36 C
Hubli
ಏಪ್ರಿಲ್ 24, 2024
eNews Land
ಸುದ್ದಿ

ಜುಗಲಬಂದಿ ರಾಜಕಾರಣ ಮಾಡಿ ಎಳು ಬಾರಿ ಗೆದ್ದ ಹೊರಟ್ಟಿ : ಪಿ.ಎಚ್.ನೀರಲಕೇರಿ

ಇಎನ್ಎಲ್ಅಣ್ಣಿಗೇರಿ: ಜುಗಲಬಂದಿ ರಾಜಕಾರಣ ಮಾಡಿ ಚುನಾವಣೆಯಲ್ಲಿ ಎಳು ಬಾರಿ ಗೆಲವು ಸಾಧಿಸಿದ ಬಿ.ಎಸ್.ಹೊರಟ್ಟಿ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ವಿಧಾನಪರಿಷತ್ ಸಭಾಪತಿಯಾಗಿದ್ದರೂ. ಶಿಕ್ಷಕರ ಹಲವಾರು ಸಮಸ್ಯೆಗಳು ಬೇಡಿಕೆಗಳಾಗಿಯೇ ಉಳಿದಿವೆ. ವಿಧಾನಪರಿಷತ್ ಪಶ್ಚಿಮ ಕ್ಷೇತ್ರದ ಶಿಕ್ಷಕರ ಅಭ್ಯರ್ಥಿಯಾದ ಹೊರಟ್ಟಿ ಅವರನ್ನು ಬದಲಾವಣೆ ತರುವಲ್ಲಿ ಶಿಕ್ಷಕರ ಸಮೂಹ ಒಲವು ತೋರುತ್ತಿರುವ ಪರಿಣಾಮ ಮತಯಾಚನೆಯಿಂದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಗೆಲವು ನಿಶ್ಚಿತವೆಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕರ ಪಿ.ಎಚ್.ನೀರಲಕೇರಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಇದನ್ನು ಓದಿಬಸವ ಸಮಿತಿ ಅಂಬೇಡ್ಕರ ವಸತಿ ಯೋಜನೆ ವರ್ಕ್ ಆರ್ಡರ ವಿತರಣೆ

ಪಟ್ಟಣದ ಕಾರ್ಯನಿರತ ಪತ್ರಿಕಾ ಕಾರ್ಯಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಳೆದ 42 ವರ್ಷಗಳಿಂದ ವಿಧಾನಪರಿಷತ್ ಸದಸ್ಯರಾಗಿ ಶಿಕ್ಷಣಮಂತ್ರಿಯಾಗಿ, ವಿಧಾನಪರಿಷತ್ ಸಭಾಪತಿಯಾಗಿ, ಸೇವೆ ಸಲ್ಲಿಸಿದ ಅವರು  ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ,ಮೈಸೂರು ಕರ್ನಾಟಕ,  ಅನುದಾನ ರಹಿತ ಶಾಲಾ ಶಿಕ್ಷಕರು. ಅತಿಥಿ ಉಪನ್ಯಾಸಕರು, ಯಾವುದೇ ಸೌಲಭ್ಯಗಳಿಲ್ಲದೇ ನಿರ್ಲಕ್ಷಕ್ಕೆ ಒಳಪಟ್ಟಿದ್ದಾರೆ. ಖಾಸಗಿ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರ ಭರ್ತಿ ಮಾಡಿಲ್ಲ. ಶಿಕ್ಷಕರಿಗೆ ಹಳೆಪಿಂಚಣಿ ಯೋಜನೆ ಜಾರಿಗೆ ತಂದಿಲ್ಲ. 1995 ರಿಂದ ಅನುದಾನಕ್ಕೆ ಒಳಪಟ್ಟ ಶಿಕ್ಷಣ ಸಂಸ್ಥೆಗಳ ಶಾಲಾ-ಕಾಲೇಜುಗಳಿಗೆ ಅನುದಾನಕ್ಕೆ ಒಳಪಡಿಸಿಲ್ಲ. ಉನ್ನತ ವೇತನ ಶ್ರೇಣಿಯ ಸೌಲಭ್ಯ ಒದಿಗಿಸಿಲ್ಲ.

ಇದನ್ನು ಓದಿಅಣ್ಣಿಗೇರಿಲಿ ಅನ್ನದಾತನ ಆತ್ಮಹತ್ಯೆ; ಸಾಯುವಂಥದ್ದು ಏನಾಗಿತ್ತು?

ಪದವಿ ಪೂರ್ವ ಉಪನ್ಯಾಸಕರಿಗೆ ಪದವಿ ಮುಂಬಡ್ತಿ ನೀಡಿಲ್ಲ. ಅನುದಾನ ರಹಿತ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಿಲ್ಲ. ವೃತ್ತಿಪರ ತರಬೇತಿ ಸಂಸ್ಥೆಗಳು, ತಾಂತ್ರಿಕ , ವೈದ್ಯಕೀಯ ಎಲ್ಲಾ ಬೋದಕರಿಗೆ ಬೇಡಿಕೆ ಸಮಸ್ಯೆಗಳನ್ನು ಪೂರೈಸಿಲ್ಲ. ಸರ್ಕಾರಿ ಶಿಕ್ಷಕರ ಸಿಗುವ ಸೇವಾ ಸೌಲಭ್ಯ ಖಾಸಗಿ ಶಾಲಾ ಶಿಕ್ಷಕರಿಗೆ ಒದಗಿಸಿಲ್ಲ. ಐ.ಟಿ.ಐ ತರಬೇತಿ ಸಂಸ್ಥೆಗಳ ಸಿಬ್ಬಂದಿಗೆ ಥಾಮಸ್ ವರಿದಿ ಜಾರಿಗೆ ತಂದಿಲ್ಲ. ಮುರಾರ್ಜಿ ದೇಸಾಯಿ ವಸತಿ ಶಾಲೆ, ಕೈಸ್ ಅಡಿಯಲ್ಲಿ ಸೇವೆಸಲ್ಲಿಸುತ್ತಿರುವ ಶಿಕ್ಷಕರಿಗೆ ವಿಶೇಷ ಸೌಲಭ್ಯ ಕಲ್ಪಿಸಿಲ್ಲ. ಶಿಕ್ಷಕ ಸ್ನೇಹಿ ನೀತಿ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆ ಜಾರಿಗೆ ತಂದಿಲ್ಲ. ಹೀಗೆ ಹಲವಾರು ವರ್ಷಗಳಿಂದ ಶಿಕ್ಷಕರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದು, ಈ ಸಲ ಬಸವರಾಜ ಗುರಿಕಾರ ಅವರಿಗೆ ಮತಯಾಚಿಸಿ ಗೆಲವು ತಂದರೆ ಶಿಕ್ಷಕರ ಸಮಸ್ಯೆಗಳಿಗೆ ಗೆಲವು ನಿಶ್ಚಿತವೆಂದು ಹೇಳಿದರು.

ಇದನ್ನು ಓದಿಹುಬ್ಬಳ್ಳಿ ಮಹಿಳೆ ಮಹಾರಾಷ್ಟ್ರದಲ್ಲಿ ಕಿಡ್ನಾಪ್: ಹೆಂಡ್ತಿ ಸುರಕ್ಷತೆಗೆ ಓದಲೇಬೇಕಾದ ಸುದ್ದಿ

ಅಣ್ಣಿಗೇರಿ ತಾಲೂಕಿನ ಎಲ್ಲಾ ಶಿಕ್ಷಣ ಸಂಸ್ಥೆಗಳ ಶಾಲಾ ಕಾಲೇಜುಗಳಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರವಾಗಿ ಮತಯಾಚಿಸಿದರು.      

Related posts

ಧಾರವಾಡದಲ್ಲಿ ಅತಿವೃಷ್ಠಿಗೆ 9579 ಹೆಕ್ಟೇರ್ ಬೆಳೆ ನಾಶ

eNewsLand Team

ಸೂಫಿ ಸಂತರು ಶಿರಸಂಗಿ ಲಿಂಗರಾಜರ ಅಭಿನವ ಸಂಬಂಧಕ್ಕೆ ಸಾಕ್ಷಿಯಾಗಿದೆ:ಬಸವಲಿಂಗ ಶ್ರೀಗಳು.

eNEWS LAND Team

ಹುಬ್ಬಳ್ಳಿಯಲ್ಲಿ ಜೋಡೆತ್ತುಗಳ ಜನ್ಮದಿನ: ಕೇಕ್ ಕತ್ತರಿಸಿದ ಶ್ರೀಗಳು

eNewsLand Team