ಹತ್ತು ವಿಕೆಟ್ ಕಬಳಿಸಿ ಕುಂಬ್ಳೆ ದಾಖಲೆ ಸರಿಗಟ್ಟಿದ ಕಿವೀಸ್ ಬೌಲರ್ ಅಜಾಜ್ ಪಟೇಲ್| ಮಯಾಂಕ್ 150 ರನ್ ಮೈಲುಗಲ್ಲು
ಇಎನ್ಎಲ್ ಸ್ಪೋರ್ಟ್ಸ್ ಕ್ಲಬ್
ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಕೇವಲ 62ರನ್ನಿಗೆ ನ್ಯೂಜಿಲೆಂಡ್ ಆಲೌಟ್ ಮಾಡಿದ ಟೀಂ ಇಂಡಿಯಾ, ದಿನದಂತ್ಯಕ್ಕೆ 332 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.
ತನ್ನ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿರುವ ಭಾರತ 69 ರನ್ ಕಲೆಹಾಕಿ ಯಾವುದೇ ವಿಕೆಟ್ ಕಳೆದುಕೊಳ್ಳದೇ ಉತ್ತಮ ಹಂತದಲ್ಲಿದೆ.
ಪಂದ್ಯದ ಮೊದಲನೇ ದಿನದಾಟದಂತ್ಯಕ್ಕೆ ಅಮೋಘ ಶತಕ ಸಿಡಿಸಿ ಅಜೇಯರಾಗಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ 6ನೇ ಕ್ರಮಾಂಕದ ವೃದ್ಧಿಮಾನ್ ಸಹಾ 53 ಎಸೆತಗಳಲ್ಲಿ ಅಜೇಯ 25 ರನ್ ಗಳಿಸಿದ್ದರು. ಹೀಗೆ ಮೊದಲನೇ ದಿನದಾಟಕ್ಕೆ 221 ರನ್ ಗಳಿಸಿತ್ತು.
ಎರಡನೇ ದಿನದಾಟ ಆರಂಭವಾದ ಕೆಲವೇ ಸಮಯದಲ್ಲಿ ಅಜಾಜ್ ಪಟೇಲ್ ಅವರಿಗೆ ವೃದ್ಧಿಮಾನ್ ವಿಕೆಟ್ ಒಪ್ಪಿಸಿದರು. ನಂತರ ರವಿಚಂದ್ರನ್ ಅಶ್ವಿನ್ ಶೂನ್ಯ ಸುತ್ತಿದರೆ, ಅಕ್ಷರ್ ಪಟೇಲ್ 52 ರನ್ ಕಲೆ ಹಾಕಿದರು. ಇನ್ನುಳಿದಂತೆ ಜಯಂತ್ ಯಾದವ್ 12 ಮತ್ತು ಮೊಹಮ್ಮದ್ ಸಿರಾಜ್ 4 ರನ್ ಕಲೆ ಹಾಕಿದರು.ಇನ್ನೊಂದು ಕಡೆ ಗಟ್ಟಿಯಾಗಿ ನಿಂತು ಉತ್ತಮ ಹೊಡೆತದ ಮೂಲಕ ಮಯಾಂಕ್ ಅಗರವಾಲ್ ಅಮೋಘ 150 ರನ್ ಬಾರಿಸಿ ಅಜಾಜ್ ಪಟೇಲ್ ಅವರಿಗೆ ವಿಕೆಟ್ ಒಪ್ಪಿಸಿದರು.
ಹೀಗೆ ಭಾರತ ಮೊದಲನೇ ಇನ್ನಿಂಗ್ಸ್‌ನಲ್ಲಿ 325 ರನ್‌ಗಳಿಗೆ ಆಲ್ ಔಟ್ ಆಯಿತು. ಭಾರತದ ಎಲ್ಲಾ ಹತ್ತು ವಿಕೆಟ್ ಕಿತ್ತ ಅಜಾಜ್ ಪಟೇಲ್ ಅಪರೂಪದ ಸಾಧನೆಗೆ ಕ್ರಿಕೆಟ್ ದಿಗ್ಗಜರು ಶಭಾಶ್ ಎಂದರು.
Welcome to the club #AjazPatel #Perfect10 Well bowled! A special effort to achieve it on Day1 & 2 of a test match. #INDvzNZ
— Anil Kumble (@anilkumble1074) December 4, 2021
ಆದರೆ, ಮೊದಲ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ಭಾರತೀಯ ಬೌಲರ್‌ಗಳ ದಾಳಿಗೆ ಅಕ್ಷರಷಃ ತತ್ತರಿಸಿತು. 28.1 ಓವರ್‌ಗಳಲ್ಲಿ ಕೇವಲ 62 ರನ್‌ಗಳಿಗೆ ನ್ಯೂಜಿಲೆಂಡ್ ಆಲ್ಔಟ್ ಆಗಿದೆ. ಟೀಮ್ ಇಂಡಿಯಾ ಪರ ರವಿಚಂದ್ರನ್ ಅಶ್ವಿನ್ 4 ವಿಕೆಟ್, ಮೊಹಮ್ಮದ್ ಸಿರಾಜ್ 3 ವಿಕೆಟ್, ಅಕ್ಷರ್ ಪಟೇಲ್ 2 ವಿಕೆಟ್ ಮತ್ತು ಜಯಂತ್ ಯಾದವ್ 1 ವಿಕೆಟ್ ಪಡೆದರು.
ಬಳಿಕ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್‌ನ್ನು ಕೂಡ ಆರಂಭಿಸಿದ ಭಾರತ ಆರಂಭಿಕರಲ್ಲಿ ಬದಲಾವಣೆ ಮಾಡಿಕೊಂಡಿತು.
ಮಯಾಂಕ್ ಅಗರ್ವಾಲ್ ಮತ್ತು ಶುಬ್ ಮನ್ ಗಿಲ್ ಬದಲಾಗಿ ಮಯಾಂಕ್ ಅಗರ್ವಾಲ್ ಮತ್ತು ಚೇತೇಶ್ವರ್ ಪೂಜಾರ ಜೋಡಿ ಆರಂಭಿಕರಾಗಿ ಕಣಕ್ಕಿಳಿದಿದೆ. ಹೀಗೆ ಆರಂಭಿಕರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ (38/75) ಮತ್ತು ಚೇತೇಶ್ವರ್ ಪೂಜಾರ (29/51) ಜೋಡಿ ಉತ್ತಮ ಆರಂಭವನ್ನು ಕಟ್ಟಿಕೊಟ್ಟಿದ್ದು, ಎರಡನೇ ದಿನದಾಟದಂತ್ಯಕ್ಕೆ ಭಾರತ ಯಾವುದೇ ವಿಕೆಟ್ ಕಳೆದುಕೊಳ್ಳದೇ 69 ರನ್ ಗಳಿಸಿದ್ದು 332 ರನ್‌ಗಳ ದೊಡ್ಡ ಮಟ್ಟದ ಮುನ್ನಡೆಯನ್ನು ಸಾಧಿಸಿದೆ.