ಈ ಪುಣ್ಯಭೂಮಿ ಭರತ ಖಂಡದಲ್ಲಿರುವ ಈಗಿನ ಬೀದರ ಜಿಲ್ಲೆಯ ಬಿದಿರುಕೋಟೆಯಲ್ಲಿ ಸನ್ 1836 ರಲ್ಲಿ ಶ್ರೀ ಸಿದ್ಧಾರೂಢರು ರಾಮನವಮಿಯಂದು ಜನಿಸಿದರು. ಚಿಕ್ಕವರಿರುವಾಗಲೆ ಸನ್ಯಾಸಿಯಾಗಿ ಮನೆ ಬಿಟ್ಟು ಆತ್ಮಜ್ಞಾನಕ್ಕೋಸ್ಕರ ಸಾಧುಗಳ ಸಹವಾಸದಲ್ಲಿ ಪುಣ್ಯಕ್ಷೇತ್ರಗಳನ್ನು ಸಂಚರಿಸಿ ಹುಬ್ಬಳ್ಳಿಗೆ ದಯಮಾಡಿಸಿದರು . ಕೌಪಿನಧಾರಿಗಳಾಗಿ ಕರತಲಭಿಕ್ಷೆ ಮಾಡುತ್ತಾ ಮೌನದಿಂದ ಕೆಲವು ದಿವಸ ತೊರವಿಯವರ ಭಾವಿಯ ಮೇಲಿದ್ದು ನಂತರ ಚಿದ್ಘನಾನಂದ ಸ್ವಾಮಿಗಳ ಸಮಾಧಿ ಮಂದಿರವನ್ನು ಆಶ್ರಮಿಸಿದರು . ಶ್ರೀ ಸಿದ್ಧಾರೂಢ ಸ್ವಾಮಿಗಳವರಲ್ಲಿದ್ದ ಅಲೌಕಿಕ ಬ್ರಹ್ಮಜ್ಞಾನ , ವಾಕ್ ಪಾಂಡಿತ್ಯ ಹಾಗೂ ಅವರ ಬಾಯಿಂದ ಶಾಸ್ತ್ರ ಕೇಳಲು ಭಕ್ತರು ದಿನೆ ದಿನೆ ಹೆಚ್ಚಾಗುತ್ತಾ ನಡೆದರು.ಶ್ರೀ ಸಿದ್ಧಾರೂಢರೆಂದರೆ ಮಹದೇವನ ಅವತಾರವೇ ಎಂದು ಭಕ್ತ ಜನರಲ್ಲಿ ಭಾವನೆ ಬೆಳೆಯುತ್ತಾ ಹೋಗಿ ಅವರ ಪೂಜೆ ಜಾತ್ರೆ ನಡೆಯುತ್ತಾ ಒಂದೆರಡು ವರ್ಷಗಳಲ್ಲಿ ಶಿವರಾತ್ರಿ ಉತ್ಸವ ಬಂದು ಮುಂದೆ ಪ್ರಾರಂಭವಾಯಿತು .
।। ಓಂ ನಮಃ ಶಿವಾಯಃ |
ಅಖಂಡ ನಾಮಸ್ಮರಣೆ ಈ ಕ್ಷೇತ್ರದ ವೈಶಿಷ್ಟ್ಯ ಶ್ರೀ ಮಠದಲ್ಲಿ ಶಿವರಾತ್ರಿ ಉತ್ಸವ , ಶ್ರಾವಣ ಮಹೋತ್ಸವ ಹಾಗೂ ರಾಮನವಮಿ ಉತ್ಸವ ಬಹು ವಿಜೃಂಭಣೆಯಿಂದ ಜರುಗುತ್ತವೆ . ಭೂ ಲೋಕವನ್ನೇ ಕೈಲಾಸವನ್ನಾಗಿ , ಸನ್ 1926 ರಲ್ಲಿ ಶ್ರೀ ಸಿದ್ಧಾರೂಢರು ಕೈಲಾಸ ಮಂಟಪ ಕಟ್ಟಿಸಿದರು ಜಾತಿ , ಕುಲಪಂಥ ಯಾವುದೂ ಇಲ್ಲ . ದೇವನೊಬ್ಬನೇ ಎಂದು ಸಾರಿದ ಸಾರ್ವಭೌಮ . ಶ್ರೀ ಸಿದ್ಧಾರೂಢರು ದಿ : 21-08-1929 ನೇ ದಿನ ತಮ್ಮ 92 ನೇ ವಯಸ್ಸಿನಲ್ಲಿ ಸಮಾಧಿಸ್ಥರಾದರು.ಅವರ ದರ್ಶನ ನಮಗೆಲ್ಲ ಪಾವನ