36 C
Hubli
ಏಪ್ರಿಲ್ 27, 2024
eNews Land
ಸುದ್ದಿ

ತಾಲೂಕಿನ ಆಡಳಿತದ ನಡೆ ದುಂದೂರ ಗ್ರಾಮದ ಕಡೆ

ಇಎನ್ಎಲ್ ಅಣ್ಣಿಗೇರಿ: ತಾಲೂಕಿನ ದುಂದೂರ ಗ್ರಾಮದಲ್ಲಿ ತಹಶೀಲ್ದಾರ ಮಂಜುನಾಥ ಅಮಾಸಿ ನೇತೃತ್ವದಲ್ಲಿ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ವರ್ಗ ಬೆಳಿಗ್ಗೆ 10 ಗಂಟೆಯಿoದ ಸಂಜೆ 6:30 ರವರೆಗೆ ತಾಲೂಕ ಆಡಳಿತ ದುಂದೂರ ಗ್ರಾಮದಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿ ತಕ್ಷಣವೇ ಸಮಸ್ಯೆಗೆ ಪರಿಹಾರವನ್ನು ಒದಗಿಸಿಕೊಟ್ಟರು,

ಇದನ್ನೂ ಓದಿ:ಕನ್ನಡ ನಾಡು ಉಳಿಸಿ ಬೆಳಸಿ ಕನ್ನಡ ಮನಸ್ಸುಗಳನ್ನು ಕಟ್ಟಿ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ದುಂದೂರು ಗ್ರಾಮದಲ್ಲಿ ಗ್ರಾಮಸ್ಥರು ಕೆರೆಗೆ ತಂತಿಬೇಲಿ, ಚರಂಡಿ ದುರಸ್ತಿ, ಮತ್ತು ರೈಲ್ವೆ ಗೇಟ್ ನಂಬರ-11 ತೆರೆಯುವ ಬಗ್ಗೆ, ಗಟಾರು ಹಾಗೂ ರಸ್ತೆ ದುರಸ್ತಿ, ಸೇತುವೆ ನಿರ್ಮಾಣ , ಕೆಇಬಿ ಕಂಬ ದುರಸ್ತಿ ಇತರೆ ಬೇಡಿಕೆಗಳ ಕುರಿತು, ಹೊಲಗದ್ದೆಗಳಲ್ಲಿ ಮಳೆ ನೀರು ಹಳ್ಳಕ್ಕೆ ಹೋಗುವಂತೆ ವ್ಯವಸ್ಥೆ ಕಲ್ಪಿಸಲು ತಹಶೀಲ್ದಾರ ಮಂಜುನಾಥ ಅಮಾಸಿ ಅವರಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ:ರಂಗಿನಾಟದಲ್ಲಿ ಮಿಂದೆದ್ದ ವಾಣಿಜ್ಯ ನಗರಿ ಹುಬ್ಬಳ್ಳಿ ಸಂಭ್ರಮ ಹೇಗಿತ್ತು ಗೊತ್ತಾ? ಇಲ್ಲಿದೆ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್

ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆ ಕಾರ್ಯಕ್ರಮಗಳ ಕುರಿತು ವಿವರಣೆ ನೀಡಿ ಸದ್ಭಳಿಸಿಕೊಳ್ಳಲು ಕರೆ ನೀಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಕಾರ್ಯಲಯ ಸಿಬ್ಬಂದಿ ವರ್ಗ, ವಿವಿಧ ತಾಲೂಕ ಅಧಿಕಾರಿಗಳ ವರ್ಗ, ದುಂದೂರ ಗ್ರಾಮ ಪಂ ಸದಸ್ಯರು, ಸಿಬ್ಬಂದಿ ವರ್ಗ, ಗ್ರಾಮಸ್ಥರು ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ:ನಡಕಟ್ಟಿನ ದಂಪತಿಗೆ ತೋಂಟದ ಸಿದ್ಧಲಿಂಗ ಶ್ರೀಗಳ ರಾಜ್ಯ ಪ್ರಶಸ್ತಿ ಹಾಗೂ ಸನ್ಮಾನ

Related posts

ಕಡಲೆ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಅಮರಣ ಉಪವಾಸ ಸತ್ಯಾಗ್ರಹ

eNEWS LAND Team

ಅಮೃತ ಯೋಜನೆ ಅಡಿಯ ಕಾಮಗಾರಿ ಶೀಘ್ರ ಇತ್ಯರ್ಥಗೊಳಿಸುವಂತೆ ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ ಸೂಚನೆ

eNEWS LAND Team

ನೈಋತ್ಯ ರೈಲುಗಳ ಮಾರ್ಗ ಬದಲಾವಣೆ ಮಾಹಿತಿ

eNEWS LAND Team