24.3 C
Hubli
ಮೇ 26, 2024
eNews Land
ಸುದ್ದಿ

ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸ್ಪಂದಿಸಲು ಸೂಚನೆ: ಸತೀಶ ಚಿಟಗುಪ್ಪಿ

ಇಎನ್‌ಎಲ್ ಅಣ್ಣಿಗೇರಿ: ತಾಲೂಕಿನ ಸರ್ಕಾರಿ ಇಲಾಖೆಗಳಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ, ಸ್ಪಂದಿಸಿ, ಅಲೆದಾಡುವುದಕ್ಕೆ ಅವಕಾಶ ಕಲ್ಪಿಸದೇ, ವಿಳಂಭಕ್ಕೆ ಕಾರಣಗಳನ್ನು ನೀಡದೇ, ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ಇಲಾಖೆ ಅಧಿಕಾರಿಗಳಿಗೆ ಧಾರವಾಡ ಕರ್ನಾಟಕ ಲೋಕಾಯುಕ್ತ ಅಧಿಕಾರಿ ಸತೀಶ ಚಿಟಗುಪ್ಪಿ ಹೇಳಿದರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ  ತಾಲೂಕಿನ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ  ಆಯೋಜಿಸಿದ ಸಾರ್ವಜನಿಕರ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದರು.
ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮದ್ಯ ಮಾರಾಟ ಹಾವಳಿ ಹೆಚ್ಚುತ್ತಿದ್ದು ಪರವಾನಗಿ ರಹಿತ ಮಾರಾಟಗಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಅಬಕಾರಿ ಇಲಾಖೆ ಅಧಿಕಾರಿ ಗೀತಾ ತಗ್ಗಿಹಾಳ ಅವರಿಗೆ ಸೂಚಿಸಿದರು.
ತಾಲೂಕ ತಹಶೀಲ್ದಾರ ಹಾಗೂ ತಾಲೂಕ ಪಂಚಾಯತ  ಅಧಿಕಾರಿಗಳು ಸಾರ್ವಜನಿಕ ಅಹವಾಲು ಸ್ವೀಕರಿಸಿ ಸಂಬoಧಪಟ್ಟ ಇಲಾಖೆಗಳಿಗೆ ವರ್ಗಾಯಿಸಿ ಸಾರ್ವಜನಿಕರಿಗೆ ತೊಂದರೆಯಾಗದoತೆ ಸೂಕ್ತ ಕ್ರಮ ಕೈಗೊಳ್ಳಬೇಕು.
ಪಟ್ಟಣದಲ್ಲಿ ಪ್ರತಿವಾರ ಜರುಗುವ ಶುಕ್ರವಾರ ಸಂತೆಯಲ್ಲಿ ಮೊಬೈಲ್ ಹಾಗೂ ಹಣ ಕಿಸೆಕಳ್ಳರಿಂದ ಕಳವು ಆಗುತ್ತಿದ್ದು, ಪೋಲಿಸ್ ಇಲಾಖೆ ಸಿಬ್ಬಂದಿ ನೇಮಿಸಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದರು.
ಪಡಿತರ ವಿತರಣಾ ಕೇಂದ್ರಗಳಲ್ಲಿ ಎಲೆಕ್ಟಾçನಿಕ ತೂಕದ ಯಂತ್ರ ಅಳವಡಿಸಿದ್ದನ್ನು ಗಮನ ಹರಿಸಬೇಕು.ತಾಲೂಕಿನಲ್ಲಿ  692 ಹೊಸ  ಪಡಿತರ ಅರ್ಜಿಗಳು ಬಂದಿದ್ದು, ಶೀಘ್ರ ಪರಿಶೀಲಿಸಿ ಫಲಾನುಭವಿಗಳಿಗೆ ಪಡಿತರ ಕಾರ್ಡು ವಿತರಿಸಬೇಕೆಂದು ಆಹಾರ ಸರಬರಾಜು ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಎಪಿಎಮ್’ಸಿ ಅವರಣದಲ್ಲಿ ಕುಡುಕರ ಹಾವಳಿ ಪ್ರತಿನಿತ್ಯ ಹೆಚ್ಚುತ್ತಿದ್ದು. ಅಂತವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಲು ಪಿಎಸ್ಆಯ್ ಸಿದ್ಧಾರೂಢ ಆಲದಕಟ್ಟಿ ಅವರಿಗೆ ಹೇಳಿದರು.
ಸಾರ್ವಜನಿಕರಿಗೆ, ಹರಣಶಿಕಾರಿ ಜನರಿಗೆ ಮೂಲಸೌಲಭ್ಯ ಕಲ್ಪಿಸಿ ಸರ್ಕಾರಿ ಯೋಜನೆಗಳ ಸಾಲ ಸೌಲಭ್ಯ ಒದಗಿಸಿ, ಸ್ವಯಂ ಉದ್ಯೋಗಕ್ಕೆ ಪ್ರೇರಣೆ ಕೊಡಲು ಸೂಚಿಸಿದರು.
ರಾಷ್ಟಿಯ ಹೆದ್ದಾರಿಯಲ್ಲಿ ಪೈ ಓವರ್ ಬ್ರೀಜ್ ನಿರ್ಮಾಣವಿಲ್ಲದೇ, ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಲು  ಸರ್ವಿಸ್ ರಸ್ತೆಯಿಲ್ಲದೇ ಸಾಕಷ್ಟು ಅಪಘಾತಗಳು ಸಂಭವಿಸುತ್ತಿದ್ದು. ಆ ಹಿನ್ನಲೆಯಲ್ಲಿ ಅಪಘಾತಗಳ ಪ್ರಮಾಣ ಹೆಚ್ಚದಂತೆ ಕ್ರಮಕೈಗೊಳ್ಳಬೇಕೆಂದು ಹೇಳಿದರು.
ಪಟ್ಟಣದಲ್ಲಿ 24/7 ಕುಡಿಯುವ ನೀರಿನ ಜಲಜೀವನ ಯೋಜನೆ ಜಾರಿಗೆ ತಂದಿದ್ದು. ಈಗಾಗಲೇ 23 ವಾರ್ಡುಗಳಿಗೆ ನಳದ ಜೋಡಣೆ ಮಾಡಿದೆ. ಕೆಲವೊಂದು ಕಡೆ ಅಪೂರ್ಣ ಕೆಲಸವಾಗಿದ್ದು, 2023 ಜನೇವರಿ ತಿಂಗಳು ಕಾಮಗಾರಿ ಪೂರ್ಣಗೊಳಿಸುತ್ತೇವೆಂದು ಹೇಳಿದ ಗುತ್ತಿಗೆದಾರರು. ವಿಳಂಭಮಾಡುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗದoತೆ ಶುದ್ಧಕುಡಿಯುವ ನೀರು ಒದಗಿಸಲು ಕ್ರಮಕೈಗೊಳ್ಳಬೇಕೆಂದು ಪುರಸಭೆ ಸದಸ್ಯ ಎ.ಪಿ.ಗುರಿಕಾರ ಆರೋಪಿಸಿದರು.
ಲೋಕಾಯುಕ್ತ ಡಿವೈಎಸ್ಪಿ ವಿಜಯಕುಮಾರ ಬಿರಾದರ ತಾಲೂಕಿನ ಆಡಳಿತ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಕುರ್ತಕೋಟಿ, ತಹಶೀಲ್ದಾರ ಮಹಾಂತೇಶ ಮಠದ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕಪಿಲಾ ಎಲವಗಿ, ಕೃಷಿ ಅಧಿಕಾರ ಶ್ರೀನಾಥ ಚಿಮ್ಮಲಗಿ, ಕಂದಾಯ ಇಲಾಖೆ ಅಧಿಕಾರಿ ಅರುಣಕುಮಾರ ಕರಿಶಂಕರಿ ಇನ್ನುಳಿದoತೆ ತಾಲೂಕಿನ ಎಲ್ಲ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಇದ್ದರು. 

 

Related posts

ಅಣ್ಣಿಗೇರಿ ತಾ.ಪಂ ಕಚೇರಿಯಲ್ಲಿ ಖಾಲಿ ಕುರ್ಚಿಗಳ ಆಡಳಿತ!!

eNEWS LAND Team

ಕಡಿಮೆ ವೆಚ್ಚ, ತ್ವರಿತ ಗತಿಯಲ್ಲಿ ನ್ಯಾಯದಾನವಾಗಬೇಕು: ರಾಜ್ಯಪಾಲ ಗೆಹ್ಲೋತ್

eNEWS LAND Team

ಆಯುಷ್ ಪದ್ದತಿಯನ್ನು ಅಳವಡಿಸಿಕೊಳ್ಳಿ : ಸಂಸದ ಗದ್ದಿಗೌಡರ

eNEWS LAND Team