ಎಂದರು.

*ಕಲಾವಿದರು ಮತ್ತು ಕಲಾ ಪೋಷಕರ ಸಂಗಮ*
ಕಲಾವಿದರು ಮತ್ತು ಕಲಾ ಪೋಷಕರ ಸಂಗಮವಾದ ಚಿತ್ರಕಲಾ ಸಂತೆ 2 ವರ್ಷಗಳ ನಂತರ ನಡೆಯುತ್ತಿದೆ. ಇದು ಅದ್ಭುತವಾದ ಚಿತ್ರಸಂತೆ. ಇದು ನಿರಂತವಾಗಿ ನಡೆಯಬೇಕು. ಇದಕ್ಕೆ ನಮ್ಮ ಸರ್ಕಾರ ಎಲ್ಲಾ ಸಾಂಸ್ಕೃತಿಕ, ಸಾಹಿತ್ಯಿಕ, ಮತ್ತು ಕಲೆಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತದೆ. ಸಂಸ್ಕೃತಿ ಬಹಳ ಮುಖ್ಯ. ನಾಗರೀಕತೆ ಎನ್ನುವುದು ನಮ್ಮ ಬಳಿ ಇರುವುದು. ನಾವೇನಾಗಿದ್ದೇವೋ ಅದು ಸಂಸ್ಕೃತಿ. ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳಲು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಿಂದ ಮಾತ್ರ ಸಾಧ್ಯ. ಅದನ್ನು ಉಳಿಸಿ ಬೆಳೆಸಿಕೊಂಡು ಹೋದಾಗ ಈ ದೇಶದ ಅಂತಃಸ್ವತ ಉಳಿಯುತ್ತದೆ. ನಮ್ಮ ದೇಶದ ಅಸ್ಮಿತೆ ಉಳಿಯುತ್ತದೆ ನಮ್ಮ ಸಂಸ್ಕೃತಿಯಿಂದಲೇ ನಾವು ವಿಶ್ವದಲ್ಲಿಯೇ ಭಿನ್ನವಾಗಿ ನಿಲ್ಲುತ್ತೇವೆ. ಅದಕ್ಕಾಗಿ ಇದನ್ನು ಕಾಪಾಡಿಕೊಂಡು ಹೋಗಬೇಕು. ಚಿತ್ರಸಂತೆ ಯಶ್ವಸ್ವಿಯಾಗಲಿ ಎಂದು ಹಾರೈಸಿದರು. ಕನ್ನಡದ ಜಗತ್ತನ್ನೇ ಚಿತ್ರಸಂತೆ ತೆರೆದಿದೆ. ಸ್ವಾತಂತ್ರೋತ್ಸವದ 75ನೇ ವರ್ಷಾಚರಣೆಯಲ್ಲಿ ಇದನ್ನು ಆಯೋಜಿಸಿರುವುದು ಆತ್ಮಾವಲೋಕವನ್ನು ಮಾಡಿಕೊಳ್ಳಲು ಸಕಾಲ ಎಂದರು.

*ಚಿತ್ರಕಲಾ.ಪರಿಷತ್ತಿನ ಬೆಳವಣಿಗೆ*
ಬಿ.ಎಲ್ ಶಂಕರ್ ಏನೇ ಮಾಡಿದರೂ ಅರ್ಥಪೂರ್ಣವಾಗಿ, ಅದರ ಹಿಂದೆ ಒಂದು ನೀತಿಯನ್ನು ಇಟ್ಟುಕೊಂಡು ಮಾಡಿಕೊಂಡು ಬಂದಿದ್ದಾರೆ. ಚಿತ್ರ ಕಲಾ ಪರಿಷತ್ತು ಅವರ ನೇತೃತ್ವದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ವಲಯದಲ್ಲಿ ಬೆಳೆಯುತ್ತಿದೆ. ಕೆಲವೇ ಕೆಲವು ಜನರಿಗೆ ಸೀಮಿತವಾಗಿದ್ದ ಚಿತ್ರಕಲಾ ಪರಿಷತ್ತಿನ ಬಾಗಿಲನ್ನು ಸಾರ್ವಜನಿಕರಿಗೆ ತೆರೆದು ಮುಕ್ತ ಗೊಳಿಸಿದ ಶ್ರೇಯಸ್ಸು ಬಿ.ಎಲ್.ಶಂಕರ್ ಹಾಗೂ ಅವರ ತಂಡದ ಸದಸ್ಯರಿಗೆ ಸೇರುತ್ತದೆ ಎಂದರು.

ವಿಂಡ್ಸರ್ ಮ್ಯಾನರ್ ವೃತ್ತದಿಂದ ಶಿವಾನಂದ ವೃತ್ತದವರೆಗೆ ಆಯೋಜಿಸಲಾಗಿದ್ದ ಚಿತ್ರಸಂತೆ ಯಲ್ಲಿ ದೇಶ-ವಿದೇಶದ ಕಲಾವಿದರು ಪ್ರದರ್ಶಿಸಿದ ಕಲಾಕೃತಿಗಳನ್ನು ಮುಖ್ಯಮಂತ್ರಿಗಳು ವೀಕ್ಷಿಸಿ ಕಲಾವಿದರಿಗೆ ಪ್ರೋತ್ಸಾಹಿಸಿದರು.

ಈ ಸಂದರ್ಭದಲ್ಲಿ ಐಸ್ ಕ್ರೀಮ್ ಮಾರಾಟಮಾಡುತ್ತಿರುವುದನ್ನು ಗಮನಿಸಿದ ಅವರು, ತಮಗೆ ಬಾಲ್ಯದಿಂದಲೂ ಇಷ್ಟವಾದ ಜಾಯ್ ಮ್ಯಾಂಗೋ ಕ್ರೀಮ್ ಐಸ್ ಕ್ಯಾಂಡಿಯನ್ನು ತಾವೇ ಹಣ ಪಾವತಿಸುವ ಮೂಲಕ ಖರೀದಿಸಿ ಸಂತೋಷದಿಂದ ಸವಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿತ್ರಸಂತೆ – 2022 ಕಾರ್ಯಕ್ರಮಕ್ಕೆ ಭಾರತಾಂಬೆ ಕಲಾಕೃತಿ ಪಕ್ಕ ಹಸ್ತಾಕ್ಷರ ಹಾಕುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಚಿವರಾದ ಡಾ. ಅಶ್ವತ್ಥನಾರಾಯಣ, ಎಸ್ ಟಿ ಸೋಮಶೇಖರ್, ಶಾಸಕ ರಿಜ್ವಾನ್ ಅರ್ಷದ್, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿಎಲ್ ಶಂಕರ್ , ಮಾಜಿ ಸಚಿವೆ ರಾಣಿ ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts

ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ‘ಬಿಜೆಪಿ ಪ್ರಜಾ ಪ್ರಣಾಳಿಕೆ’ ಪೂರಕ: ಜೆ.ಪಿ.ನಡ್ಡಾ

eNEWS LAND Team

ಗೋವಾದಲ್ಲಿ ಕನ್ನಡ ಭವನ : ಸಿಎಂ ಬೊಮ್ಮಾಯಿ

eNEWS LAND Team

ಉತ್ತಮ ಬೆಂಗಳೂರು ಹಾಗೂ ಬಿಯಾಂಡ್ ಬೆಂಗಳೂರು ಅಭಿವೃದ್ಧಿ ನಮ್ಮ ಯೋಜನೆ: ಸಿಎಂ ಬೊಮ್ಮಾಯಿ

eNewsLand Team