eNews Land
ಸುದ್ದಿ

ಎಸ್ಡಿಎಂ: ಹೊಸ ಪ್ರಬೇಧದ ಕೋವಿಡ್ ವೈರಾಣು ಇಲ್ಲ

Listen to this article

ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾಹಿತಿ

 ಇಎನ್ಎಲ್ ಧಾರವಾಡ: ಇಲ್ಲಿನ ಸತ್ತೂರಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಎಸ್ ಡಿ ಎಂ) ವೈದ್ಯಕೀಯ ಕಾಲೇಜಿನಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಪಾಸಿಟಿವ್ ಪ್ರಕರಣಗಳ ಬಾಕಿ ಇದ್ದ 140 ಜಿನೋಮ್ ಸಿಕ್ವೆನ್ಸಿಂಗ್ ವರದಿಗಳು ಲಭ್ಯವಾಗಿದ್ದು.ಯಾವುದೇ ಹೊಸ ಪ್ರಬೇಧದ ವೈರಾಣು ಇಲ್ಲ. ಜಿಲ್ಲೆಯ ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಹೇಳಿದ್ದಾರೆ.

ಎಸ್ ಡಿ ಎಂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಪತ್ತೆಯಾಗಿದ್ದ ಕೋವಿಡ್ ಪ್ರಕರಣಗಳ , ಪ್ರಯೋಗಾಲಯ ಸ್ಯಾಂಪಲ್‌ಗಳನ್ನು ಜಿನೋಮ್ ಸಿಕ್ವೆನ್ಸಿಂಗ್‌ ಪತ್ತೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿತ್ತು. ನಿನ್ನೆ 113 ವರದಿಗಳ ಮಾಹಿತಿ ಸಿಕ್ಕಿತ್ತು. ಬಾಕಿ ಇದ್ದ 140 ವರದಿಗಳು ಇಂದು ದೊರೆತಿದ್ದು , ಇವುಗಳಲ್ಲಿ ಯಾವುದೇ ಹೊಸ ತಳಿಯ ವೈರಾಣು ಇಲ್ಲ ಎಂಬುದು ದೃಢಪಟ್ಟಿದೆ.

ಜಿಲ್ಲೆಯ ಜನತೆ ಆತಂಕಕ್ಕೆ ಈಡಾಗುವ ಅಗತ್ಯವಿಲ್ಲ, ಆದರೆ ಸೋಂಕಿನ ಬಗ್ಗೆ ನಿರ್ಲಕ್ಷ್ಯ ತೋರದೆ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು.ಕೋವಿಡ್ ನಿರೋಧಕ ಎರಡೂ ಡೋಸ್ ಲಸಿಕೆಗಳನ್ನು ಹಾಕಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.

Related posts

ಮನೆ ಕಟ್ಟಲು ಸಾಲ ಮಾಡಿ ಮಸಣ ಸೇರಿದ! ಹಿಂಗ್ಯಾಕೆ ಮಾಡಿಕೊಂಡೆ ಸಿದ್ದಪ್ಪ!!

eNewsLand Team

ಹೊಸ ನಾಯಕತ್ವದಲ್ಲಿ ಕಮಾಲ್ ಮಾಡುತ್ತಾ ಆರ್’ಸಿಬಿ??

eNewsLand Team

ವೀಕೆಂಡ್ ಕರ್ಫ್ಯೂ; ಧಾರವಾಡದಲ್ಲಿ ಏನಿರತ್ತೆ, ಏನಿರಲ್ಲ?

eNewsLand Team