27 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ಆಸ್ಪತ್ರೆಗೆ ಮಗು ತೋರಿಸಲು ಬಂದ ದಂಪತಿ ಅಪಘಾತದಲ್ಲಿ ಸಾವು, ಮಗು ಸ್ಥಿತಿ ಹೇಗಿದೆ?

ಇಎನ್ಎಲ್ ಧಾರವಾಡ

ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಸೊಲ್ಲಾಪುರ ರಸ್ತೆಯಲ್ಲಿ ಸಂಭವಿಸಿದ ಟಿಪ್ಪರ್-ಬೈಕ್‌ ನಡುವಿನ ಅಪಘಾತದಲ್ಲಿ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದ ದಂಪತಿ ಮೃತಪಟ್ಟ ಧಾರುಣ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ತಾಲೂಕಿನ ಬೆಳವಟಗಿ ಗ್ರಾಮದ ಸುಷ್ಮಾ ಆನಂದ್ ಸಿದ್ದಗಿರಿ (32) ಆನಂದ್ ನೀಲಪ್ಪ ಸಿದ್ದಗಿರಿ(36) ಮೃತಪಟ್ಟ ದುರ್ದೈವಿ ದಂಪತಿ.
ಇಬ್ಬರು ತಮ್ಮ ಮೂರು ವರ್ಷದ ಮಗುವನ್ನು ಆಸ್ಪತ್ರೆಗೆ ತೋರಿಸಲು ಬರುತ್ತಿದ್ದ ವೇಳೆ ಟಿಪ್ಪರ್ ಚಾಲಕ ಕುಡಿದ ಅಮಲಿನಲ್ಲಿ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ.

 

ಅಲ್ಲದೇ ಮುಂದೆ ಹೋಗಿ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಇನ್ನೊಂದು ಬೈಕ್ ಸವಾರನಿಗೂ ಅಪಘಾತ ಆಗಿದೆ. ಟಿಪ್ಪರ್ ಚಾಲಕ ಟಿಪ್ಪರ್ ಬಿಟ್ಟು ಪರಾರಿಯಾಗಿದ್ದಾನೆ.
ಅಪಘಾತದಲ್ಲಿ ದಂಪತಿಗಳ ಮಗು ಪವಾಡ ಸದೃಶ ರೀತಿಯಲ್ಲಿ ಪಾರಾಗಿದೆ. ಇನ್ನು ಘಟನಾ ಸ್ಥಳಕ್ಕೆ ನವಲಗುಂದ ಪೊಲೀಸರು ಕ್ಷಣಾರ್ಧದಲ್ಲಿ ಭೇಟಿ ನೀಡಿ ಸುಷ್ಮಾಳನ್ನು ರಕ್ಷಿಸಲು ಪ್ರಯತ್ನಿಸಿದರು ಆದರೆ ಚಿಕಿತ್ಸೆ ನೀಡುವ ಮುನ್ನವೇ ಮೃತಪಟ್ಟಿದ್ದರು. ಮಗು ಹಾಗೂ ಇನ್ನೊಬ್ಬ ಬೈಕ್‌ಸವಾರ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related posts

ಚುನಾವಣಾ ಅಕ್ರಮ ತಡೆಯಲು ಸಾರ್ವಜನಿಕರು ‘ಸಿ-ವಿಜಿಲ್’ ಆ್ಯಪ್ ನ್ನು  ಸದ್ಬಳಕೆ ಮಾಡಿಕೊಳ್ಳಲಿ: ಡಿಸಿ ಗುರುದತ್ತ ಹೆಗಡೆ

eNEWS LAND Team

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಹಾಗೂ ಡಾ.ಬಾಬು ಜಗಜೀವನರಾಮ ಜಯಂತಿ

eNewsLand Team

ಧಾರವಾಡದಲ್ಲಿ ಅತಿವೃಷ್ಠಿಗೆ 9579 ಹೆಕ್ಟೇರ್ ಬೆಳೆ ನಾಶ

eNewsLand Team