28 C
Hubli
ಸೆಪ್ಟೆಂಬರ್ 21, 2023
eNews Land
ಸಣ್ಣ ಸುದ್ದಿ

ವಾಲ್ಮೀಕಿ ಆದರ್ಶಗಳು ಸಮಾಜಕ್ಕೆ ಪ್ರೇರಣೆ : ಮಂಜುನಾಥ ಅಮಾಸಿ

ಮಹರ್ಷಿವಾಲ್ಮೀಕಿ ಆದರ್ಶಗಳು ಪ್ರಸ್ತುತ ಸಮಾಜಕ್ಕೆ ಪ್ರೇರಣೆಯಾಗಿವೆ ಮಂಜುನಾಥ ಅಮಾಸಿ

ಅಣ್ಣಿಗೇರಿ: ಮಹರ್ಷಿ ವಾಲ್ಮೀಕಿ ಆದರ್ಶಗಳು ಪ್ರಸ್ತುತ ಸಮಾಜಕ್ಕೆ ಪ್ರೇರಣೆಯಾಗಿವೆ ಎಂದು ತಹಶೀಲ್ದಾರ ಮಂಜುನಾಥ ಅಮಾಸಿ ಹೇಳಿದರು . ಪಟ್ಟಣದ ಪಂಪ ಸ್ಮಾರಕ ಭವನದಲ್ಲಿ ಅಣ್ಣಿಗೇರಿ ತಾಲೂಕ ಆಡಳಿತದಿಂದ ವಾಲ್ಮೀಕಿ ಜಯಂತೋತ್ಸವ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು . ಅತಿಥಿಗಳಾದ ಮಾಜಿ ಕೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ ಮಾತನಾಡಿ , ರಾಮಾಯಣ ಮಹಾಕಾವ್ಯ ರಚಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಕೊಡುಗೆ ಆದರ್ಶಗಳು , ನಿತ್ಯಸ್ಮರಣೀಯವೆಂದರು . ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ತಾಲೂಕಿನ ಗಣ್ಯಮಾನ್ಯರು , ಅಧಿಕಾರಿಗಳ ವರ್ಗ , ವಾಲ್ಮೀಕಿ ಜಯಂತಿ ಆಚರಿಸಿದರು . ಈ ಸಂದರ್ಭದಲ್ಲಿ ತಾ.ಪಂ ಅಧಿಕಾರಿ ಎಸ್.ಎಮ್.ಕಾಂಬಳೆ , ಪುರಸಭೆ ಮುಖ್ಯಾಧಿಕಾರಿ ಕೆ.ಎಸ್.ಕಂಬಳಿ , ಸಮಾಜ ಕಲ್ಯಾಣ ನಿರ್ದೇಶಕಿ ಕಪಿಲಾ ಎಲ್ ಎಲೂವಿಗಿ , ಅರುಣ ಕರಿಶಂಕರಿ , ವಾಲ್ಮೀಕಿ ಸಮಾಜ ಭಾಂದವರು . ಹರಣಶಿಕಾರಿ ಮುಖಂಡರು , ವಿವಿಧ ಇಲಾಖೆಗಳ ಅಧಿಕಾರಗಳ ವರ್ಗ , ಸಾರ್ವಜನಿಕರು ಉಪಸ್ಥಿತರಿದ್ದರು .

Related posts

ಮೇ. 20 ರಂದು ವಿದ್ಯುತ್ ವ್ಯತ್ಯಯ

eNEWS LAND Team

ನರೇಗಾ ಕಾಮಗಾರಿ ಉತ್ತಮ: ಗುರುಲಿಂಗಸ್ವಾಮಿ

eNEWS LAND Team

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿರುವ ಅಫ್ರೋಜ್ ಮಂಚನಕೊಪ್ಪ ಹಾಗೂ ಬೆಂಬಲಿಗರು!!

eNEWS LAND Team