39 C
Hubli
ಏಪ್ರಿಲ್ 29, 2024
eNews Land
ಸುದ್ದಿ

ಅಣ್ಣಿಗೇರಿ:ತಾಲೂಕಿನಾದ್ಯಾಂತ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ ಕಾರ್ಯಕ್ರಮಕ್ಕೆ ಚಾಲನೆ

ಇಎನ್ಎಲ್ ಅಣ್ಣಿಗೇರಿ: ತಾಲೂಕಿನ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು “ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆಗೆ” ಅಭಿಯಾನ ಆಯೋಜಿಸುವ ವೇಳಾಪಟ್ಟಿ ಕಾಲಮಿತಿಯೊಳಗೆ ನಿಗದಿಗೊಳಿಸಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಗಾಮೀಣ ಅಭಿವೃದ್ಧಿ ಪಂಚಾಯತ ರಾಜ್ಯ ಇಲಾಖೆ  ಸೂಚನೆ ಅನ್ವಯ ಅ.2 ರಿಂದ ಒಂದು ತಿಂಗಳ ಅವಧಿಗೆ “ಮನೆ ಮನೆ ಜಾಥಾ” ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ಅಭಿಯಾನದ ಅವಧಿಯಲ್ಲಿ ಈ ಚಟುವಟಿಕೆಗಳನ್ನು ಹಮ್ಮಿಕೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.

ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಪ್ರತಿ ಮನೆಗೂ ಭೇಟಿ ನೀಡಿ, ಮನೆ ಮನೆ ಜಾಥಾ ಹಮ್ಮಿಕೊಂಡು ಯೋಜನೆಯ ಕುರಿತು ಮಾಹಿತಿ ನೀಡುವುದು ಹಾಗೂ ಆಯ್ಎಫ್ಎಸ್ ಚಟುವಟಿಕೆಗಳ ಮೂಲಕ ಗ್ರಾಮಸ್ಥರಿಗೆ ಹಾಗೂ ರೈತರಿಗೆ ಯೋಜನೆಯಡಿ ಸಿಗುವ ಸೌಲಭ್ಯಗಳ ಕುರಿತು ಪ್ರಚಾರ ಅಂದೋಲನ ಅ.2 ರಿಂದ 31 ರವರೆಗೆ ಕೈಗೊಳ್ಳುವುದು. ನ.30 ರೊಳಗೆ ಗ್ರಾಮಸಭೆಗಳನ್ನು ಆಯೋಜಿಸುವುದು. ಗ್ರಾಪಂ ಡಿಪಿಆರ್ ಮತ್ತು ಕ್ರಿಯಾ ಯೋಜನೆಯನ್ನು ತಾಪಂಗೆ ಡಿ.5ರೊಳಗೆ  ಸಲ್ಲಿಸುವುದು. ಎಲ್ಲಾ ಗ್ರಾಪಂ ಡಿಪಿಆರ್ ಕ್ರಿಯಾಯೋಜನೆ ಕ್ರೂಡೀಕರಿಸಿ ಅನುಮೋದಿಸಿ ಜಿಪಂ ಕಾರ್ಯಕ್ರಮ ಸಮನ್ವಯಾಧಿಕಾರಿಗಳಿಗೆ ಸಲ್ಲಿಸಿ ಪ್ರಾತಿಕ್ಷಿಕೆಯನ್ನು ನೀಡುವುದು. ಜಿಪಂ ಕಾರ್ಯಕ್ರಮ ಸಮನ್ವಯಾಧಿಕಾರಿ 2024 ಜ.10 ರಂದು ಜಿಲ್ಲಾ ವಾರ್ಷಿಕ ಯೋಜನೆ ಕಾರ್ಮಿಕ ಆಯವ್ಯವ ಜಿಪಂ ಮಂಡಿಸಿ ಜ.15  ರಂದು ಕೇಂದ್ರ ಗ್ರಾಮೀಣ ಮಂತ್ರಾಲಯ ನೀಡಿರುವ ನಮೂನೆಯಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವುದು. ರಾಜ್ಯ ಸರ್ಕಾರ ನಿಗದಿತ ಅವಧಿಯಲ್ಲಿ 2024 ಫೆ.10 ರೊಳಗೆ ಕೇಂದ್ರಕ್ಕೆ ಸಲ್ಲಿಸುವುದು. ೨೦೨೪ ಫೆ 20ರಂದು ಕಾರ್ಮಿಕ ಅಯವ್ಯಯ ಎಂಪ್ರೌವಡ್  ಕಮಿಟಿಯಲ್ಲಿ ಅಂತಿಮಗೊಳಿಸುವುದು.

ತಾಪಂ ಸಹಾಯಕ ನಿರ್ದೇಶಕ ಸುರೇಶ ಸಿಂಗನಹಳ್ಳಿ, ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಾಗೀರಧಾರ,ತಾಪಂ ಪ್ರಚಾರ ಸಂಯೋಜಕ ರಾಜು ಗುಳೇದ “ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯಡೆಗೆ” ಅಭಿಯಾನ ಮತ್ತು “ಜಲ ಸಂಜೀವಿನಿ” ಕಾರ್ಯಕ್ರಮವು ಸರ್ಕಾರ ಮತ್ತು ಇಲಾಖೆಯ ನಿಯಮನುಸಾರ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿ ಸುತ್ತೋಲೆಗಳನ್ನು ಕಡ್ಡಾಯವಾಗಿ ಪಾಲಿಸಿ ಜನರ ಸಹಭಾಗಿತ್ವದೊಂದಿಗೆ ಅರ್ಥಪೂರ್ಣವಾಗಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿದ್ದಾರೆ.

Related posts

ಅರಬ್‌ ರಾಷ್ಟ್ರಕ್ಕೆ ಆಹಾರ ಪೂರೈಕೆ: ಬ್ರೆಜಿಲ್ ಹಿಂದಿಕ್ಕಿ ಮೊದಲ ಸ್ಥಾನ ಪಡೆದ ದೇಶ ಯಾವ್ದು ಗೊತ್ತಾ?

eNewsLand Team

ಗೋಡೆಗೆ ಬಣ್ಣ ಬಳಿವಾಗ ಶಾಕ್: ಹುಬ್ಬಳ್ಳಿಯಲ್ಲಿ ಕಾರ್ಮಿಕ ಅಬ್ಬಾಸ್’ಅಲಿ ಸತ್ತಿದ್ದು, ಭಯಾನಕ!!

eNewsLand Team

ಮುಂದಿನ ವರ್ಷದಿಂದ ಜಿಲ್ಲಾ ಕೇಂದ್ರಗಳಲ್ಲಿ ಸರ್.ಎಮ್.ವಿ ಜನ್ಮ ದಿನಾಚರಣೆ: ಸಿಎಂ ಬೊಮ್ಮಾಯಿ

eNEWS LAND Team