29 C
Hubli
ಅಕ್ಟೋಬರ್ 8, 2024
eNews Land
ಸಣ್ಣ ಸುದ್ದಿ

ನಿವೃತ್ತ ನೌಕರರ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಸರಕಾರಕ್ಕೆ ಮನವಿ ನೀಡಲು ನಿರ್ಧಾರ.

ಇಎನ್ಎಲ್ ನವಲಗುಂದ : ರಾಜ್ಯ ಸರಕಾರ ನಿವೃತ್ತ ನೌಕರರ ಟಿ.ಎ ಹಾಗೂ ಇತರೆ ಸವಲತ್ತುಗಳು ಪ್ರತಿ ತಿಂಗಳು ಸರಿಯಾಗಿ ಬರುತ್ತಿಲ್ಲ ಇದರಿಂದ ನಿವೃತ್ತ ನೌಕರರ ಜೀವನ ನಡೆಯುವುದು ತುಂಬಾ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ನಿವೃತ್ತ ನೌಕರರ ಸಮಸ್ಯೆ ಬಗೆಹರಿಸಲು ಸರಕಾರಕ್ಕೆ ತಾಲೂಕ ವತಿಯಿಂದ ಮನವಿ ನೀಡಲು ಮಂಗಳವಾರ ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಹೊಸ ವರ್ಷ ನಿವೃತ್ತ ನೌಕರರಿಗೆ ಶುಭವಾಗಲಿಂದು ಸಂಘದ ಸದಸ್ಯರು ಸೇರಿ ಸಭೆಯಲ್ಲಿ ಕೇಕ್ ಕತ್ತರಿಸುವುದರ ಮೂಲಕ ಆಚರಿಸಿದರು. ಇದೇ ಸಂದರ್ಭದಲ್ಲಿ ನೌಕರ ಸಂಘದ ಉಪಾಧ್ಯಕ್ಷ ಪಿ.ಎಸ್.ಹಿರೇಮಠ ಅವರಿಗೆ 80 ವರ್ಷಕ್ಕೆ ಪಾದಾರ್ಪಣೆಯಾಗುತ್ತಿರುವುದಕ್ಕೆ ಸಂಘದ ಎಲ್ಲಾ ಸದಸ್ಯರು ಸೇರಿ ಸನ್ಮಾನಿಸಿ ಶುಭ ಕೋರಿದರು.
ಈ ಸಂದರ್ಭದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕಲ್ಲಯ್ಯ ಹೊಸಮನಿ, ಎ.ಎಮ್.ನದಾಫ, ಎಮ್.ಜಿ.ನದಾಫ, ಎನ್.ವಾಯ್.ಬಾರಕೇರ, ಎಸ್.ಎಮ್.ಶಾನವಾಡ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

Related posts

ಅಣ್ಣಿಗೇರಿ: ಗಾಯಾಳು ರೈತ ಪರುಶರಾಮ ಅಣ್ಣಿಗೇರಿ: ಸಚಿವ ಮುನೇನಕೊಪ್ಪ ಸಾಂತ್ವಾನ

eNEWS LAND Team

ಜೂ.16 ರಂದು ವಿವಿಧ ಬಡಾವಣೆಗಳಿಗೆ ನೀರು ಪೂರೈಕೆ

eNEWS LAND Team

ಮಾಲಿನಿ ಮಲ್ಯ ನಿಧನ: ನಳಿನ್‍ಕುಮಾರ್ ಕಟೀಲ್ ಸಂತಾಪ

eNEWS LAND Team