29 C
Hubli
ಮೇ 2, 2024
eNews Land
ಸಣ್ಣ ಸುದ್ದಿ

ನಿಮ್ಮ ರಕ್ಷಣೆ ನೀವೆ ಮಾಡಿಕೊಳ್ಳಬೇಕು: ಎಸ್.ಎಸ್.ಹರ್ಲಾಪೂರ

ಇಎನ್‌ಎಲ್ ಅಣ್ಣಿಗೇರಿ: ಪೋಲಿಸ್ ಇಲಾಖೆ ಕಾರ್ಯ ಚಟುವಟಿಕೆ ಹಾಗೂ ಕಾನೂನು  ಕುರಿತು ಸಂಪೂರ್ಣ ಮಾಹಿತಿ ಪೊಲೀಸ್ ಠಾಣೆಯ ಎಎಸ್ಆಯ್ ಬಿ.ಎಸ್.ಹೊಳೆಯಣ್ಣವರ ತಿಳಿಸಿದರು.
ಶ್ರೀಮತಿ ನಿಂಗಮ್ಮ ಎಸ್.ಹೂಗಾರ ಸಮೂಹ ವಿದ್ಯಾಲಯ ಹಾಗೂ ಪುರಸಭೆ ಕಾರ್ಯಲಯ ಸಂಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆ ೨ನೆ ದಿನದ ಶಿಬಿರದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಂತರ ಮಾತನಾಡಿ ಮಕ್ಕಳು ಸಾರಿಗೆ ಬಸ್‌ಗಳಲ್ಲಿ ಗಲಾಟೆ ಮಾಡದೇ ವೃದ್ದರಿಗೆ ಸ್ಥಳವಕಾಶ ಕಲ್ಪಸಿಕೊಡಬೇಕೆಂದರು. ವಿದ್ಯಾರ್ಥಿಗಳು ಹಿರಿಯರೊಂದಿಗೆ ಸೌಜನ್ಯರೀತಿಯಿಂದ ವರ್ತಸಿ ಮಾತನಾಡಬೇಕು. ಕಾನೂನುಬಾಹಿರ ಕೆಲಸದಿಂದ ದೂರವಿರಬೇಕು. ತಂದೆ ತಾಯಿ, ಗುರುಗಳ ಪ್ರೀತಿ ವಿಶ್ವಾಸಕ್ಕೆ ಅರ್ಹರಾಗಿ ಗೌರವ ತರುವ ಕೆಲಸ ಮಾಡಿ, ಉಜ್ವಲಭವಿಷ್ಯ ರೂಪಸಿಕೊಳ್ಳಬೇಕೆಂದು ಹೇಳಿದರು.
ಉಪನ್ಯಾಸಕ ಅಶೋಕ ಚವ್ವಾಣ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ನಾಳಿನ ಪ್ರಜೆಗಳು. ವಿದ್ಯಾರ್ಥಿಗಳು ಕೆಲಸವನ್ನು ಮಾಡುವಾಗ ಸೋಮಾರಿತನ ಮಾಡಬಾರದು. ತಮ್ಮ ಕರ್ತವ್ಯಗಳನ್ನು ಶೃದ್ಧೆ ನಿಷ್ಠೆ, ಪ್ರಾಮಾಣಿಕವಾಗಿ ಪಾಲಿಸಬೇಕೆಂದು ಹೇಳಿದರು.
ಅಧ್ಯಕ್ಷತೆವಹಿಸಿ ಪ್ರಾಚಾರ್ಯ ಎಸ್. ಎಸ್.ಹರ್ಲಾಪೂರ ಮಾತನಾಡಿ,ಕಾನೂನು ಜ್ಞಾನ ಕುರಿತು ತಿಳಿದಿರಬೇಕು. ನಿಮ್ಮ ರಕ್ಷಣೆ ನೀವೆ ಕಾಪಾಡಿಕೊಳ್ಳಬೇಕು. ಇಂದಿನ ಪ್ರಪಂಚದಲ್ಲಿ ಅಪರಾಧಿಗಳ ಸಂಖ್ಯೆ ಹೆಚ್ಚಿದ್ದು ತಂತ್ರಜ್ಞಾನದ ಬಳಿಕೆ ಪರಿಣಾಮ ಜಾಗೃತರಾಗಿರಬೇಕು. ವಿದ್ಯಾರ್ಥಿಗಳು ಕುಟುಂಬ ಹಾಗೂ ರಾಷ್ಟçದ ಸಂಪತ್ತು ಎಂಬುದನ್ನು ಅರತಿರಬೇಕೆಂದರು. 
ರಾಷ್ಟ್ರೀಯ ಸೇವಾ ಯೋಜನೆ ಶಿಬಿರದ 2ನೇ ದಿನದ ಬೆಳಿಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ವಚ್ಛತಾ ಕಾರ್ಯವನ್ನು ಮಾಸ್ಕ ಹಾಗೂ ಗ್ಲೌಸ್ ಧರಿಸಿ ಶಿಬಿರಾರ್ಥಿಗಳು ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಮೃತೇಶ ಮೀಸಿ, ಅಧ್ಯಾಪಕರ ವೃಂದ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಮಧು ಕರಡಿಗುಡ್ಡ ಸ್ವಾಗತಕೋರಿದರು. ವಂದನಾ ಕೋರಿ ಸಂಗಡಿಗರು ಪ್ರಾರ್ಥಿಸಿದರು.  ವಿಜಯಲಕ್ಷ್ಮೀ ಮರಿಯಪ್ಪಗೌಡರ ನಿರೂಪಿಸಿದರು. ಬಿಂದು ತೇಲಿ ವಂದಿಸಿದರು.

Related posts

ಅಣ್ಣಿಗೇರಿಯಲ್ಲಿ ಬಿಗ್ ಮಿಶ್ರಾ ಫೇಡಾ ಹಾಗೂ ಅನಘಾ ಫುಡ್ಸ್ ಮಾರ್ಕೆಟ್ ಪ್ರಾರಂಭ

eNEWS LAND Team

ಧಾರವಾಡ ಜಿಲ್ಲೆಯ ಮೊದಲನೇ ಸುತ್ತು ಬೆಳಿಗ್ಗೆ 9 ಗಂಟೆಯವರೆಗೆ ಆಗಿರುವ ಶೇಕಡಾವಾರು ಮತದಾನ ವಿವರ ಇಲ್ಲಿದೆ ನೋಡಿ.

eNEWS LAND Team

ಭಂಡಿವಾಡ ಮಾರುತಿ ದೇವಸ್ಥಾನದಲ್ಲಿ ಲಕ್ಷದೀಪೋತ್ಸವ

eNEWS LAND Team