29 C
Hubli
ಮೇ 2, 2024
eNews Land
ಸುದ್ದಿ

ಅಣ್ಣಿಗೇರಿಯಲ್ಲಿ ಸಂಭ್ರಮದ ಪೌರಕಾರ್ಮಿಕರ ದಿನಾಚರಣೆ

ಇಎನ್‌ಎಲ್ ಅಣ್ಣಿಗೇರಿ: ಪಟ್ಟಣ ಶುಚಿತ್ವಗೊಳಿಸುವಲ್ಲಿ ಪೌರಕಾರ್ಮಿಕರ ಸೇವೆ ಅಪಾರ. ತಮ್ಮ ವೈಯಕ್ತಿಕ ಸಮಸ್ಯೆ ಆರೋಗ್ಯವನ್ನು ಲೆಕ್ಕಿಸದೇ, ದುರ್ವಾಸನೆ ಕೆಸರಿನಲ್ಲಿ ಜೀವದ ಹಂಗು ತೊರೆದು ಹಗಲಿರುಳು ಸ್ವಚ್ಛತೆಗೊಳಿಸುವಲ್ಲಿ ಶ್ರಮವಹಿಸಿ ಆಡಳಿತ ಮಂಡಳಿ ಸದಸ್ಯರನ್ನು, ಅಧಿಕಾರಿಗಳ ವರ್ಗವನ್ನು, ಸಾರ್ವಜನಿಕರ ನಿಂದನೆ, ದೂರು, ದುಮ್ಮಾನಗಳಿಂದ ಮುಕ್ತರನ್ನಾಗಿ ಕಾಪಾಡುವ ರಕ್ಷಕರು ಎಂದು ಪುರಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜಕರಡ್ಡಿ ಶ್ಲಾಘೀಸಿದರು.

ಪಟ್ಟಣದ ಪಂಪ ಸ್ಮಾರಕಭವನದಲ್ಲಿ ಅಣ್ಣಿಗೇರಿ ಪುರಸಭೆ ಪೌರಕಾರ್ಮಿಕರ ದಿನಾಚರಣೆ ನಿಮಿತ್ಯ ಹಮ್ಮಿಕೊಂಡ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಪುರಸಭೆ ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡರ ಮಾತನಾಡಿ ಪಟ್ಟಣದ ಸರ್ವಾಂಗೀಣಿ ಅಭಿವೃದ್ಧಿ ಪಥದಲ್ಲಿ ಎಲ್ಲಾ ಮೂಲ ಸೌಲಭ್ಯಗಳನ್ನು ಕಲ್ಪಸುವಲ್ಲಿ ಪೌರಕಾರ್ಮಿಕರ ಪಾತ್ರ ಪರಿಣಾಮಕಾರಿಯಾಗಿದೆ. ಗಟಾರು, ರಸ್ತೆ, ಶೌಚಾಲಯ, ವಿದ್ಯುತ್ ಸಂಪರ್ಕ, ನೀರು ಸರಬರಾಜು, ಕಂದಾಯ, ಲೆಕ್ಕಪರಿಶೋಧನೆ.ಅಭಿಯoತರರು, ಸಿಬ್ಬಂದಿವರ್ಗ, ಪೌರಕಾರ್ಮಿಕರು ಎಂತಹ ವಿಪತ್ತಿನ ಕಠಿಣ ಸಮಸ್ಯೆಗಳಿದ್ದರೂ ಮುನ್ನುಗ್ಗಿ ಶುಚಿತ್ವ ವಾತಾವರಣ, ಸುಭದ್ರ ಆಡಳಿತ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.

ನಿವೃತ್ತ ಪುರಸಭೆ ಕಂದಾಯ ಅಧಿಕಾರಿ ವಿ.ಎಸ್.ಬಣಗಾರ ಮಾತನಾಡಿ ಪೌರಕಾರ್ಮಿಕರ ದಿನಾಚರಣೆ ಮಾಡಲು ಸರ್ಕಾರ 2012 ರಿಂದ ಪ್ರತಿವರ್ಷ ಸೆ.23 ರಂದು ಪೌರಕಾರ್ಮಿಕರ ದಿನಾಚರಣೆ ಮಾಡಲು ಒಂದು ದಿವಸ ರಜೆ ಘೋಷಿಸಿ, ಸಂತೋಷದಿoದ ಸಂಭ್ರಮಾಚರಣೆ ಆಚರಸಲೆಂದು ವರ್ಷಕ್ಕೆ ಒಂದು ದಿನ ಅವಕಾಶ ಕಲ್ಪಿಸಿದೆ. ಅವರಿಗೆ ಬೋನಸ್ 3500 ದಿಂದ 7000 ರೂಗಳಿಗೆ  ಹೆಚ್ಚಿಸಿದೆ. ಅವರ ಸಶಕ್ತ ಬದುಕಿಗೆ ಸರ್ಕಾರ ಇನ್ನೂ ಹಲವಾರು ಸೌಲಭ್ಯಗಳು, ವೇತನ ಹೆಚ್ಚಿಸಿ ಸಾರ್ವಜನಿಕರಿಗೆ ಉತ್ತಮ ಪರಿಸರ, ಆರೋಗ್ಯ, ಸ್ವಚ್ಛತೆ ರಕ್ಷಣೆಗೆ ಶ್ರಮಿಸುತ್ತಿರುವ  ಪೌರಕಾರ್ಮಿಕರ ಸಶಕ್ತ ಬದುಕಿಗೆ ಮುಂದಾಗಬೇಕಿದೆ. ಆ ಹಿನ್ನಲೆಯಲ್ಲಿ ಪೌರ ಸೇವಾ ನೌಕರರ ಸೇವಾ ಸಂಘ ತಮ್ಮೆಲ್ಲಾ ಕುಂದುಕೊರತೆ ಸಮಸ್ಯೆಗಳಿಗೆ ಸ್ಪಂದಿಸಿ ಹೋರಾಟ ಮೂಲಕ ನ್ಯಾಯ ದೊರಕಿಸುವಲ್ಲಿ ದಿಟ್ಟ ನಿಲುವು ಹೆಜ್ಜೆಯನ್ನಿಟ್ಟಿದೆ. ಪೌರಸೇವಾ ನೌಕರರು ಪೌರಕಾರ್ಮಿಕರು ಒಗ್ಗಟ್ಟಾಗಿ ಸಂಘದ ಕಾರ್ಯ ಚಟುವಟಿಕೆಯಲ್ಲಿ ತೊಡಗಿ ಸಲಹೆ ಸೂಚನೆ ಕೊಡುವ ಮೂಲಕ ತಮ್ಮ ಹಿತಾಸಕ್ತಿಗೆ ಮುಂದಾಗಬೇಕೆoದು ಕರೆಕೊಟ್ಟರು. ಜಿಲ್ಲಾ ಪೌರನೌಕರರ ಸೇವಾ ಸಂಘದ ಅಧ್ಯಕ್ಷ ಎಸ್.ಎಚ್.ನಾಶಿಪುಡಿ ಮಾತನಾಡಿ  ಪೌರಕಾರ್ಮಿಕರಿಗೆ ನಿತ್ಯದ ಕೆಲಸಕ್ಕೆ ಆಧುನಿಕ ತಂತ್ರಜ್ಞಾನದ ಸಲಕರಣೆಗಳ ಅವಶ್ಯಕತೆಯಿದೆ. ಪೌರಕಾರ್ಮಿಕರ ಸದ್ಭಳಕೆಗೆ ಅಂತಹ ಸಾಮಾಗ್ರಿಗಳನ್ನು ಖರೀದಿಸಲು  ಪುರಸಭೆ ಆಡಳಿತ ಮಂಡಳಿ ಬೆಂಬಲಿಸಿ ಸಹಕಾರ ನೀಡಬೇಕಿದೆ.
               ಜ್ಯೋತಿ ಸಂಜೀವಿನ ಆಯುರ್ವೇದಿಕ್ ಕ್ಲೀನಿಕ್ ವೈದ್ಯರ ತಂಡ ಪೌರಕಾರ್ಮಿಕರಿಗೆ ಉಚಿತ ತಪಾಸಣೆ ಔಷಧ ಕಲ್ಪಿಸುತ್ತದೆ. ಕೇವಲ ನಗರ ಜಿಲ್ಲಾ ಪ್ರದೇಶಗಳಿಗೆ ಈ ಸೇವೆ ಸೀಮಿತವಾಗಿದ್ದು, ರಾಜ್ಯದ ಎಲ್ಲಾ ನಗರಸಭೆ ಪುರಸಭೆ. ಪಟ್ಟಣ ಪಂಚಾಯತ್ ಕಛೇರಿಗಳಲ್ಲಿ ಸೇವಾ ಸೌಲಭ್ಯ ಒದಗಿಸುವಂತೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕಿದೆ. ಪೌರಕಾರ್ಮಿಕರ ಬೇಡಿಕೆಗೆ ಮಾನ್ಯತೆ ಕೊಟ್ಟ ಶಾಸಕರು, ಆಡಳಿತ ಮಂಡಳಿ, ಜಿಲ್ಲಾಡಳಿತ ಮೊಟ್ಟ ಮೊದಲು ಪಟ್ಟಣದ  ಪುರಸಭೆ ಕಾರ್ಮಿಕರಿಗೆ ಅವಕಾಶ ಕಲ್ಪಿಸಿದರೇ ರಾಜ್ಯದ ಇನ್ನೀತರ ಪೌರಕಾರ್ಮಿಕರ ಪಾಲಿಗೆ ಆಶಾಕಿರಣವಾಗಿ ಹೊರಹೊಮ್ಮಲು ಸಾಧ್ಯ. ಇಲ್ಲದೇ ಹೋದ್ರೆ ಪೌರ ಸೇವಾ ನೌಕರರ ಸಂಘಟನೆ ಹೋರಾಟ ಮಾಡಿ ಪಡೆಯಬೇಕಾಗುತ್ತದೆಂದು ಹೇಳಿದರು.

ಪೌರಕಾರ್ಮಿಕರಿಗೆ ಬೆಳಗಿನ ಸಮಯದಲ್ಲಿ ಪಂದ್ಯಾಟಗಳನ್ನು ಆಯೋಜಿಸಿತ್ತು. ಪೌರಕಾರ್ಮಿಕ ವಿಜೇತರಿಗೆ ಬಹುಮಾನ ವಿತರಿಸಿದರು. ಪುರಸಭೆ ಪೌರಕಾರ್ಮಿಕರು, ಹೊರಗುತ್ತಿಗೆದಾರರು, ನೀರು ಸರಬರಾಜು ಕಾರ್ಮಿಕರು. ವಾಹನ ಚಾಲಕರು,  ಸಿಬ್ಬಂದಿಗಳು, ವಾಯ್.ಜಿ. ಗದ್ದಿಗೌಡರ ಮುಖ್ಯಾಧಿಕಾರಿಗಳು, ಧಾ.ಜಿ. ನೌಕರರ ಸೇವಾ ಸಂಘದ ಅಧ್ಯಕ್ಷ ಎಸ್.ಎಚ್.ನಾಶಿಪುಡಿ, ಪತ್ರಕರ್ತರನ್ನು ಸನ್ಮಾನಿಸಲಾಯಿತು.
ಪುರಸಭೆ ಸದಸ್ಯರಾದ ಮುತ್ತಣ್ಣ ಕೊರವರ, ಎ.ಪಿ.ಗುರಿಕಾರ, ನಾಗಪ್ಪ ದಳವಾಯಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಮೃತ ಮೀಸೆ, ಬಸವಣ್ಣೆವ್ವ ದಿಡ್ಡಿ, ಅಮೀನಾಬಾನು ಬಾರಿಗಿಡದ, ಇಮಾಮಸಾಬ ದರವಾನಿ. ಸಿ.ಜಿ.ನ್ಯಾವಳಿ ಪೌರಕಾರ್ಮಿಕರ ಸೇವೆಯನ್ನು ಶ್ಲಾಘೀಸಿದರು. ಪುರಸಭೆ ಸದಸ್ಯ ಶಿವಾನಂದ ಬೆಳಹಾರ ಪೌರಕಾರ್ಮಿಕ ಮಹಿಳೆಯರಿಗೆ ಸೀರೆ, ಹಾಗೂ ಪುರಷರಿಗೆ ಪ್ಯಾಂಟ್ ಶರ್ಟ್ ಬಟ್ಟೆ ವಿತರಿಸುವ ಮೂಲಕ ಪ್ರೋತ್ಸಾಹ ನೀಡಿ ಅವರ ಸೇವೆ ಸ್ಮರಿಸಿದರು.
ಈ ವೇಳೆ ಪೌರಕಾರ್ಮಿಕರು, ಪುರಸಭೆ ಸಿಬ್ಬಂದಿ ವರ್ಗ, ಆಡಳಿತ ಮಂಡಳಿ ಸದಸ್ಯರು, ಮಹಿಳೆಯರು, ಉಪಸ್ಥಿತರಿದ್ದರು.

Related posts

ಏಳು ಮಕ್ಕಳ ತಾಯಮ್ಮ ದೇವಿಗೆ ಸಂಕ್ರಾಂತಿ ಸಿಂಗಾರ

eNewsLand Team

ಸಂತ ಶಿಶುನಾಳ ಶರೀಫರ ಪುರಾಣ ಪ್ರವಚನ

eNEWS LAND Team

ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸ್ಪಂದಿಸಲು ಸೂಚನೆ: ಸತೀಶ ಚಿಟಗುಪ್ಪಿ

eNEWS LAND Team