ಇಎನ್ಎಲ್ ಫಿಲ್ಮ್ ಡೆಸ್ಕ್
ಬಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಜನಪ್ರಿಯತೆ ಪಡೆದಿರುವ ನಟಿ ಕಿಯಾರಾ ಅಡ್ವಾಣಿ ಸಾಕಷ್ಟು ಬೋಲ್ಟ್ ನಟನೆ ಮೂಲಕ ಹುಡುಗರ ಬಿಸಿ ಏರಿಸಿದವರು. ಈ ಹಿಂದೆ ಫೇಮಸ್ ಡಬ್ಬು ರತ್ನಾನಿ ಕ್ಯಾಲೆಂಡರಿಗಾಗಿ ಎಲೆಯ ಹಿಂದೆ ಬೆತ್ತಲಾಗಿ ಪೋಸ್ ನೀಡಿದ್ದನ್ನ ಯಾರೂ ಮರೆತಿಲ್ಲ. ಅಂತಹ ಕಿಯಾರಾ ಮತ್ತೊಮ್ಮೆ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ.
ಕಬೀರ್ ಸಿಂಗ್, ಲಕ್ಷ್ಮೀ, ಶೇರ್ ಶಾ ಗಳಂತಹ ಹಿಟ್ ಚಿತ್ರದ ಸಕ್ಸಸ್ ಅಲೆಯಲ್ಲಿರುವ ಇವರು ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ.
ಸೋಶಿಯಲ್ ಮಿಡಿಯಾಕ್ಕೆ ನಿರಂತರ ಭರ್ಜರಿ ಸುದ್ದಿ ಕೊಡುವ ಈ ಚೆಲುವೆ ಇದೀಗ ಗುಲಾಬಿ ಬಣ್ಣದ ಆಕರ್ಷಕ ಧಿರಿಸಿನಲ್ಲಿ ಮಿಂಚಿದ್ದಾರೆ.