27 C
Hubli
ಡಿಸೆಂಬರ್ 7, 2023
eNews Land
ಸುದ್ದಿ

 ಕೊರೋನಾ ವಾರಿಯರ್ಸ್’ಗಳಿಗೆ ಸನ್ಮಾನ: ಮಾಜಿ ಸಚಿವ ಸಂತೋಷ್ ಲಾಡ್

ಇಎನ್ಎಲ್ ಕಲಘಟಗಿ: ಎಲ್ಲೆಡೆ ಕೋವಿಡ್‌ ಸೋಂಕು ಉಲ್ಬಣಿಸಿದ್ದ ಸಮಯದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೇ ಜನರ ಆರೋಗ್ಯ ಕಾಪಾಡಲು ಶ್ರಮಿಸಿದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು

ಆರೋಗ್ಯ ಹಾಗೂ ಪೌರಕಾರ್ಮಿಕರನ್ನು ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಗುರುತಿಸಿ, ಸನ್ಮಾನಿಸುವ ಮೂಲಕ ಕೊರೋನಾ ವಾರಿಯರ್’ಗಳಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದ ಮಾಜಿ ಸಚಿವ ಸಂತೋಷ ಲಾಡ್.

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾ.8 ರಂದು ಸಂಜೆ 4ಗಂಟೆಗೆ ಮಾಜಿ ಸಚಿವ ಸಂತೋಷ ಲಾಡ್‌ ಅವರ ಕಲಘಟಗಿಯ ತಾಲೂಕಿನ ಮಡಕಿಹೊನ್ನಳ್ಳಿಯಲ್ಲಿರುವ ನಿವಾಸದ ಆವರಣದಲ್ಲಿ ಈ ಸನ್ಮಾನ ಸಮಾರಂಭ ಆಯೋಜಿಸಿತ್ತು.

ಈ ವರೆಗೆ ಬಳ್ಳಾರಿ, ಕೂಡ್ಲಿಗಿ, ಸಂಡೂರು, ಕಲಘಟಗಿ, ಹರಪನಹಳ್ಳಿ ಹಾಗೂ ಚಿತ್ರದುರ್ಗಗಳಲ್ಲಿ ಇದೇ ರೀತಿ ಕಾರ್ಯಕ್ರಮ ಆಯೋಜಿಸಿ ಸುಮಾರು 12,000 ಕ್ಕೂ ಹೆಚ್ಚು ಕೊರೋನ ವಾರಿಯರ್’ಗಳನ್ನು ಗುರುತಿಸಿ ಗೌರವಿಸಲಾಗಿದೆ.ಈ  ಕಾರ್ಯಕ್ರಮದಲ್ಲಿ ಕಲಘಟಗಿ ಹಾಗೂ ಅಳ್ನಾವರ ಭಾಗದ ಸುಮಾರು ಹತ್ತು ಸಾವಿರ ಮಹಿಳೆಯರು ಭಾಗವಹಿಸಿದ್ದು, ಎಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ ಎಂದು ಹರ್ಷ ವ್ಯಕ್ತ ಪಡಿಸಿದ ಮಾಜಿ ಸಚಿವ ಸಂತೋಷ್ ಲಾಡ್. 

ಸುದ್ದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೊಳ್ಳಿ ನಮಗೆ ಬೆಂಬಲಿಸಿದಂತಾಗುತ್ತದೆ. ಪ್ಲೀಸ್ ಲೈಕ್ & ಶೇರ್

ಸುದ್ದಿ, ಜಾಹೀರಾತು, ಬ್ಯುಸಿನೆಸ್ ಪ್ರಮೋಷನ್ ಹಾಗೂ ಮಾಧ್ಯಮ ಸಲಹೆಗಾಗಿ ಸಂಪರ್ಕಿಸಿರಿ.

ಮೊಬೈಲ್ :+91 9141651260

ಇಮೇಲ್ : enewsland@gmail.com

 

Related posts

ನಾಳೆ ಹಳೇ ಹುಬ್ಬಳ್ಳಿ, ಗೋಕುಲ ರಸ್ತೆಯ ಬಡಾವಣೆಗೆ ನೀರು ಬರಲ್ಲ

eNewsLand Team

ಅಣ್ಣಿಗೇರಿಯಲ್ಲಿ ಪತ್ರಿಕಾ ವಿತರಕರ ದಿನಾಚರಣೆ

eNEWS LAND Team

ಕುವೈತ್’ನಲ್ಲಿ ಡಾಕ್ಟರ್ ವೃತ್ತಿಗಾಗಿ 468 ಹುದ್ದೆಗಳಿಗೆ ನೇರ ಸಂದರ್ಶನ

eNEWS LAND Team