26.4 C
Hubli
ಮಾರ್ಚ್ 29, 2024
eNews Land
ಸುದ್ದಿ

ಹುಬ್ಬಳ್ಳಿ ಮತ್ತು ಗುಂತಕಲ್ ಗಳ ನಡುವೆ ಡೆಮು ರೈಲು ಸಂಚಾರ ಪ್ರಾರಂಭ

ಇಎನ್ಎಲ್ ಹುಬ್ಬಳ್ಳಿ

ನೈಋತ್ಯ ರೈಲ್ವೆಯು ರೈಲು ಸಂಖ್ಯೆ 073377/07338 ಎಸ್ಎಸ್ಎಸ್ ಹುಬ್ಬಳ್ಳಿ – ಗುಂತಕಲ್- ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಪ್ಯಾಸೆಂಜರ್ ರೈಲುಗಳನ್ನು ಸಾಂಪ್ರದಾಯಿಕ ರೇಕುಗಳಿಗೆ ಬದಲಾಗಿ ಇಂದಿನಿಂದ ಡೀಸಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ (ಡೆಮು) ರೇಕುಗಳೊಂದಿಗೆ ಸಂಚರಿಸಲು ಪ್ರಾರಂಭಿಸಿದೆ. ಹುಬ್ಬಳ್ಳಿ – ಗುಂತಕಲ್ ವಿಶೇಷ ಡೆಮು ಪ್ಯಾಸೆಂಜರ್ ನ ಪ್ರಥಮ ಸೇವೆಯು ಹುಬ್ಬಳ್ಳಿಯಿಂದ ಇಂದು ನಿರ್ಗಮಿಸಿತು.

ಡೆಮು ರೇಕುಗಳ ಪ್ರಯೋಜನಗಳು:

ಡೆಮು ಎನ್ನುವುದು ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ನ ಸಂಕ್ಷಿಪ್ತ ರೂಪ. ಇದು ಆನ್ ಬೋರ್ಡ್ ಡೀಸೆಲ್ ಎಂಜಿನ್ನು ಗಳಿಂದ ಸಂಚರಿಸಲ್ಪಡುವ ಬಹು ಘಟಕಗಳ ರೈಲು. ಈ ರೈಲಿನ ಒಂದು ಬಂಡಿಯಲ್ಲೇ ಎಂಜಿನ್ ಅನ್ನು ಅಳವಡಿಸಿರುವುದರಿಂದ ದೆಮು ರೈಲಿಗೆ ಪ್ರತ್ಯೇಕವಾದ ಎಂಜಿನ್/ಲೋಕೋಮೋಟಿವ್ ನ ಅಗತ್ಯವಿರುವುದಿಲ್ಲ.

ಈ ಬಹು ಘಟಕದ ರೈಲಿನ ಪ್ರಯಾಣಿಕರನ್ನು ಒಯ್ಯುವ ಪ್ರತಿಯೊಂದು ಕಾರ್ ನಲ್ಲೂ (ಘಟಕದಲ್ಲೂ )ಬೋಗಿಯ ತಳಭಾಗದಲ್ಲಿ ಪ್ರೇರಕ ಶಕ್ತಿಯ ಮೂಲವನ್ನು ಅಳವಡಿಸಲಾಗಿರುತ್ತದೆ. ಇದು ಡೆಮು ರೇಕುಗಳ ವೇಗವನ್ನು ತ್ವರಿತವಾಗಿ ವರ್ಧಿಸಲು ಹಾಗೂ ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಕಡಿಮೆ ದೂರದ ಪ್ಯಾಸೆಂಜರ್/ನಿತ್ಯ ಸೇವೆಯ ರೈಲುಗಳ ಸಂಚಾರಕ್ಕೆ ಇದು ಹೆಚ್ಚು ಸೂಕ್ತವಾಗಿವೆ.
ಡೆಮು ರೈಲಿಗೆ ಅಂತಿಮ ನಿಲ್ದಾಣದಲ್ಲಿ ಎಂಜಿನ್ ಅನ್ನು ಹಿಂದು ಮುಂದಾಗಿಸುವ ಅಗತ್ಯವಿರುವುದಿಲ್ಲ. ಇದರಿಂದ ಶಂಟಿಂಗ್ ಕಾರ್ಯಾಚರಣೆಯ ಅಗತ್ಯವಿರದ ಕಾರಣ ರೈಲು ಸಂಚಾರದ ಎರಡೂ ಕೊನೆಗಳಲ್ಲಿ ಶಂಟಿಂಗ್ ಕಾರ್ಯಕ್ಕಾಗಿ ತಗುಲುವ ಸಮಯವನ್ನು ಸಂಪೂರ್ಣವಾಗಿ ಕಡಿತಗೊಳಿಸುತ್ತದೆ
ವಾಸ್ಕೋಡಗಾಮ ಮತ್ತು ಕುಲೆಂ ನಿಲ್ದಾಣಗಳ ನಡುವೆ ಪ್ರಾರಂಭವಾದ ಡೆಮು ಸೇವೆಯ ಬಳಿಕ ಇದು ಹುಬ್ಬಳ್ಳಿ ವಿಭಾಗದ ಎರಡನೇ ಡೆಮು ರೈಲು ಆಗಿದ್ದು ಹುಬ್ಬಳ್ಳಿ ನಿಲ್ದಾಣದಿಂದ ಪ್ರಾರಂಭವಾದ ಪ್ರಥಮ ರೈಲು ಸೇವೆಯಾಗಿದೆ.
ಬಳ್ಳಾರಿಯಿಂದ ಲೋಂಡಾವರೆಗಿನ ವಿದ್ಯುದೀಕರಣ ಕಾರ್ಯವು ಶೀಘ್ರವಾಗಿ ಮುಂದುವರೆಯುತ್ತಿದ್ದು ಅದು ಸಂಪೂರ್ಣವಾದ ಬಳಿಕ ಆ ಭಾಗದಲ್ಲೂ ಡೆಮು ಸೇವೆಯನ್ನು ಪ್ರಾರಂಭಿಸಬಹುದಾಗಿದೆ.

ರೈಲು ಸಂಖ್ಯೆ 073377 ಎಸ್ಎಸ್ಎಸ್ ಹುಬ್ಬಳ್ಳಿ – ಗುಂತಕಲ್ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ರೈಲು ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಬೆಳಗ್ಗೆ 7.30 ಗಂಟೆಗೆ ನಿರ್ಗಮಿಸಿ ಮಧ್ಯಾಹ್ನ 2.30ಗಂಟೆಗೆ ಗುಂತಕಲ್ ನಿಲ್ದಾಣವನ್ನು ತಲುಪುವುದು. ರೈಲು ಸಂಖ್ಯೆ 073378 ಗುಂತಕಲ್ – ಎಸ್ಎಸ್ಎಸ್ ಹುಬ್ಬಳ್ಳಿ ನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ರೈಲು ಗುಂತಕಲ್ ನಿಲ್ದಾಣದಿಂದ ಮಧ್ಯಾಹ್ನ 2.40ಗಂಟೆಗೆ ನಿರ್ಗಮಿಸಿ ರಾತ್ರಿ 9.30ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣವನ್ನು ತಲುಪುವುದು ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ.ವಿಜಯಾ ತಿಳಿಸಿದ್ದಾರೆ.

Related posts

ಪಿಎಂಜಿಕೆವೈ: 2022ರ ಮಾರ್ಚ್ ತನಕ ವಿಸ್ತರಣೆ

eNewsLand Team

ನುಂಗಣ್ಣ ಕ್ಷೇತ್ರದ ಶಾಸಕರಾದರೆ ಹಾನಗಲ್ಲ ಉಳಿತದಾ ? ಸಿದ್ರಾಮಯ್ಯ ಪ್ರಶ್ನೆ …?

eNEWS LAND Team

ಹೆಲಿಕಾಪ್ಟರ್ ಪತನ; ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಬಿಪಿನ್‌ ರಾವತ್‌ ನಿಧನ

eNewsLand Team