27 C
Hubli
ಏಪ್ರಿಲ್ 20, 2024
eNews Land
ಆಧ್ಯಾತ್ಮಿಕ ಸುದ್ದಿ

ಅಂತರoಗದ ಪೂಜೆ, ಬಹಿರಂಗದ ವ್ಯವಹಾರದಲ್ಲಿ ವ್ಯಕ್ತವಾಗಬೇಕು.

ಸುದ್ದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೊಳ್ಳಿ ನಮಗೆ ಬೆಂಬಲಿಸಿದಂತಾಗುತ್ತದೆ. ಪ್ಲೀಸ್ ಲೈಕ್ & ಶೇರ್

ಸುದ್ದಿ, ಜಾಹೀರಾತು, ಬ್ಯುಸಿನೆಸ್ ಪ್ರಮೋಷನ್ ಹಾಗೂ ಮಾಧ್ಯಮ ಸಲಹೆಗಾಗಿ ಸಂಪರ್ಕಿಸಿರಿ.

ಮೊಬೈಲ್ :+91 9141651260

ಇಮೇಲ್ : enewsland@gmail.com

________________________________________________

ಇಎನ್ಎಲ್‌ ಅಣ್ಣಿಗೇರಿ: ತಾಲೂಕಿನ ಮಣಕವಾಡ ಗ್ರಾಮದಲ್ಲಿ ಮೂರನೇ ದಿನ ಜರುಗಿದ ಲಿಂ.ಮೃತ್ಯುಂಜಯ ಶ್ರೀಗಳ ಅಜ್ಜನ ಸಂಭ್ರಮ ಪ್ರವಚನ ಸಮಾರಂಭದಲ್ಲಿ ಮಾತನಾಡಿದರು. ಅರಿಷಡ್‌ವೈರಿಗಳು, ಅಷ್ಟಮದಗಳು, ಸಪ್ತವ್ಯಸನಗಳು, ಮನಸ್ಸಿನ ಮಾಯೆ, ಎಲ್ಲವುಗಳನ್ನು ಗೆದ್ದು ಶಾಂತಿ, ಸಮಾಧಾನ ಸಹನಶೀಲತೆ, ಪ್ರೀತಿ, ವಿಶ್ವಾಸ, ದಯೆ, ಅಹಿಂಸೆ, ಅನುಕಂಪ, ತಾಳ್ಮೆ, ವಿನಯ, ಮೈಗೂಡಿ ವ್ಯಕ್ತಿಯ ಘನತೆ ಹೆಚ್ಚಬೇಕು. ಅಂತರoಗದ ಪೂಜೆ, ಬಹಿರಂಗದ ವ್ಯವಹಾರದಲ್ಲಿ ವ್ಯಕ್ತವಾಗಬೇಕು. ಮನ ಘನ ಮನವಾಗಬೇಕು ಮಾತು ಜ್ಯೋತಿರ್ಲಿಂಗವಾಗಬೇಕೆoದು ಅಡ್ನೂರು ಪ್ರವಚನಕಾರ ಪಂಡಿತ ಎಂ.ಕಲ್ಲಿನಾಥ ಶಾಸ್ತ್ರಿಗಳು ಹೇಳಿದರು.

ಸದಾಚಾರ ನಡೆಯಾಗಬೇಕು. ಸಕಲ ಜೀವಾತ್ಮಗಳಿಗೆ ಲೇಸ ಬಯಸುವ ಮನಹೊಂದಿರಬೇಕು. ಕಾಯಕ ದಾಸೋಹ ನಿತ್ಯದ ಬದುಕಾಗಬೇಕು. ಇವು ಪೂಜೆಯಿಂದ ಪಡೆದ ಪ್ರಸಾದಗಳು. ಈ ಪ್ರಸಾದ ಗುಣವುಳ್ಳ ವ್ಯಕ್ತಿ ಶರಣನೆನಿಸಿಕೊಳ್ಳುತ್ತಾನೆ. ಶರಣನಾಗುವುದೇ ಪೂಜೆಯ ಫಲವೆಂದು ಬಸವಾದಿ ಪ್ರಮಥರ ನಿಲುವು. “ಶರಣ ನಿದ್ರೆಗೈದರೆ ಜಪ ಕಾಣಿರೊ ಶರಣನೆದ್ದು ಕುಳಿತಡೆ ಶಿವರಾತ್ರಿ ಕಾಣಿರೊ ಶರಣ ನಡೆದುದೇ ಪಾವನ ಕಾಣಿರೋ ಕೂಡಲಸಂಗನ ಶರಣರ ಕಾಯವೇ ಕೈಲಾಸ ಕಾಣಿರೊ” ಎಂದು ಬಸವಣ್ಣನವರು ಹೇಳಿದ್ದಾರೆ.

ಲಿಂಗದಲ್ಲಿ ಸಮರಸಗೊಂಡ ಆತ್ಮ ಸದಾ ಕೈವಾಲ್ಯಾನಂದಲ್ಲಿ ಇರಬೇಕು. ಕೈವಾಲ್ಯನಂದದ ಸುಖವು ಸಕಲ ಜೀವಾತ್ಮರುಗಳ ಲೇಸಿಗಾಗಿ ಉಪಯೋಗಿಸಬೇಕು. ಅರಿವು ಅರಳಬೇಕು. ಭಾವದ ಭ್ರಮೆ ಹರಿಯಬೇಕು, ತನುಮನಭಾವ ಅತ್ಯಂತ ಶುದ್ಧ ಪವಿತ್ರವಾಗಿರಬೇಕು. ಇದುವೇ ಶರಣರ ನಿರಾಕಾರ  ಪರಮಾತ್ಮನ ಪೂಜೆ ಎನಿಸುತ್ತದೆ.  ಬಸವಾದಿ ಶರಣರು ಪೂಜೆಯಿಂದ ನಮ್ಮ ಉದ್ದೇಶ ಸಾಧಿಸಬಹುದೆ? ಪೂಜೆಗಳಲ್ಲಿ ಎನಾದರೂ ಸತ್ವವಿದೆಯೆ? ಎಂಬುದನ್ನು ತಿಳಿಸಿಕೊಟ್ಟಿದ್ದಾರೆ. 

ಪೂಜೆ ಮನುಷ್ಯನಲ್ಲಿ ದೈವೀಬಾವ, ದೈವೀನೋಟ, ದೈವೀ ಕ್ರಿಯೆಗಳಾಗಿ ಪರಿಣಮಿಸಬೇಕು. ಎಲ್ಲರಲ್ಲಿ ಪ್ರೀತಿ ವಿಶ್ವಾಸದಿಂದ ಅವರಲ್ಲಿ ದೇವರನ್ನು ಕಾಣಬೇಕು. ಅಂತರoಗ ಬಹಿರಂಗ ಒಂದಾಗಿ ತನ್ನದೆಲ್ಲವು ಅವನದ್ದು ಎಂಬ ಬಾವ ಮೂಡಬೇಕು ಅವನಲ್ಲಿ ಸಮರಸಗೊಂಡು ಅವನೇ ಇವನಾಗಬೇಕು. ಅದುವೇ ಪೂಜೆಯ ಫಲವಾಗುತ್ತದೆ. ಲಿಂಗಾoಗ ಸಾಮರಸ್ಯವಾಗುತ್ತದೆ. ಎಂದು ಹೇಳಿದರು.ಸಾನಿಧ್ಯವಹಿಸಿದ್ದ ಅನ್ನದಾನೇಶ್ವರ ಮಠದ ಅಭಿನವ ಮೃತ್ಯುಂಜಯ ಶ್ರೀಗಳು ಆರ್ಶೀವಚನದಲ್ಲಿ ಬಸವಾದಿ ಶರಣರ ರೂಪಿಸಿದ ಲಿಂಗಾಯತ ಧರ್ಮ-ತತ್ವ-ಸಮಾಜ-ಸಾಹಿತ್ಯ-ಸಂಸ್ಕೃತಿ ಮೌಲ್ಯಗಳು, ವೈಜ್ಞಾನಿಕತೆ-ವೈಚಾರಿಕತೆ, ಆಚಾರ-ವಿಚಾರ, ಪೂಜೆ , ವಚನ ಸಂಸ್ಕೃತಿ ಪ್ರತಿಪಾದಿಸಿದ ಕೌಟುಂಬಿಕ ಮಾಲ್ಯಗಳು, ವಚನ ಸಾಹಿತ್ಯದಲ್ಲಿ ಮಹಿಳಾ ಸಂವೇದನೆ, ಕಾಯಕ ಆರ್ಥಿಕ ಮೌಲ್ಯ, ವಿಕಾಸ ಮತ್ತು ಸಮಾಜ ವಿಕಾಸ ಬಗ್ಗೆ ಬಸವಣ್ಣನವರ ದೃಷ್ಟಿ ಕುರಿತು ಪ್ರವಚನದ ಮೂಲಕ ಆಲಿಸಿದ ಸದ್ಭಕ್ತರು ನಿಮ್ಮ ಬದುಕಿನಲ್ಲಿ ಅರಿದು ಆಚರಿಸುವ ಮೌಲ್ಯಗಳನ್ನು ಕಟ್ಟಿಕೊಳ್ಳುವುದು ಅವಶ್ಯವೆಂದರು. ತಾಲೂಕಿನ ಗ್ರಾ.ಪಂ.ಸದಸ್ಯರು ಪುರಸಭೆ ಸದಸ್ಯರು ನಿಸ್ವಾರ್ಥ ಮನೋಭಾವನೆಯಿಂದ ಸರ್ಕಾರ ಯೋಜನೆ ಸದ್ಭಳಿಸಿ, ಮೂಲ ಸೌಲಭ್ಯಗಳ ಸಮಗ್ರ ಅಭಿವೃದ್ದಿಯಲ್ಲಿ ತೊಡಗಿ ಜನಪರ ಕಲ್ಯಾಣಕ್ಕೆ ಸತ್ಯ-ಶುದ್ಧ-ಕಾಯಕದಲ್ಲಿ ನಿರತರಾಗಬೇಕೆಂದರು.

ನಲವಡಿ ಗ್ರಾ.ಪಂ ಸದಸ್ಯರು, ಅಣ್ಣಿಗೇರಿ ಪುರಸಭೆ ಚುನಾಯಿತ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಹುಬ್ಬಳ್ಳಿ ಜನಪದ ಕಲಾತಂಡದವರಿoದ  ಸಾಂಸ್ಕೃತಿ ಕಾರ್ಯಕ್ರಮ ಜರುಗಿದವು. ವಿರೇಶ ಕುಬಸದ ನಿರೂಪಿಸಿದರು.   

Related posts

ಕೋವಿಡ್: ನೈಟ್ ಕರ್ಫ್ಯೂ ರದ್ದು, ಶಾಲೆ ಕಾಲೇಜು ಮರುಪ್ರಾರಂಭ

eNewsLand Team

ರಾಡಿಹಳ್ಳ ಹೋರಾಟ ಸಮಿತಿಯಿಂದ ಪ್ರವಾಹದ ಸಮಸ್ಯೆಗೆ ಆಗ್ರಹ

eNEWS LAND Team

ಅಪಘಾತಕ್ಕೊಳಗಾದ ಹುಧಾ ಚಿಗರಿ!! ಎಲ್ಲಿ? ಯಾವಾಗ ನೋಡಿ?

eNEWS LAND Team