29 C
Hubli
ಸೆಪ್ಟೆಂಬರ್ 26, 2023
eNews Land
ಆಧ್ಯಾತ್ಮಿಕ

ಹಿರೇಹೊನ್ನಿಹಳ್ಳಿ ಗ್ರಾಮದ ಬಸವತತ್ವ ಲಿಂಗಾನುಭವಿ ಶರಣರ ಬಳಗದಿಂದ ಪ್ರವಚನ ಮುಕ್ತಾಯ

ಇಎನ್ಎಲ್ ಕಲಘಟಗಿ: ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದಲ್ಲಿ ಬಸವತತ್ವ ಲಿಂಗಾನುಭವಿ ಶರಣರ ಬಳಗದಿಂದ ಶ್ರಾವಣ ಮಾಸದ ನಿಮಿತ್ಯ ವಿಶ್ವಗುರು ಬಸವಣ್ಣನವರ ಭಾವಚಿತ್ರದೊಂದಿಗೆ ವಚನ ಕಟ್ಟಳೆಯನ್ನು ತೆಲೆಮೆಲೆ ಹೊತ್ತು ಶರಣರ ವಚನ ನೃತ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಪಥಸಂಚಲನದೊಂದಿಗೆ ಅನುಭವ ಮಂಟಪದಲ್ಲಿ ಬಸವ ಧ್ವಜಾರೋಹಣ,ಸಾಮೂಹಿಕ ಪ್ರಾರ್ಥನೆ, ಅನುಭವ ಗೋಷ್ಠಿ ಮಾಡಿ ಅನ್ನಪ್ರಸಾದದೊಂದಿಗೆ    ಕಾರ್ಯಕ್ರಮ ಮುಕ್ತಾಯ  ಮಾಡಿದರು .

              ಈ ಕಾರ್ಯಕ್ರಮದಲ್ಲಿ ಪ್ರತಿನಿತ್ಯವೂ ಸಾಮಾಜಿಕ, ಶೈಕ್ಷಣಿಕ, ಕ್ರೀಡೆ, ರಕ್ಷಣಾ, ವೈದ್ಯರು, ವಕೀಲರು, ರೈತರನ್ನು, ಸಾರಿಗೆ,  ಮಾಧ್ಯಮದವರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ 150 ಸಾಧಕರಿಗೆ ಸನ್ಮಾನ ಮಾಡುವ ಜೊತೆಗೆ ಗ್ರಾಮದ ಹಿರೇಕೆರಿ ಮೈದಾನದಲ್ಲಿ ಸ್ವಚ್ಛತಾ ಅಭಿಯಾನದ ಮೂಲಕ ಶ್ರಮದಾನ ಮಾಡಿ ಸರ್ವ ಸಮುದಾಯಕ್ಕೆ ಮಾದರಿ ಆಗಿದ್ದಾರೆ. ಶ್ರಾವಣ ಮಾಸದ ಪ್ರತಿನಿತ್ಯ ಭಕ್ತರು ಮಹಾಪ್ರಸಾದ ಸೇವೆ ಮಾಡಿಸುತ್ತ ಬಂದಿರುವದು ವಿಶೇಷವಾಗಿದೆ. ಬಸವತತ್ವದಲ್ಲಿ ಸುಮಾರು 65 ವರ್ಷಗಳ ಹಿಂದೆ ಕಟ್ಟಿದ ಸಂಘಟನೆ ಇಂದಿಗೆ ಹೆಮ್ಮರವಾಗಿ ಬೆಳೆದು ಗ್ರಾಮದಲ್ಲಿ ಸಮಾಜ ಸುಧಾರಣೆ , ಧಾರ್ಮಿಕ ಸುಧಾರಣೆಯತ್ತ ದಾಪುಗಾಲು ಹಾಕುತ್ತಿದೆ. ಈ ವೇಳೆ ಗ್ರಾಮದ ಎಲ್ಲ ಗುರು ಹಿರಿಯರು ಯುವಕರು ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವದು ವಿಷೇಶವಾಗಿತ್ತು.

Related posts

ಅಗ್ನಿಸ್ಪರ್ಷಕ್ಕೆ ಸಿದ್ಧತೆ: ಕಟ್ಟಕಡೆಯ ಭಕ್ತನಿಗೂ ಸಿದ್ಧೇಶ್ವರರ ದರ್ಶನ

eNewsLand Team

ಬಸವಣ್ಣನವರ ಚಿಂತನೆಗಳಲ್ಲಿ ಜಗತ್ತಿನ ಅನಿಷ್ಟಗಳನ್ನು ಹೊಗಲಾಡಿಸುವ ಶಕ್ತಿಯಿದೆ

eNEWS LAND Team

ಕಾಮಧೇನು ಭಕ್ತಿ ಭಾವದತ್ತ…

eNEWS LAND Team