24 C
Hubli
ಮಾರ್ಚ್ 21, 2023
eNews Land
ಸುದ್ದಿ

ಅಮೃತ ಯೋಜನೆ ಅಡಿಯ ಕಾಮಗಾರಿ ಶೀಘ್ರ ಇತ್ಯರ್ಥಗೊಳಿಸುವಂತೆ ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ ಸೂಚನೆ

Listen to this article

ಇಎನ್ಎಲ್ ಧಾರವಾಡ : ಸರಕಾರವು ಅಮೃತ ಯೋಜನೆ ಅಡಿಯಲ್ಲಿ ಇ- ಜಿಐಎಸ್ ಇಲಾಖೆಯವರು ಬೇಸ್ ಮಾಸ್ಟರ್ ಪ್ಲಾನ್ ನಕ್ಷೆ ತಯಾರಿಸಲು ಇ-ಜಿಐಎಸ್ ಇಂಡಿಯಾ ಸಂಸ್ಥೆಗೆ ವಹಿಸಿರುತ್ತದೆ. ಈ ಯೋಜನೆಯನ್ನು ಅತ್ಯಂತ ತ್ವರಿತ ಗತಿಯಲ್ಲಿ ಮುಗಿಸಬೇಕಾಗಿರುತ್ತದೆ ಎಂದು ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ ಹೇಳಿದರು.

ಇಂದು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಮೃತ ಯೋಜನೆಯ ಕುರಿತು ಜಿಲ್ಲೆಯ ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಕೊಳೆಗೇರಿ ನಿರ್ಮೂಲನಾ ಮಂಡಳಿ, ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕರ್ನಾಟಕ ರಾಜ್ಯ ವಸತಿ ಮಂಡಳಿ, ಸಂಚಾರ ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನೈಋತ್ಯ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ, ವಸತಿ ಮಂಡಳಿ, ವಿದ್ಯುತ್ ಮಂಡಳಿ (ಹೆಸ್ಕಾಂ), ಭಾರತ ಸಂಚಾರ ನಿಗಮ, ಪೊಲೀಸ್ ಇಲಾಖೆ, ಹಣಕಾಸು ಇಲಾಖೆ, ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪ್ರವಾಸೋದ್ಯಮ ಇಲಾಖೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಇಲಾಖೆ, ಪಶುಸಂಗೋಪನೆ ಇಲಾಖೆ, ಯುಜಿ- ಗ್ಯಾಸ್ ಲೈನ್, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಎಪಿಎಂಸಿ ಕೆಎಂಇ, ಜಿಲ್ಲಾ ಪಂಚಾಯತ್ ಸ್ಮಾರ್ಟ್ ಸಿಟಿ, ಕೆಯುಐಡಿಎಫ್ ಸಿ ಅಭಿವೃದ್ಧಿ ಮತ್ತು ಹಣಕಾಸು, ಅಂಚೆ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ ಇಲಾಖೆಗಳು ತಮ್ಮ ಇಲಾಖೆಯ ಅಧಿಕೃತ ಮಾಹಿತಿಗಳು ಸಾಫ್ಟ್ ಕಾಪಿ, ನಕ್ಷೆಗಳ ಅವಶ್ಯಕತೆ ಇರುತ್ತದೆ. ಅವುಗಳ ಕುರಿತು ಚರ್ಚಿಸಿ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಒಂದು ವಾರದಲ್ಲಿ ಒದಗಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಆಯುಕ್ತ ಎನ್.ಹೆಚ್. ಕುಮ್ಮಣ್ಣನವರ, ನಗರ ಯೋಜಕ ಸದಸ್ಯ ವಿವೇಕ ಕಾರೇಕರ, ಕಾರ್ಯನಿರ್ವಾಹಕ ಅಭಿಯಂತರ ಎಂ.ರಾಜಶೇಖರ, ಮುಕುಂದ ಜೋಶಿ, ಬಸವರಾಜ ದೇವಗಿರಿ, ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

ಎಸ್ಡಿಎಂ: ಹೊಸ ಪ್ರಬೇಧದ ಕೋವಿಡ್ ವೈರಾಣು ಇಲ್ಲ

eNewsLand Team

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ವರ್ಚುವಲ್ ಆಗಿ ಸಿಎಂ

eNEWS LAND Team

ದಾಸೋಹಮಠದ ಅದ್ದೂರಿ ಜಾತ್ರೆಗೆ  ಬ್ರೇಕ್!!!

eNEWS LAND Team