22.6 C
Hubli
ಜುಲೈ 4, 2022
eNews Land
ಸುದ್ದಿ

ಸಂತ ಶಿಶುನಾಳ ಶರೀಫರ ಪುರಾಣ ಪ್ರವಚನ

Listen to this article

ಇಎನ್ಎಲ್ ಅಣ್ಣಿಗೇರಿ: ಸಂತ ಶಿಶುನಾಳ ಶರೀಫರ ಆದರ್ಶಜೀವನ, ಬದುಕು, ಜಾತಿ-ಮತ-ಪಂಥವೆನ್ನದೇ, ಸಮಾಜದ ಅಂಕುಡೊoಕುಗಳನ್ನು ತಿದ್ದುವ, ಹಿಂದೂ-ಮುಸ್ಲಿo ಭಾವೈಕ್ಯತೆಗೆ, ಗುರುಶಿಷ್ಯರ ಸಾಮರಸ್ಯ, ಮಾನವ ಕಲ್ಯಾಣದ ಪ್ರಗತಿಗೆ ಜಾಗೃತಿ ಸಂದೇಶಗಳ ಮೂಲಕ ತತ್ವಪದ ಹಾಡಿ,ಸತ್ಪುರಷರಾಗಿ ನೀಡಿರುವ ಕೊಡುಗೆ ಅಪಾರ, ಅಂತಹ ಮಹಾತ್ಮರ ಮೌಲ್ಯಗಳನ್ನು ಪುರಾಣದಲ್ಲಿ ಆಲಿಸಿದ ನೀವು ಬದುಕಿನಲ್ಲಿ ಅಳವಡಿಸಿಕೊಂಡು ಪುನಿತರಾಗಬೇಕೆಂದು ಪ್ರವಚನಕಾರರಾದ ಕುಮಾರದೇವರು ಹಿರೇಮಠ ಹೇಳಿದರು.
ಪಟ್ಟಣದ ಪುರಧೀರೇಶ್ವರ ದೇವಸ್ಥಾನ ಟ್ರಸ್ಟ ಮಂಡಳಿ ಆಶ್ರಯದಲ್ಲಿ ಕಾರ್ತಿಕ ಮಾಸದ ನಿಮಿತ್ಯಆಯೋಜಿಸಿದ ಸಂತ ಶಿಶುನಾಳ ಶರೀಫರ ಪುರಾಣ ಮಂಗಲೋತ್ಸವದಲ್ಲಿ ಮಾತನಾಡಿದರು.
ಸಾನಿಧ್ಯ ವಹಿಸಿದ ಇಂಚಗೇರಿ ಶಾಖಾಮಠದ ಡಾ.ಎ.ಸಿ.ವಾಲಿ, ಮಹಾರಾಜ, ಸಂಶಿ ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀ, ಮಣಕವಾಡ ಅನ್ನದಾನೇಶ್ವರ ಮಠದ ಅಭಿನವ ಮೃತ್ಯುಂಜಯ ಶ್ರೀ, ಆಶೀರ್ವಚನ ನೀಡಿದರು.ಅಧ್ಯಕ್ಷತೆಯನ್ನು ಟ್ರಸ್ಟ್ ಕಮೀಟಿ ಉಪಾಧ್ಯಕ್ಷ ಈಶ್ವರಪ್ಪ ಉಳ್ಳಾಗಡ್ಡಿ ವಹಿಸಿದ್ದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ, ಹಾಗೂ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ವಿಜಯ ಗುಡ್ಡದ, ಕುಮಾರಿ ಮೇಘನಾ ಜೈನ್, ಸಂಜೀವ ಕಾಳೆ,ಅವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾಜಿ ಕ್ರೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ, ಟ್ರಸ್ಟ ಕಮೀಟಿ ಅಧ್ಯಕ್ಷ ಶಿವಯೋಗಿ ಸುರಕೋಡ, ನಿಜಲಿಂಗಪ್ಪ ಅಕ್ಕಿ, ಮಹಾಬಳೇಶ್ವರ ಹೆಬಸೂರು, ಶೇಖಪ್ಪ ಸೊಟಕನಾಳ, ವಿರೇಶ ಕುಬಸದ ಚಂದ್ರಣ್ಣ ಕೊಟ್ಟೂರು, ಸದ್ಭಕ್ತರು ಮಹಿಳೆಯರು, ಉಪಸ್ಥಿತರಿದ್ದರು. ಎ.ಎಸ್ ಪ್ರಣತಿ ಚಲನಚಿತ್ರ ಹಿನ್ನಲೆಗಾಯಕಿ ಹಾಗೂ ಕುಮಾರಿ ಕೌಶಲ್ಯ ಹಾಗೂ ಸಂಗಡಿಗರಿoದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

Related posts

ಹುಬ್ಬಳ್ಳಿಯಲ್ಲಿ ಹರಿದ ನೆತ್ತರು! ಇಬ್ಬರಿಗೆ‌ ಚಾಕು ಇರಿತ, ಪೊಲೀಸ್ ಬೇಟೆ ಶುರು!!

eNewsLand Team

ಅಣ್ಣಿಗೇರಿ ಜನತೆಗೆ 24/7 ಕುಡಿಯುವ ನೀರು ಯಾವಾಗ? ದಾಹ ಇಂಗಿಸುವುದ್ಯಾವಾಗ?

eNewsLand Team

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

eNewsLand Team