37 C
Hubli
ಏಪ್ರಿಲ್ 25, 2024
eNews Land
ಸುದ್ದಿ

ಇಂದು ಪಂ.ಭೀಮಸೇನ ಜೋಶಿ ಜನ್ಮ ಶತಮಾನೋತ್ಸವ ಸಮಾರಂಭ

ಇದನ್ನೂ ಓದಿ:ಸಂಗೀತ ಕಾಶಿ ಕುಂದಗೋಳ ಹಾಗೂ ಸಂಗೀತ ಕಲಾವಿದರ ತವರು

ಇಎನ್ಎಲ್ ಕುಂದಗೋಳ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಹಾಗೂ ಶ್ರೀ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ಕುಂದಗೋಳ ಇವರ ಸಂಯೋಗದೊಂದಿಗೆ

ಭಾರತರತ್ನ ಪಂ.ಭೀಮಸೇನ ಜೋಶಿ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಮಾ.22 ಮಂಗಳವಾರ ಸಂಜೆ 5 ಘಂಟೆಗೆ ಪಟ್ಟಣದ ಸವಾಯಿ ಗಂಧರ್ವ ಸ್ಮಾರಕ ವಿಶ್ವಸ್ಥ ಸಂಸ್ಥೆ ಸಭಾಂಗಣದಲ್ಲಿ ಜರುಗುವುದು ಎಂದು ಸಂಸ್ಥೆಯ ಅಧ್ಯಕ್ಷ ಅರವಿಂದ್ ಕಟಗಿ ಅವರು ಹೇಳಿ, ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿಶಾಸಕಿ ಕುಸುಮಾವತಿ ಶಿವಳ್ಳಿ, ವಿಜಯ ಕರ್ನಾಟಕ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ಡಾ.ಬಂಡು ಕುಲಕರ್ಣಿ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಅಧ್ಯಕ್ಷರಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರಿನ ಆನೂರು ಅನಂತಕೃಷ್ಣ ಶರ್ಮ ಹಾಗೂ ಮುಂತಾದವರು ಪಾಲ್ಗೊಳ್ಳುವರು. ಈ ಸಂಗೀತ ಸಮಾರಂಭದಲ್ಲಿ ಶಹನಾಯಿ, ಹಿಂದೂಸ್ತಾನಿ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ದ್ವಂದ್ವ ವಾದನ, ದ್ವಂದ್ವ ಗಾಯನ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುವವು. ಈ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಮತ್ತು ಸಂಸ್ಕೃತಿ ಇಲಾಖೆಯ ರಿಜಿಸ್ಟರ್ ಎಸ್.ಹೆಚ್.ಶಿವರುದ್ರಪ್ಪ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ಸಂಚಾಲಕಿ ಹೇಮಾ ವಾಗ್ಮೋಡೆ, ಅಶೋಕ್ ನಾಡಿಗೇರ, ಆರ್.ಐ.ಬ್ಯಾಹಟ್ಟಿ, ಜಿತೇಂದ್ರ ಕುಲಕರ್ಣಿ, ಎಂ.ಕೆ.ಕುಲಕರ್ಣಿ ಹಾಗೂ ಇತರರಿದ್ದರು.

Related posts

ಹಾಟ್ ಫೋಟೋಶೂಟ್ ಮಾಡಿಸ್ಕೊಂಡು ಮನೇಲಿ ಬೈಸ್ಕೊಂಡ್ರಾ ಪಾಯಲ್!?

eNewsLand Team

ಬಿಪಿನ್ ರಾವತ್ ದುರಂತದ ಬಳಿಕ ಹುಬ್ಬಳ್ಳಿಯಲ್ಲಿ ಆತಂಕ ಸೃಷ್ಟಿಸಿದ ವಿಮಾನ! ಸಿಎಂ, ಸೆಂಟ್ರಲ್ ಮಿನಿಸ್ಟರ್ ವಿಮಾನದಲ್ಲಿ ಇದ್ರು.!!

eNEWS LAND Team

6000 ಸಿ.ಎಸ್.ಸಿ ಕೇಂದ್ರಗಳ ಸ್ಥಾಪನೆ: ಎಲ್.ಎಚ್.ಮಂಜುನಾಥ

eNEWS LAND Team