29 C
Hubli
ಮೇ 2, 2024
eNews Land
ಸಣ್ಣ ಸುದ್ದಿ

ಅಣ್ಣಿಗೇರಿಯಲ್ಲಿ ರಾಷ್ಟೀಯ ಸೇವಾ ಯೋಜನೆ ವಿಶೇಷ ಶಿಬಿರ

ಇಎನ್‌ಎಲ್ ಅಣ್ಣಿಗೇರಿ: ಮಕ್ಕಳಿಗೆ ಜಾಗತಿಕ ಮಟ್ಟದ ಪರಸರದ ಹಾಗೂ ಸ್ವಚ್ಛ ಭಾರತ ಮಿಷನ್ ಕುರಿತು ತಿಳಿಸಿ, ಪಟ್ಟಣದ ಪ್ರತಿಯೊಬ್ಬ ಪ್ರಜೆಗೂ ಅರಿವು ಮೂಡಿಸುವಂತೆ ಆಗಬೇಕು. ಪುರಸಭೆ ಜೊತೆ ಕಾಲೇಜಿನ ಮಕ್ಕಳು ಕೈಜೋಡಿಸಿ ಸ್ವಚ್ಛ ಭಾರತ ಕಾರ್ಯದಲ್ಲಿ ತೊಡಗಿರೋದು ಸಂತಸ ತಂದಿದ್ದು ಸ್ವಚ್ಛ ಭಾರತ ಮಷಿನ್ ಅಭಿಯಾನಕ್ಕೆ ಮಾದರಿಯಾಗಬೇಕೆಂದು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ ಹೇಳಿದರು.

ಶ್ರೀಮತಿ ನಿಂಗಮ್ಮ ಎಸ್.ಹೂಗಾರ ಸಮೂಹ ಮಹಾವಿದ್ಯಾಲಯ ಹಾಗೂ ಪುರಸಭೆ ಕಾರ್ಯಲಯ ಸಂಯೋಗದಲ್ಲಿ ಹಮ್ಮಿಕೊಂಡ ರಾಷ್ಟೀಯ ಸೇವಾ ಯೋಜನೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಚಾರ್ಯ ಎಸ್.ಎಸ್.ಹರ್ಲಾಪೂರ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆ, ರಾಷ್ಟçವೆಂದರೆ ನಾವು, ಸೇವಾ ಅಂದರೆ ನಮ್ಮೊಳಗಿರುವ ವ್ಯಕ್ತಿತ್ವ ಅಥವಾ ನಾಯಕತ್ವ, ಅದೇ ರಾಷ್ಟ್ರೀಯ ಸೇವಾ ಎಂದು ಯಾವಾಗ ನಮ್ಮನ್ನು ನಾವೂ ರೂಪಿಸಿಕೊಳ್ಳುವೆವೋ, ಅವಾಗ ಮಾತ್ರ ಸಮಾಜವನ್ನು ರೂಪಿಸಲು ಸಾಧ್ಯವೆಂದು ಹೇಳಿದರು.
ಉಪನ್ಯಾಸಕ ಬಿ.ಡಿ.ನಲವಡಿ ಮಾತನಾಡಿ 1969 ರಲ್ಲಿ ಎನ್.ಎಸ್.ಎಸ್.ಗಾಂಧೀಜಿಯವರ ಕನಸು ನನಸಾಗಲು ಕಾರಣವಾಯಿತು ಎನ್.ಎಸ್.ಎಸ್.ಮಕ್ಕಳಿಗೆ ಎಕೆ ಬೇಕು? ಇದರಿಂದ ಎನೆಲ್ಲಾ ಉಪಯೋಗ? ಎನ್.ಎಸ್.ಎಸ್.ಮಾಹಿತಿ  ಕಾರ್ಯಕ್ರಮಗಳ  ಕುರಿತು ಸಂಕ್ಷೀಪ್ತವಾಗಿ ಪ್ರಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಮಲ್ಲಿಕಾರ್ಜುನ ಸುರಕೋಡ ಮಾತನಾಡಿ ಎನ್.ಎಸ್.ಎಸ್.ಶಿಬಿರದಲ್ಲಿ ಪಾಲ್ಗೊಂಡು ಶಿಬಿರಾರ್ಥಿಗಳು ಇನ್ನೀತರರಿಗೂ ಮಾದರಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದರು. ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಾಪಕರ ವೃಂದ ಪುರಸಭೆ ಕಾರ್ಯಲಯದ ಸಿಬ್ಬಂದಿ ವರ್ಗ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ವೀಣಾಶ್ರೀ ಸಂಗಡಿಗರು ಪ್ರಾರ್ಥಿಸಿದರು. ಪ್ರೀತಿ ನೇಕಾರ ಸ್ವಾಗತ ಕೋರಿ ನಿರೂಪಿಸಿದರು. ವಿಜಯಲಕ್ಷ್ಮೀ ಭೂಮನ್ನವರ ವಂದಿಸಿದರು.

.

Related posts

ವಾಲ್ಮೀಕಿ ಆದರ್ಶಗಳು ಸಮಾಜಕ್ಕೆ ಪ್ರೇರಣೆ : ಮಂಜುನಾಥ ಅಮಾಸಿ

eNEWS LAND Team

ನಿವೃತ್ತ ನೌಕರರ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಸರಕಾರಕ್ಕೆ ಮನವಿ ನೀಡಲು ನಿರ್ಧಾರ.

eNEWS LAND Team

ನಗರಾಭಿವೃದ್ಧಿ ಬಿಬಿಎಂಪಿಗೆ ಹಲವು ಅನುದಾನ ನೀಡಿರುವ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿ-ಧಾರವಾಡಕ್ಕೆ ಯಾವುದೇ ವಿಶೇಷ ಅನುದಾನ ನೀಡದಿರುವುದು ವಿಷಾದನೀಯ: ಅಫ್ಸರ್ ಕೊಡ್ಲಿಪೇಟೆ

eNEWS LAND Team