37 C
Hubli
ಏಪ್ರಿಲ್ 26, 2024
eNews Land
ದೇಶ ರಾಜ್ಯ ಸುದ್ದಿ

ಹುಬ್ಬಳ್ಳಿ ಸಿದ್ಧಾರೂಢಮಠ ಮೂರಸಾವಿರ ಮಠದ ದರ್ಶನ ಪಡೆದ ಜೆ.ಪಿ.ನಡ್ಡಾ

ಇದನ್ನು ಓದಿ:ಹು-ಧಾ ಸೆಂಟ್ರಲ್ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಪಡೆದ ಶೆಟ್ಟರ್

ಇಎನ್ಎಲ್ ಹುಬ್ಬಳ್ಳಿ: ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಗರದ ಸಿದ್ಧಾರೂಢ ಮಠಕ್ಕೆ ಭೇಟಿ‌ ನೀಡಿ ಸಿದ್ಧಾರೂಢರ ಮತ್ತು ಗುರುನಾಥಾರೂಢರ ದರ್ಶನ ಪಡೆದರು.

ನಂತರ ಮೂರು ಸಾವಿರ ಮಠಕ್ಕೆ ಭೇಟಿ ನೀಡಿ ಗುರುಸಿದ್ಧೇಶ್ವರರ ಕರ್ತೃ ಗದ್ದುಗೆಗೆ ನಮಿಸಿ, ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಆಶೀರ್ವಾದ ಪಡೆದರು.
ಬಳಿಕ ಸ್ವಾಮೀಜಿ ಅವರೊಂದಿಗೆ ನಡ್ಡಾ ಅವರು ಒಂದೆರಡು ನಿಮಿಷ ಗೌಪ್ಯವಾಗಿ ಮಾತುಕತೆ ನಡೆಸಿದರು.

ಇದನ್ನು ಓದಿ:ಟಿಕೆಟ್ ಕೈತಪ್ಪಲು ಬಿ.ಎಲ್. ಸಂತೋಷ ಕಾರಣ: ಜಗದೀಶ ಶೆಟ್ಟರ್. ಮಾನಸ ಪುತ್ರ ಯಾರು?

ಮೂರುಸಾವಿರ ಮಠಕ್ಕೆ ಜೆ.ಪಿ.ನಡ್ಡಾ ಅವರ ಭೇಟಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಹುಬ್ಬಳ್ಳಿಯಲ್ಲಿಂದು ಮೂರುಸಾವಿರ ಮಠಕ್ಕೆ ಭೇಟಿ ನೀಡಿ, ಮಠದ ಸ್ವಾಮೀಜಿಗಳಾದ ಶ್ರೀ ಗುರು ಸಿದ್ಧೇಶ್ವರ ಮಹಾಸ್ವಾಮಿಗಳ ಆಶೀರ್ವಚನ ಪಡೆದರು.
ಈ ವೇಳೆ ಮಾತನಾಡಿದ ಶ್ರೀ ಗುರುಸಿದ್ಧೇಶ್ವರ ಮಹಾಸ್ವಾಮಿಗಳು, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವವನ್ನು ಹೆಚ್ಚಿಸುವತ್ತ ಪ್ರಧಾನಮಂತ್ರಿ ನರೇಂದ್ರಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಶ್ರಮಿಸುತ್ತಿದ್ದಾರೆ. ಇವರೆಲ್ಲರಿಗೂ ಅಭಿನಂದನೆಗಳು. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ಎಲ್ಲ ರೀತಿಯಲ್ಲಿ ಶ್ರಮಿಸುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು ಕರ್ನಾಟಕಕ್ಕೆ ಅನೇಕ ಯೋಜನೆಗಳನ್ನು ತಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯವನ್ನು ಮುನ್ನಡೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನು ಓದಿ:ಡಾ.ಕ್ರಾಂತಿ ಕಿರಣ ಪರ ಮತಯಾಚಿಸಿದ ಹುಬ್ಬಳ್ಳಿ,-ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು

ಇಂದು ಉತ್ತಮ ನಾಯಕತ್ವದಲ್ಲಿ ನಮ್ಮ ಹಿಂದೂ ಧರ್ಮ, ಸಂಸ್ಕೃತಿಯನ್ನು ಶತಮಾನಗಳಷ್ಟು ಮುಂದೆ ಕೊಂಡೊಯ್ಯುವ ಕೆಲಸ ನಡೆಯಬೇಕಿದೆ. ಹಿಂದೂ ಪರಂಪರೆಯೊಂದಿಗೆ ರಾಷ್ಟ್ರ ಪ್ರಗತಿ ಕಾರ್ಯಕ್ಕೆ ಮಠದ ವತಿಯಿಂದ ಶುಭಕಾಮನೆಗಳು ಎಂದು ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮಿಗಳು ನುಡಿದರು.

ಇದನ್ನು ಓದಿ:ನಾನು ಅಂಬೇಡ್ಕರ್ ವಾದಿ, ಮೀಸಲಾತಿ ಹೆಚ್ಚಳ ದಿಟ್ಟ ನಿರ್ಧಾರ : ಸಿಎಂ ಬೊಮ್ಮಾಯಿ

ಹು-ಧಾ ಸೆಂಟ್ರಲ್ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ. ಮಠದಿಂದ ಹೊರಬಂದ  ನಂತರ ನಡ್ಡಾ ಅವರು ಜಗದೀಶ ಶೆಟ್ಟರ ಅವರ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ಇದನ್ನು ಓದಿ:ಬಿಜೆಪಿ ಮತ ಬ್ಯಾಂಕ್ ಬಿಟ್ಟು ಹೋಗೋಲ್ಲ: ಸಿಎಂ ಬೊಮ್ಮಾಯಿ

ಈ ಸಂದರ್ಭದಲ್ಲಿ ಹು-ಧಾ ಪಶ್ಷಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಬೆಲ್ಲದ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಪ್ರಭು ನವಲಗುಂದಮಠ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಇದನ್ನು ಓದಿ:ಬಿಜೆಪಿಯಿಂದ ಶೆಟ್ಟರ್ ಔಟ್ ಆರ್ ಇನ್; ಇಂದು‌ ಸಂಜೆ ಫೈನಲ್, ಲಿಂಗಾಯತ ನಾಯಕಗೆ ಇದೆಂಥಾ ಅವಮಾನ ?

 

Related posts

ಅಪಘಾತ ರಹಿತ ಬಸ್ ಚಾಲಕರು: “HEROS ON THE ROAD” ಚಾಲಕರೇ ತಪ್ಪದೇ ನೋಡಿ!

eNEWS LAND Team

ಇಂಚಲ-ಮರಕುಂಬಿ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ: ಸಚಿವ ಕೆ.ಎಸ್.ಈಶ್ವರಪ್ಪ

eNEWS LAND Team

AC cabin mandatory in trucks from 2025: Decision

eNEWS LAND Team