35 C
Hubli
ಮಾರ್ಚ್ 28, 2023
eNews Land
ಅಪರಾಧ

ಹುಬ್ಬಳ್ಳಿಲಿ ಆಸ್ತಿಗಾಗಿ ಸೋದರನ ಮಗನಿಗೆ ವಿಷವಿಕ್ಕಿದಳು; ಕೋರ್ಟ್ ಕೊಟ್ಟ ತೀರ್ಪೇನು ಗೊತ್ತಾ?

Listen to this article

ಇಎನ್ಎಲ್ ಧಾರವಾಡ: ಪಿತ್ರಾರ್ಜಿತ ಆಸ್ತಿ ಕಬಳಿಸುವ ಉದ್ದೇಶದಿಂದ ಸಹೋದರನ ಮಗನ ಕೊಲೆಗೆ ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಲ್ಲಿಯ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಏಳು ವರ್ಷ ಕಠಿಣ ಕಾರಗೃಹ ಶಿಕ್ಷೆ ಹಾಗೂ ₹ 20 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ. ಈ ಪ್ರಕರಣದ ಎರಡನೇ ಆರೋಪಿಯನ್ನು ಖುಲಾಸೆಗೊಳಿಸಿದೆ.

ಇಲ್ಲಿಯ ಗೋಪನಕೊಪದ ನಿವಾಸಿ ಹಾಗೂ ಪ್ರಕರಣ ಮೊದಲನೇ ಆರೋಪಿಸಿದ್ದಾ ಅಗಡಿ ಶಿಕ್ಷೆಗೆ ಗುರಿಯಾದ ಅಪರಾಧಿ, ಇವರ ಮಗ ಹಾಗೂ ಪ್ರಕರಣದ 2ನೇ ಆರೋಪಿ ಶ್ರೀಕಾಂತ ಅಗಡಿ ಖುಲಾಸೆಯಾಗಿದೆ. ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಸಹೋದರೆ ಹನುಮಂತಗೌಡ ಪಾಟೀಲ ಅವರೊಂದಿಗೆ ಆರೋಪಿತರು ತಕರಾರು ಮಾಡಿಕೊಂಡಿದ್ದರು.

ಜತೆಗೆ ನ್ಯಾಯಾಲಯದಲ್ಲಿ ದಾವೆ ಸಹ ಹೂಡಿದರು. ಈ ದ್ವೇಷದ ಹಿನ್ನೆಲೆಯಲ್ಲಿ 2014 ಸೆ.26ರಂದು ಶಿಕ್ಷೆಗೆ ಗುರಿಯಾದ ಸಿದ್ಧವಾ ಗಡಿ ಮತ್ತವರ ಮಗ ಶ್ರೀಕಾಂತ ಕೂಡಿಕೊಂಡು ಆಸ್ತಿಗಾಗಿ ಸಹೋದರ ಹನುಮಂತಗೌಡ ಪಾಟೀಲ ಅವರ 15 ವರ್ಷದ ಮಗನಿಗೆ ವಿಷಕಾರಿಯಾದ ಹೇನಿನ ಪುಡಿಯನ್ನು ಊಟದಲ್ಲಿ ಬೆರಸಿ ಕೊಲೆ ಮಾಡುವ ಉದ್ದೇಶದಿಂದ ಒತ್ತಾಯದಿಂದ ತಿನ್ನಿಸಿದ್ದರು. ಎಂದು ದೂರಲಾಗಿತ್ತು. ಈ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣ

ಪ್ರಕರಣದ ತನಿಖೆ ನಡೆಸಿದ ಅಶೋಕನಗರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಾದ ಪ್ರತಿವಾದ ಆಲಿಸಿದ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿರಾದಾರ ದೇವೇಂದ್ರಪ್ಪ ಎನ್. ಮಹಿಳೆಗೆ ಕಲಂ 307 ಅಡಿಯಲ್ಲಿ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಗಿರಿಜಾ ಎಸ್. ತಮ್ಮಿನಾಳ ವಾದ ಮಂಡಿಸಿದ್ದರು.

Related posts

ಅಣ್ಣಿಗೇರಿ; ಅಂದರ್, ಬಾಹರ್ ಆಡಿದ 12 ಮಂದಿ ಅಂದರ್!

eNewsLand Team

ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದವರನ್ನು ಗಲ್ಲು ಹಾಕಿ ಎಂದು ಆಗ್ರಹ

eNEWS LAND Team

ದ ಕಾಶ್ಮೀರ ಫೈಲ್ಸ್: ಕಲಾವಿದೆಗೆ ಗುಂಡಿಕ್ಕಿದ ನರರಾಕ್ಷಸರು!!

eNewsLand Team