23 C
Hubli
ಮೇ 7, 2024
eNews Land
ಸುದ್ದಿ

ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ: ಪ್ರಭುಲಿಂಗ ರಂಗಾಪುರ

ಇಎನ್ಎಲ್ ಕಲಘಟಗಿ: ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಅರ್ಥಪೂರ್ಣ ಕಾರ್ಯವನ್ನು ಮಸಾಪ ಮಾಡುತ್ತಿರುವುದು ಶ್ಲಾಘನೀಯ  ಎಂದು ಕರ್ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಹಾಗೂ ರಂಗಭೂಮಿ ಕಲಾವಿದ ಎಚ್.ಎನ್.ಸುನಗದ್ ಹೇಳಿದರು.

ಅವರು ಮುಕ್ಕಲ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತು ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಸನ್ಮಾನ ಪುರಸ್ಕಾರ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯಕ್ಕೆ ಶೇ.100ರಷ್ಟು ಗಳಿಸಿ ವಿದ್ಯಾರ್ಥಿಗಳು ಇದರಿಂದ ಪ್ರೇರಣೆಗೊಂಡು ಮುಂದಿನ ಶೈಕ್ಷಣಿಕ ಹಂತಗಳಲ್ಲೂ ಇನ್ನೂ ಹೆಚ್ಚಿನ ನಿರಂತರ ಸಾಧನೆ ಮಾಡಿ ಉನ್ನತ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಯಶಸ್ವಿ ವ್ಯಕ್ತಿಗಳಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ ರಾಜ್ಯ ಯುವ ಪ್ರಶಸ್ತಿ ವಿಜೇತ ಪ್ರಭುಲಿಂಗ ರಂಗಾಪುರ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡದೇ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕೆಂದು ನುಡಿದು ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲೆ ಮತ್ತು ತಾಲೂಕಿನಲ್ಲಿ ನಿರಂತರವಾಗಿ ಸಂದರ್ಭೋಚಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅದರ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಎಸ್.ಎಂ.ಒಡೆಯರ್ ಮಾತನಾಡಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕನ್ನಡ ಭಾಷಾ ವಿಷಯದಲ್ಲಿ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ವ್ಯರ್ಥ ಮಾಡದೇ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕೆಂದು ವ್ಯಕ್ತಪಡಿಸಿದರಲ್ಲದೇ ಪಾಲಕರು ಮಕ್ಕಳ ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡೆ, ಸಾಂಸ್ಕoತಿಕ ಕ್ಷೇತ್ರದ ಸಾಧನೆಗೂ ಪ್ರೇರಣೆ ನೀಡಿ ಮಕ್ಕಳ ಸರ್ವಾಂಗೀಣ ಪ್ರಗತಿಗೂ ಪ್ರೋತ್ಸಾಹ ನೀಡಬೇಕೆಂದು ನುಡಿದರು. 

ಕನ್ನಡ ಭಾಷಾ ವಿಷಯದಲ್ಲಿ ಶೇ.100 ರಷ್ಟು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಿ ಪ್ರಮಾಣ ಪತ್ರ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕರ್ನಾಟಕ ಸಂಗ್ರಾಮ ಸೇನೆ ತಾಲೂಕಾಧ್ಯಕ್ಷ ಸಾತಪ್ಪ ಕುಂಕೂರ, ವಕೀಲ ರಮೇಶ ಸೋಲಾರಗೊಪ್ಪ ಮಾತನಾಡಿದರು.

ಈ ವೇಳೆ ಪ್ರೌಢ ಶಾಲೆಯ  ಮುಖ್ಯೋಪಾಧ್ಯಾಯ ಆರ್.ಎಚ್ ಕುಂದರಗಿ, ಪ್ರಕಾಶ ಕುಂಬಾರ, ಪದ್ಮಾಕ್ಷಿ ಒಡೆಯರ, ಮಂಜುನಾಥ ಜಾಯನಗೌಡ್ರ, ಹುಲೆಪ್ಪ ಗ್ಯಾನಪ್ಪನವರ, ಶಿವು ವಾಲಿಕಾರ ಸೇರಿದಂತೆ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Related posts

ವರ್ಷದ ಪ್ರತಿಭಟನೆ ಸುಖಾಂತ್ಯ: ಪಂಜಾಬ್ ಮನೆಯೆಡೆಗೆ ರೈತರು! ಭರ್ಜರಿ ಸಂಭ್ರಮ ನೋಡಿ

eNewsLand Team

ದಾಸೋಹಮಠದ ಅದ್ದೂರಿ ಜಾತ್ರೆಗೆ  ಬ್ರೇಕ್!!!

eNEWS LAND Team

ಅಂಬಿರ ಚೌಡಯ್ಯ ಪೀಠಕ್ಕೆ ರೂ.80ಸಾವಿರ ಸಾಮಾಗ್ರಿಗಳ ಕೊಡುಗೆ

eNEWS LAND Team