22 C
Hubli
ಅಕ್ಟೋಬರ್ 1, 2023
eNews Land
ಸುದ್ದಿ

ಕನ್ನಡ ನಾಡು ಉಳಿಸಿ ಬೆಳಸಿ ಕನ್ನಡ ಮನಸ್ಸುಗಳನ್ನು ಕಟ್ಟಿ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಇಎನ್ಎಲ್ ಅಣ್ಣಿಗೇರಿ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ನಾಡಿನ ಭಾಷೆ, ನೆಲ, ಜಲ, ಸಾಹಿತ್ಯ, ಸಂಸ್ಕೃತಿ, ಉಳಿಸುವಲ್ಲಿ ಕನ್ನಡಿಗರ ಕನ್ನಡ ಮನಸ್ಸು ಕಟ್ಟುವ ಮುಖಾಂತರ ಕನ್ನಡ ಕಂಪು ಪಸರಿಸಿ, ಕನ್ನಡ ಸಾಹಿತ್ಯ ಸಮ್ಮೇಳನಗಳ ಮೂಲಕ ಒಗ್ಗೂಡಿಸುತಿದೆ ಎಂದು ಉದ್ಘಾಟನೆ ನೇರವೆರಸಿ ಸಚಿವ  ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿದರು. ಪಟ್ಟಣದ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ ಅಣ್ಣಿಗೇರಿ ಕಸಾಪ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಇದನ್ನೂ ಓದಿ:ರಂಗಿನಾಟದಲ್ಲಿ ಮಿಂದೆದ್ದ ವಾಣಿಜ್ಯ ನಗರಿ ಹುಬ್ಬಳ್ಳಿ ಸಂಭ್ರಮ ಹೇಗಿತ್ತು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್

ಅಣ್ಣಿಗೇರಿ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ಗೆ ಸ್ವಂತ ಕಟ್ಟಡ ನಿವೇಶನಕ್ಕೆ ಬೇಡಿಕೆ ಇಟ್ಟದ್ದಿರಿ. ತಮ್ಮೆಲ್ಲರ ಆಕಾಂಕ್ಷೆಗೆ ಸರಕಾರದಿಂದ ಅನುದಾನ ಒದಗಿಸಲು ಬದ್ಧನಿರುವುದಾಗಿ  ಭರವಸೆ ನೀಡಿದರು. ಸದ್ಯ ₹3 ಕೋಟಿ ರೂ.ಗಳ ವೆಚ್ಚದ ಒಂದೂವರೆ ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಪಂಪಸ್ಮಾರಕ ಭವನ ಕೇವಲ ಔಪೋಚಾರಕವಾಗಿ ಸೀಮಿತ ಕಾರ್ಯಕ್ರಮಗಳಿಗೇ ಮೀಸಲಾಗಿದ್ದು, ಅಲ್ಲಿ ಖಾಲಿ ಕೊಠಡಿಗಳಿದ್ದು, ತಮ್ಮ ಕಸಾಪ ಕಾರ್ಯಾಲಯ ಚಟುವಟಿಕಗಳಿಗೆ ಬಳಿಸಿಕೊಳ್ಳಬೇಕೆಂದರು.

ಇದನ್ನೂ ಓದಿ:ಇಂದು ಪಂ.ಭೀಮಸೇನ ಜೋಶಿ ಜನ್ಮ ಶತಮಾನೋತ್ಸವ ಸಮಾರಂಭ

ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ ಅಂಗಡಿ ಪರಿಷತ್ತಿನ ಧ್ವಜ ನೂತನ ಅಧ್ಯಕ್ಷರಿಗೆ ಹಸ್ತಾಂತರಿಸಿ ಮಾತನಾಡಿದರು. ಡಾ.ಎ.ಸಿ.ವಾಲಿ ಪ್ರಮಾಣವಚನ ಭೋದಿಸಿದರು. ಪದ್ಮಶ್ರೀ ಪುರಸ್ಕೃತ ಎ.ಆಯ್.ನಡಕಟ್ಟಿನ, ಜನಪದ ಪುರಸ್ಕೃತ ಸುಭಾಸಚಂದ್ರ ಹೊಸಮನಿ, ವಿ.ಎಮ್.ಹಿರೇಮಠ, ಶ್ರೀಶೈಲ್ ಮೂಲಿಮನಿ, ಅವರನ್ನು ಕಸಾಪದಿಂದ ಸನ್ಮಾನಿಸಲಾಯಿತು.
ಸಾನಿಧ್ಯವಹಿಸಿದ್ದ ದಾಸೋಹ ಮಠದ ಶಿವಕುಮಾರ ಶ್ರೀಗಳು ಮಾತನಾಡಿ, ಕಸಾಪ ಪದಗ್ರಹಣ ವೇದಿಕೆ, ಸಾಂಸ್ಕೃತಿಕ ಕಾರ್ಯಕ್ರಮ, ಗಣ್ಯರ ಸನ್ಮಾನ ಒಳಗೊಂಡು, ವೈಶಿಷ್ಟ ಸಮಾರಂಭ ಭರ್ಜರಿ ಇದ್ದಾಗ ಇನ್ಮುಂದಿನ ತಾಲೂಕಿನ ಕಸಾಪ ಸಮ್ಮೇಳನ ಸಿನಿಮಾ ಇನ್ಯಾವ ರೀತಿ ಇರಬಹುದು? ಮಕ್ಕಳಿಗೆ ಕನ್ನಡ ಸಂಪೂರ್ಣ ಕಲಿಸಿ, ಕನ್ನಡಭಾಷೆ ಪ್ರಭುತ್ವ ಹೆಚ್ಚಿಸಿ, ಕನ್ನಡ ಸ್ಪರ್ಧೆಗಳನ್ನು ಆಯೋಜಿಸಿ, ಕನ್ನಡ ನೆಲ, ಜಲ,ಸಾಹಿತ್ಯ, ಭಾಷೆ, ಉಳಿಸಿ ಬೆಳೆಸುವ ಕೆಲಸ ಪದಾಧಿಕಾರಿಗಳು ಮಾಡಬೇಕೆಂದರು. 

ಇದನ್ನೂ ಓದಿ:ಅಣ್ಣಿಗೇರಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಪದಸ್ವೀಕಾರ ನಾಳೆ

ಸ.ಸ.ಡಾ.ಎಸಿ.ವಾಲಿ ಮಹಾರಾಜರು ಮಾತನಾಡಿ, ಕಸಾಪ ಪದಗ್ರಹಣ ಸಮಾರಂಭ ಸಾಹಿತ್ಯ ಸಮ್ಮೇಳನದಷ್ಟು ಯಶಸ್ಸು ಕಾಣುತ್ತಿರೋಸು ಸಂತಸ ತಂದಿದೆ ಪದಾಧಿಕಾರಿಗಳು. ತಾಲೂಕಿನಲ್ಲಿ ಕನ್ನಡ ಬೆಳೆಸುವ ಚಟುವಟಿಕೆ ಕಾರ್ಯಕ್ರಮಗಳು,  ದತ್ತಿ ಉಪನ್ಯಾಸ,ಜೊತೆಗೆ ಆದಿಕವಿ ಪಂಪ, ರನ್ನ, ಹಳೆಗನ್ನಡ ಕವಿಗಳ ಕುರಿತು ಉಪನ್ಯಾಸ ನೀಡಿದರೇ ಮಕ್ಕಳು ಕವಿ ಪರಿಚಯ ಇತಿಹಾಸ ತಿಳಿಯಲು ಸಾಧ್ಯ. ಒಡೆದ ಮನಸ್ಸು, ಕಂಡ ಕನಸು, ಕನ್ನಡ ಮನಸ್ಸು ಕಟ್ಟುವ  ಕನ್ನಡ ಭಾಷಾಪ್ರಭುತ್ವ ಬೆಳಿಸಿ, ಉಳಿಸಬೇಕೆಂದರು.

ಇದನ್ನೂ ಓದಿ:ಅಣ್ಣಿಗೇರಿಯಲ್ಲಿ ಸಂಭ್ರಮದ ಹೋಳಿ ಹಬ್ಬ

ಪದ್ಮಶ್ರೀ ಪುರಸ್ಕೃತ ಎ.ಆಯ್.ನಡಕಟ್ಟಿನ, ಜನಪದ ಪುರಸ್ಕೃತ ಸುಭಾಸಚಂದ್ರ ಹೊಸಮನಿ, ಧಾ.ಜಿ.ಕಸಾಪ.ಅಧ್ಯಕ್ಷ ಲಿಂಗರಾಜ ಅಂಗಡಿ, ನಿ.ಪೂ.ಕಸಾಪ ಅಧ್ಯಕ್ಷ ಪ್ರಕಾಶ ಅಂಗಡಿ, ಅಣ್ಣಿಗೇರಿ ಕಸಾಪ ಅಧ್ಯಕ್ಷ ರವಿರಾಜ ವೇರ್ಣೆಕರ, ಅವರನ್ನು ನವಲಗುಂದ-ಅಣ್ಣಿಗೇರಿ ತಾಲೂಕ ಹೂಗಾರ  ಸಮಾಜ ಭಾಂದವರು, ಸನ್ಮಾನಿಸಿ ಗೌರವಿಸಿದರು.
ಅಧ್ಯಕ್ಷತೆವಹಿದ್ದ ಧಾ.ಜಿ.ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಮಾತನಾಡಿ, ಕಸಾಪ ಪದಾಧಿಕಾರಿಗಳ ಪದಗ್ರಹಣ, ಸಾಂಸ್ಕೃತಿಕ ಕಾರ್ಯಕ್ರಮ, ಗಣ್ಯರ ಸನ್ಮಾನ,ಕನ್ನಡ ಮನಸ್ಸು ಒಗ್ಗೂಡಿಸುವ ಕಾರ್ಯ ಸಂತಸ ತಂದಿದೆ. ಧಾ.ಜಿ.ಕಸಾಪಕ್ಕೆ ,3ನೇ ಅವಧಿಗೆ ಜಿಲ್ಲಾಧ್ಯಕ್ಷನಾದ ಮೇಲೆ ಈವರೆಗೂ 80 ದತ್ತಿ ದಾನಿಗಳನ್ನು ಮಾಡಿದ್ದೇನೆ.100 ದತ್ತಿದಾನಿಗಳ ಗುರಿ ಹೊಂದಿರುವೆ.  ಅದರಂತೆ ಅಣ್ಣಿಗೇರಿ ತಾಲೂಕಿನಲ್ಲಿ ಪ್ರಥಮವಾಗಿ ಮಂಜುಳಾ ಸಿ.ಹೂಗಾರ ತಾಯಿ ಸ್ಮಣಾರ್ಥ ಕಸಾಪಕ್ಕೆ ಶ್ರೀಮತಿ ಮಹಾಂತವ್ವ ಚೆನ್ನಬಸಪ್ಪ ಹೂಗಾರ ದತ್ತಿ ನಿಧಿ ನೀಡುವ ಮುಖಾಂತರ ಆರಂಭಗೊoಡಿದ್ದು, ಒಟ್ಟು ತಾಲೂಕಿನಲ್ಲಿ 7 ದತ್ತಿದಾನಿಗಳು ಕಸಾಪ ದತ್ತಿನಿಧಿಗೆ ಸೇರ್ಪಡೆಯಾಗಿರೋದು ಶ್ಲಾಘನೀಯ ಎಂದರು.

ಇದನ್ನೂ ಓದಿ:ಭಾರತ ದೇಶದ ಆತ್ಮ ಆಧ್ಯಾತ್ಮ ಧರ್ಮ: ಬಿ.ವೈ.ವಿಜಯೇಂದ್ರ

ಈ ಸಂದರ್ಭದಲ್ಲಿ ಪ್ರೊ.ಎಸ್.ಎಸ್.ಹರ್ಲಾಪೂರ, ಶಿವಶಂಕರ ಕಲ್ಲೂರ, ಮಾಜಿ ಕ್ರೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ, ಬಸವರಾಜ ಕುಬಸದ, ಕಸಾಪ ಪದಾಧಿಕಾರಿಗಳು, ಶಿಕ್ಷಕರ ವೃಂದ, ಸಾರ್ವಜನಿಕರು ಉಪಸ್ಥಿತರಿದ್ದರು. ಅಮೃತೇಶ ತಂಡರ ಪ್ರಾಸ್ತವಿಕವಾಗಿ ಮಾತನಾಡಿದರು. ಅಣ್ಣಿಗೇರಿ ಕಸಾಪ ಅಧ್ಯಕ್ಷ ರವಿರಾಜ ವೇರ್ಣೆಕರ ಸ್ವಾಗತಕೋರಿದರು. ಪ್ರಕಾಶ ಶಂಖೋ, ನಿರೂಪಿಸಿದರು. ಬಿ.ವ್ಹಿ ಅಂಗಡಿ ವಂದಿಸಿದರು.ನoತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
.ಇದನ್ನೂ ಓದಿ:ಅನ್ಯಜಾತೀಯ ಹುಡುಗರನ್ನು ಪ್ರೀತಿಸಿ ಮದುವೆಯಾಗುವ ಹುಡುಗಿಯರೇ ಹುಷಾರ್!!!

Related posts

ಹುಬ್ಬಳ್ಳಿ ವಿಮಾನ ನಿಲ್ದಾಣದ ಟರ್ಮಿನಲ್ ವಿಸ್ತರಣೆಗೆ ರೂ. 273 ಕೋಟಿ ಬಿಡುಗಡೆ : ಸಚಿವ ಜೋಶಿ

eNEWS LAND Team

ಧಾರಾಕಾರ ಮಳೆ; ಉತ್ತರ ಕನ್ನಡ, ಉಡುಪಿ ಶಾಲೆಗೆ‌ ರಜೆ, ಕೊಡಗಲ್ಲಿ ಗುಡ್ಡ ಕುಸಿತ

eNewsLand Team

ಬ್ಲಾಕ್ ಆ್ಯಂಡ್ ವೈಟ್ ನಂಬಿ ಕಲಘಟಗಿ ಕೆಲಸ ಬಿಟ್ಟ ವೈದ್ಯೆಗೆ ₹ 50 ಲಕ್ಷ ಪಂಗನಾಮ!!

eNewsLand Team