ಇಎನ್ಎಲ್ ಅಣ್ಣಿಗೇರಿ: ಪದ್ಮಶ್ರೀ ಪುರಸ್ಕೃತ ಎ.ಐ.ನಡಕಟ್ಟಿನ ಅವರಿಗೆ ಲಿಂ.ತೋoಟದ ಸಿದ್ಧಲಿಂಗ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಪ್ರಶಸ್ತಿ ₹25 ಸಾವಿರ ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿದ್ದು, ನಡಕಟ್ಟಿನ ದಂಪತಿಗಳಿಗೆ ನೀಡಿ ಸನ್ಮಾನಿಸಲಾಯಿತು.
ಇದನ್ನೂ ಓದಿ:ನವೀನ್ ಪಾರ್ಥಿವ ಶರೀರ ಸೋಮವಾರ ಬೆಂಗಳೂರಿಗೆ: ಸಿಎಂ ಬೊಮ್ಮಾಯಿ
ಪಟ್ಟಣದ ಶ್ರೀಮತಿ ನಿಂಗಮ್ಮ ಎಸ್.ಹೂಗಾರ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ ಲಿಂ.ತೋoಟದ ಸಿದ್ಧಲಿಂಗಶ್ರೀ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಿಸಲಾಯಿತು.
ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯೆ ಡಾ.ಸುಧಾ ಕೌಜಗೇರಿ ಮಾತನಾಡಿ, ಲಿಂ.ಡಾ.ತೋಂಟದ ಸಿದ್ಧಲಿಂಗ ಶ್ರೀಗಳು ವಿಭಿನ್ನ ಮನೋಭಾವದ ಭಕ್ತರಿಗೆ ಧರ್ಮ, ತತ್ವ, ಸಾಹಿತ್ಯ, ಕಲೆ, ಸಂಸ್ಕೃತಿ, ಸಭ್ಯತೆ, ಸದ್ಭಾವ, ಸಾಮರಸ್ಯಗಳ ಸವಿಯೂಟವನ್ನು ಉಣಬಡಿಸುತ್ತ, ಬದುಕಿನಲ್ಲಿ ಹೊಸ ಉಲ್ಲಾಸ, ಉತ್ಸಾಹ, ನೆಮ್ಮದಿ , ವಿಶ್ವಾಸ, ಭರವಸೆ ಮೂಡಿಸಿದ್ದಾರೆ, ಕನ್ನಡ ಭಾಷೆ, ನೆಲ, ಜಲ, ಬಸವಾದಿ ಶರಣರ, ಪುಣ್ಯಪುರುಷರ ಗ್ರಂಥಮಾಲಿಕೆಗಳ 500 ಪುಸ್ತಕ ಪ್ರಕಾಶನ ಪ್ರಕಟಣೆ ಮಾಡಿದ್ದಾರೆ.
ಇದನ್ನೂ ಓದಿ:ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಮಹಿಳೆಯರಿಗೆ ಗೌರವ ಸಮರ್ಪಣೆ: ರೇಖಾ ಡೊಳ್ಳಿನವರ
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಲೆ, ಕೃಷಿ, ವಿವಿಧ ಸ್ತರಗಳಲ್ಲಿ ಜಾತಿ-ಮತವೆನ್ನದೇ ತಮ್ಮನ್ನು ತೊಡಗಿಸಿಕೊಂಡು ಜನಸಾಮಾನ್ಯರ ಶ್ರೀಗಳಾಗಿ ಮಾತೃ ವಾತ್ಸಲ್ಯದ ಕರುಣಾಮೂರ್ತಿಯಾಗಿದ್ದರು. ವಿಚಾರಶೀಲ, ಬುದ್ಧಿ-ಭಾವಗಳಿಗೆ ವೈಚಾರಿಕತೆಯ ಬೆಳಕು ಬೀರುವ ಪ್ರವಚನ, ಉಪನ್ಯಾಸ, ವಚನ ಸಂಗೀತ, ಶಿವಾನುಭವ, ಮೌಲಿಕ ಗ್ರಂಥಗಳ ಬಿಡುಗಡೆ, ಸಾಧಕ ಶ್ರೇಷ್ಠರಿಗೆ ಸನ್ಮಾನ, ಪ್ರಶಸ್ತಿ ಗೌರವ, ವೈವಿಧ್ಯಮಯ ಚಟುವಟಿಕೆಗಳಿಂದ ಶ್ರೀಮಠ ಉತ್ಸವಕ್ಕೆ ಉನ್ನತ ಸಾಂಸ್ಕೃತಿಕ ಮೆರಗು ತಂದಿದ್ದಾರೆ. ಪ್ರತಿ ವರ್ಷ ಅವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಭಾರತ ದೇಶದ ಆತ್ಮ ಆಧ್ಯಾತ್ಮ ಧರ್ಮ: ಬಿ.ವೈ.ವಿಜಯೇಂದ್ರ
ಸಾನಿಧ್ಯವಹಿಸಿದ ಗದಗ ತೋಂಟದ ಸಿದ್ಧರಾಮ ಶ್ರೀಗಳು ಕೃಷಿ ಕ್ಷೇತ್ರದಲ್ಲಿ ರೈತ ಸಮುದಾಯ ಒಳಿತಿಗೆ ಕೃಷಿ ಉಪಕರಣಗಳ ಸಾಧನೆಗೆ ರಾಜ್ಯ ರಾಷ್ಟ್ರ ಪುರಸ್ಕಾರಗಳು ಪ್ರಾಪ್ತವಾಗಿವೆ. ಅವರ ಸಂಶೋಧನೆ ಅವಿಷ್ಕಾರ ನಿರಂತರ ಸಾಗಲಿ. ಅವರಿಗೆ ಅಂತರಾಷ್ಟ್ರಿಯ ಪುರಸ್ಕಾರಗಳು ಸಿಗಲಿ ಎಂದು ಹಾರೈಸಿದರು.
ಸನ್ಮಾನಿತ ಎ.ಐ.ನಡಕಟ್ಟಿನ ಮಾತನಾಡಿ, ತೋಂಟದ ಶ್ರೀ ರಾಜ್ಯ ಪ್ರಶಸ್ತಿ ಸಿಕ್ಕಿದ್ದು, ನನಗೆ ಈವರೆಗೂ ಸಿಕ್ಕ ಎಲ್ಲಾ ಪುರಸ್ಕಾರಗಳಿಗಿಂತಲೂ ಮಿಗಿಲಾಗಿದೆ. ನನ್ನ ಸಾಧನೆಗೆ ಆತ್ಮವಿಶ್ವಾಸ ತುಂಬಿ ಹಾರೈಸಿದ ಪರಿಣಾಮ ಗುರುಕೊಟ್ಟ ಆರ್ಶೀವಾದ ವಿದ್ಯಾಗುರು ಎಸ್.ಎಸ್.ಹರ್ಲಾಪೂರ ಹಾರೈಕೆ ಈ ಪ್ರಶಸ್ತಿಯಿಂದ ಸಿಕ್ಕಂತಾಗಿದೆ. ಶ್ರೀಗಳ ಪ್ರಶಸ್ತಿಯಿಂದ ಬಂದ ನಗದು ಹಣವನ್ನು ನೊಂದವರ ಕಲ್ಯಾಣ ನಿಧಿ ಟ್ರಸ್ಟ್’ಗೆ ಭದ್ರತಾ ಠೇವಣಿ ನೀಡುವುದಾಗಿ ತಿಳಿಸಿ ಅಭಿನಂದಿಸಿದರು.
ಧಾರವಾಡದ ಹಿರೇಮಲ್ಲೂರ ಈಶ್ವರನ್ ಪಿ.ಯು.ಕಾಲೇಜ ಪ್ರಾಚಾರ್ಯ ಪ್ರೊ.ಶಶಿಧರ ತೋಡಕರ ಮಾತನಾಡಿ, ಎಲ್ಲಿಯವರೆಗೆ ಮನುಷ್ಯನು ಸಾವಿನ ಕದ ತಟ್ಟಲು ತಯಾರಾಗುವುದಿಲ್ಲವೋ ಅಲ್ಲಿಯವರೆಗೆ ಅವನಿಗೆ ಬದುಕಿನ ಬಾಗಿಲು ತೆರೆಯುವುದಿಲ್ಲ. ಬದುಕಿನುದ್ದಕ್ಕೂ ಕಷ್ಟಕಾರ್ಪಣ್ಯಗಳನ್ನುಂಡು ಸಂಶೋಧನೆ ಸಾಧನೆ ಮಾಡಿದ ಸಾಲಿನಲ್ಲಿ ಕೃಷಿ ಸಂಶೋಧಕ ಎ.ಐ.ನಡಕಟ್ಟಿನ ಸಾಕ್ಷಿಯಾಗಿದ್ದಾರೆ. ರಾಷ್ಟ್ರಮಟ್ಟದಲ್ಲಿ ಕೀರ್ತಿ ತಂದಿರುವ ಅವರ ಸಾಧನೆಗೆ ಶ್ರೀಗಳ ರಾಜ್ಯ ಪ್ರಶಸ್ತಿ ಸಂದಿದೆ ಎಂದು ಅಭಿನಂದನಾ ನುಡಿಗಳನ್ನಾಡಿದರು.
ಇದನ್ನೂ ಓದಿ:ತಹಶೀಲ್ದಾರ ಕಚೇರಿಗೆ ಬಂದಂತಹ ಸಾರ್ವಜನಿಕರಿಗೆ ಸಹಾಯ ಮಾಡಲು ಮುಂದಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ
ಆಯ್ಕೆ ಸಮತಿ ಸದಸ್ಯ ಚಂದ್ರಶೇಖರ ವಸ್ತ್ರದ ಮಾತನಾಡಿ, ಹಸಿದ ಹೊಟ್ಟಿಗೆ ತುತ್ತನೀವ, ತೃಷಿತ ತುಟಿಗೆ ಉದಕ ಎರೆವ, ಬೆಂದ ಮನಕ್ಕೆ ತಂಪು ಸುರಿವ, ನೊಂದ ಜೀವಕ್ಕೆ ಶಾಂತಿ ತರುವ ಹೆತ್ತವ್ವನ ಕಕ್ಕುಲಾತಿ , ಎಳ್ಳನಿತೂ ಮುಕ್ಕಾಗದ ಅಖಂಡ ಪ್ರೀತಿಯ ಶ್ರೀಗಳ ರಾಜ್ಯ ಪ್ರಶಸ್ತಿ ಪದ್ಮಶ್ರೀ ಪುರಸ್ಕೃತ ಎ.ಐ.ನಡಕಟ್ಟಿನ ಅವರಿಗೆ ಸಿಕ್ಕದ್ದು ಸೌಭಾಗ್ಯವೆಂದರು.
ಈ ಸಂದರ್ಭದಲ್ಲಿ ಪ್ರೊ.ಎಸ್.ಎಸ್. ಹರ್ಲಾಪೂರ, ಮಲ್ಲಿಕಾರ್ಜುನ ಸುರಕೋಡ, ಮಾಜಿ ಕ್ರೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ, ಮಲ್ಲಪ್ಪ ಹಾಳದೋಟರ, ಶಿವಯೋಗಿ ಹುಬ್ಬಳ್ಳಿ, ಮಲ್ಲಣ್ಣ ನವಲಗುಂದ, ಡಾ ಅಮೀನ, ಹಾಲಪ್ಪ ತುರಕಾಣಿ ಉಪಸ್ಥಿತರಿದ್ದರು. ಶಾಂತಾ ಲಕ್ಷೇಶ್ವರ ಪ್ರಾರ್ಥಿಸಿದರು. ಡಾ.ಶಶಿಧರ ಹರ್ಲಾಪೂರ ಸ್ವಾಗತಕೋರಿದರು. ಕೃಷ್ಣ ಜಿಂಗಾಡೆ ನಿರೂಪಿಸಿದರು. ವ್ಹಿ.ಎಮ್.ಹಿರೇಮಠ ವಂದಿಸಿದರು.
ಇದನ್ನೂ ಓದಿ:“ದಿ ಕಾಶ್ಮೀರ ಫೈಲ್ಸ್” ಚಲನಚಿತ್ರ ಪ್ರದರ್ಶನಕ್ಕೆ ಶೇ.9ರಷ್ಟು ಜಿಎಸ್‌ಟಿ ವಿನಾಯಿತಿ