ಇಎನ್ಎಲ್ ಹುಬ್ಬಳ್ಳಿ
ಇತ್ತೀಚೆಗೆ ಸಂಭವಿಸಿದ ಅನಿರೀಕ್ಷಿತ ಹಾಗೂ ಅಕಾಲಿಕವಾದ ಭಾರೀ ಮಳೆಯಿಂದ, ರಾಜ್ಯಾದ್ಯಂತ ಸುಮಾರು 34 ಲಕ್ಷ ಹೆಕ್ಟರ್ ಬೆಳೆ ನಾಶ ಹೊಂದಿದೆ ಎಂದು ವರದಿಯಾಗಿದೆ.ಅದರಂತೆ ಹುಬ್ಬಳ್ಳಿ ತಾಲ್ಲೂಕಿನಾದ್ಯಂತರೈತರು ಬೆಳೆದ ಮೆಣಸಿನಕಾಯಿ, ಹತ್ತಿ, ಕಡಲೆ ಹಾಗೂ ಇತರೆ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ.
ಈ ಕುರಿತು ಸರ್ಕಾರ ಯಾವುದೇ ಸರ್ವೇ ಮಾಡದೇ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ.ಇದರಲ್ಲಿ ಮಳೆಯಾಧಾರಿತ ಬೆಳೆ, ನೀರಾವರಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ನೀಡಿದ ಪರಿಹಾರ ಯಾವುದೇ ರೀತಿಯಿಂದಲೂ ವೈಜ್ಞಾನಿಕವಾಗಿ ನೀಡಿಲ್ಲ. ಸರ್ಕಾರ ಕೂಡಲೇ ಸರ್ವೇ ನಡೆಸಿ, ಸೂಕ್ತ ಪರಿಹಾರ ನೀಡಬೇಕು.
ರೈತರು ಬಿತ್ತನೆ ಹಾಗೂ ಬೆಳೆಗಳಿಗೆ ಮಾಡಿದ ಖರ್ಚು, ವೆಚ್ಚಗಳನ್ನು ಆಧರಿಸಿ ಪರಿಹಾರ ನೀಡಬೇಕು. ಅಂದಾಜು ಸರ್ವೇ ಮಾಡದೇ, ಸರಿಯಾದ ರೀತಿಯಲ್ಲಿ ಸರ್ವೆಕಾರ್ಯ ಕೈಗೊಳ್ಳಬೇಕು. ಬೆಳೆ ನಷ್ಟ ಹೊಂದಿದ ಎಲ್ಲ ಬೆಳೆಗಳಿಗೂ ಪರಹಾರ ನೀಡಬೇಕು. ಬೆಳೆ ನಷ್ಟ ಹೊಂದಿದ ಎಲ್ಲ ರೈತರಿಗೂ ಬೆಳೆ ಹಾನಿ ಪರಿಹಾರ ನೀಡುವಂತೆ, ಕ್ರಮ ಕೈಗೊಳ್ಳಬೇಕು ಎಂದು ಆರ್‌ಕೆಎಸ್ ಒತ್ತಾಯಿಸುತ್ತದೆ.
ಸರ್ಕಾರವು ಬೆಳೆ ನಷ್ಟದ ಸಮಗ್ರ ಸಮೀಕ್ಷೆಕೈಗೊಂಡು, ತುರ್ತಾಗಿ ರೈತರಿಗೆ ಪರಿಹಾರ ಒದಗಿಸಬೇಕು. ರೈತರ ನ್ಯಾಯಬದ್ಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲು ಆಗ್ರಹಿಸಿದರು.
ಬೆಳೆ ನಷ್ಟಕ್ಕೆ ಸರ್ಕಾರ ಒಂದು ಹೆಕ್ಟೇರ್ ಗೆ ಮಳೆಯಾದರಿತ 6800, ನೀರಾವರಿ 13500, ತೋಟಗಾರಿಕಾ ಬೆಳೆಗೆ 18ಸಾವಿರ ನೀಡಿದೆ, ಇದರ ಮೂರು ಪಟ್ಟು ಹೆಚ್ಚಳ ಪರಿಹಾರ ನೀಡಬೇಕು.
ರೈತರು ಬೆಳೆದ ಎಲ್ಲಾ ಬೆಳೆಗೆ ಬೆಳೆಹಾನಿ ಪರಿಹಾರ ನೀಡಬೇಕು.
ಬೆಳೆ ನಷ್ಟಪರಿಹಾರವನ್ನು ಎಲ್ಲಾ ರೈತರಿಗೆ ನೀಡಬೇಕು.
ಮನವಿ ಸ್ವೀಕರಿಸಿ ಮತನಾಡಿದ ತಹಶೀಲ್ದಾರ ಪ್ರಕಾಶ ನಾಶಿ ಅವರು ಈಗಾಗಲೇ ಪರಿಹಾರ ಬಿಡುಗಡೆ ಮಾಡುತ್ತಿದ್ದೇವೆ, ರೈತರಿ ಇನ್ನು ಬಂದಿಲ್ಲ ಎಂಬ ಆರೋಪ ಇದೆ,ನಾವು ಹಳ್ಳಿಗಳಲ್ಲಿ ರೈತರಿಗೆ ಸರ್ವೇ ಮಾಡಲು ಹೇಳಿದ್ದೇವೆ, ಯಾರಿಗೆ ಸಾಧ್ಯವಾಗುವದಿಲ್ಲವು ಗ್ರಾಮಲ್ಲಿ ಪಿ ಆರ್ ಒ ಗಳ ಮೂಖಂತರ ಮಾಡತ್ತಿದ್ದೇವೆ, ರೈತರಿಗೆ ಬರದ್ದಿದರೆ ಅದಕ್ಕೆ ಸೂಕ್ತ ಕ್ರಮ ಕೈಗೂಳಲಾದುವದು, ಎಲ್ಲಾ ರೈತರಿಗೂ ಪರಿಹಾರ ನೀಡುವುದಾಗಿ ಹೇಳಿದರು.
ಪರಿಹಾರ ಹಣ ಕಡಿಮೆ ಇದೆ ಎಂದಾಗ ಪರಿಹಾರ ಹೆಚ್ಚಳಕ್ಕೆ ಸರಕಾರದ ಗಮನಕ್ಕೆ ತರತ್ತೇನೆ ಎಂದು ಭರವಸೆ ನೀಡಿದ್ದರು.
ಈ ಸಂದರ್ಭದಲ್ಲಿ ಎಂ. ಶಶಿಧರ್ ಆರ್ ಕೆ ಎಸ್ ನ ರಾಜ್ಯ ಉಪಾಧ್ಯಕ್ಷರು, ಆರ್ ಕೆ ಎಸ್ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ ಜಡಗನ್ನವರ,ಜಿಲ್ಲಾ ಕಾರ್ಯದರ್ಶಿ ಶರಣು ಗೋನವಾರ ,ಸಮಿತಿಯ ಸದಸ್ಯರಾದ ಹನುಮೇಶ ಹುಡೇದ, ದೀಪಾ ವಿ ಗ್ರಾಮಸ್ಥರಾದ ಅಣ್ಣಪ್ಪ ಕುಲಕರ್ಣಿ ,ರಾಮಣ್ಣ ಗಾಣಗೇರ, ಎಮ್ ಎಲ್ ದೂಡ್ಡಮನೆ, ಪ್ರಕಾಶ ಭಂಡಿವಾಡ, ಐ.ಎ. ಹೋಸಮಠ, ಹಣುಮಂತ ಚುಂಗಿನ ಇದ್ದರು.