33 C
Hubli
ಏಪ್ರಿಲ್ 28, 2024
eNews Land
ಸುದ್ದಿ

ಪ್ರತಿಭೆ ಗುರುತಿಸುವುದೇ ಪ್ರತಿಭಾ ಕಾರಂಜಿಯ ಮುಖ್ಯ ಉದ್ದೇಶ: ಆಸಿಫ್ಅಲಿ ನದಾಫ್

ಇಎನ್ಎಲ್ ಕಲಘಟಗಿ: ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆಯನ್ನು ಗುರುತಿಸುವುದೇ ಪ್ರತಿಭಾ ಕಾರಂಜಿಯ ಮುಖ್ಯ ಉದ್ದೇಶವಾಗಿದೆ ಎಂದು ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ಆಸಿಫ್ಅಲಿ ನದಾಫ್ ಅಭಿಪ್ರಾಯಪಟ್ಟರು.

ಜಿಪಂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ,ಕಲಘಟಗಿ ಸಮೂಹ ಸಂಪನ್ಮೂಲ ಕೇಂದ್ರ, ಧುಮ್ಮವಾಡ ಹಾಗೂ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆ ಹಿರೇಹೊನ್ನಿಹಳ್ಳಿ ಇವರ ಸಹಯೋಗದಲ್ಲಿ ಧುಮ್ಮವಾಡ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಜ್ಯೋತಿ ಬೆಳಗಿಸುವುದರ ಮೂಲಕ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಭಾಗದ ಪ್ರತಿಯೊಂದು ಮಗುವಿನಲ್ಲಿಯೂ ಒಂದೊಂದು ಪ್ರತಿಭೆ ಅಡಗಿರುತ್ತದೆ ಆದ್ದರಿಂದ  ಪೋಷಕರು ಮತ್ತು ಶಿಕ್ಷಕರು ಮಕ್ಕಳಲ್ಲಿರುವ ಪ್ರತಿಭೆಯನ್ನು ಶಾಲಾ ಹಂತದಲ್ಲಿ ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು. ಮಕ್ಕಳು ಕೇವಲ ಪಠ್ಯದಲ್ಲಿ ಮಾತ್ರ ಭಾಗವಹಿಸದೇ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರೀಯವಾಗಿ ಮಕ್ಕಳು ತೊಡಗಿಸಿಕೊಳ್ಳುವಂತೆ ಶಿಕ್ಷಕರು ಮಕ್ಕಳಿಗೆ ಪ್ರೇರಣೆ ನೀಡಬೇಕು. ಪ್ರತಿಭಾ ಕಾರಂಜಿಯ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದ ಗ್ರಾಪಂ ಅಧ್ಯಕ್ಷ ವಿನಾಯಕ ಧನಿಗೊಂಡ ಮಾತನಾಡಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಶಾಂತ ರಡ್ಡೆರ ಮಾತನಾಡಿ ಪ್ರತಿಭಾ ಕಾರಂಜಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಶಿಕ್ಷಕರಿಗೆ ಅವಕಾಶ ಕಲ್ಪಿಸಿ ಕೊಡುವ ಪ್ರಮುಖ ವೇದಿಕೆಯಾಗಿದೆ ಎಂದು ಪ್ರಾಸ್ತಾವಿಕ ಮಾತನಾಡಿದರು.

ಜಿಲ್ಲಾಮಟ್ಟದ ಹಾಗೂ ತಾಲೂಕ ಮಟ್ಟದ ಉತ್ತಮ ಪ್ರಶಸ್ತಿ ಪಡೆದ ಶಿಕ್ಷಕರಿಗೆ ಧುಮ್ಮವಾಡ ಕ್ಲಸ್ಟರ್ ಮಟ್ಟದ ವತಿಯಿಂದ ಸನ್ಮಾನ ಹಾಗೂ ಕ್ಲಸ್ಟರ್ ವಿವಿಧ ಶಾಲೆಗಳ ಮಕ್ಕಳು ಈ ಪ್ರತಿಭಾ ಕಾರಂಜಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ಆಶಾ ದೊಡ್ಡಗೌಡ್ರ, ಸೀಮಾ ಕುಲಕರ್ಣಿ, ಬಸವರಾಜ ಬಡಿಗೇರ, ಗೀತಾ ಶಿರಗುಪ್ಪಿ, ಸೌಮ್ಯ ಜಿನ್ನಮ್ಮಣ್ಣವರ, ಕೊಟ್ರೇಶ ನಡುವಿನಮನಿ, ರೇಖಾ ಅಲಮೇಖರ್, ತೌಫೀನ್ ಜೀರಲಭಾವಿ, ಪರಶುರಾಮ ಮುಳಗುಂದ, ನೇತ್ರಾವತಿ ಎಂ.ಬಿ,ಸೀಮಾ ಕುಲಕರ್ಣಿ ಕಾರ್ಯಕ್ರಮದ ನಿರೂಪಣೆ, ಐ.ಎಮ್. ಕಿಲ್ಲೆದಾರ್ ವಂದನಾರ್ಪಣೆ ಮಾಡಿದರು. ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Related posts

ಮನಕುಲ ಕಲ್ಯಾಣವೇ  ರೇಣುಕಾಚಾರ್ಯರ ಸಂದೇಶ: ಅಭಿನವ ಪಂಚಾಕ್ಷರಿ ಶಿವಾಚಾರ್ಯ ಶ್ರೀಗಳು

eNEWS LAND Team

ಬಿಜೆಪಿ 13 ಆಕಾಂಕ್ಷಿಗಳಿಂದ ಬಂಡಾಯದ ಬಾಂಬ್ ಸ್ಫೋಟ: ಯಾರಿಗೆ ಎಫೆಕ್ಟ್; ?

eNEWS LAND Team

ಹುಬ್ಬಳ್ಳಿ: ಪುನೀತ್ ರಾಜ್‍ಕುಮಾರಗೆ ಶ್ರದ್ಧಾಂಜಲಿ ಸಲ್ಲಿಸಲು 500ಕಿಮೀ ಓಡುತ್ತಿರುವ ದ್ರಾಕ್ಷಾಯಿಣಿ!

eNewsLand Team