ಮೇ 3, 2024
eNews Land
ಅಪರಾಧ ಸುದ್ದಿ

ಹುಬ್ಬಳ್ಳಿ: ಖತರ್ನಾಕ ಕಿಲ್ಲರ್: ಭಿಕ್ಷುಕರೇ ಟಾರ್ಗೆಟ್!!

ಇಎನ್ಎಲ್ ಹುಬ್ಬಳ್ಳಿ: ಇತ್ತೀಚೆಗೆ ನಗರದ ನೆಹರೂ ಮೈದಾನದ ರಸ್ತೆಯ ಕೃಷ್ಣ ಭವನದ ಎದುರಿನ ಪಾದಚಾರಿ ಮಾರ್ಗದಲ್ಲಿ ಭಿಕ್ಷುಕಿ ಯನ್ನು ಹತ್ಯೆ ಮಾಡಿದ್ದ ಆರೋಪಿಯನ್ನು ಶಹರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹುಧಾ ಪೊಲೀಸ್ ಆಯುಕ್ತ ಲಾಭೂರಾಮ ಹೇಳಿದರು.

ಇದನ್ನೂ ಓದಿ:ಸುಮಾ ಕೊಂದಿದ್ದು ಪತಿ ಅಲ್ವೆ? ರಾಮಣ್ಣ ಸಾಚಾ ಆದ್ರೆ ಕೊಲೆಗಡುಕ ಯಾರು?

ನಗರದಲ್ಲಿ ಗುರುವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣದಾಸೆಗಾಗಿ ರಾತ್ರಿ ವೇಳೆ ಅವಳು ಕೃಷ್ಣಭವನದ ಎದುರಿನ ಪಾದಚಾರಿ ಮಾರ್ಗದಲ್ಲಿ ಪರಿಚಯದ ವ್ಯಕ್ತಿ ಜೊತೆ ನಿದ್ರೆಗೆ ಜಾರಿದ್ದಳು. ಆ ಸಮಯದಲ್ಲಿ ಆರೋಪಿ, ಕಲ್ಲು ಎತ್ತಿ ಅವಳನ್ನು ಹತ್ಯೆ ಮಾಡಿದ್ದ. ಆರೋಪಿ ಪತ್ತೆಗೆ ಮೂರು ತಂಡ ರಚಿಸಿ ದಾವಣಗೆರೆ, ಹಾವೇರಿ, ಗದಗ ಹಾಗೂ ಧಾರವಾಡಕ್ಕೆ ಕಳಹಿಸಲಾಗಿತ್ತು. ಕೊನೆಗೆ ಆರೋಪಿಯನ್ನು ಆರೋಪಿ ಧಾರವಾಡದ ಮಣಿಕಿಲ್ಲಾ ನಿವಾಸಿಯಾಗಿದ್ದು, ಬುಧವಾರ ಅವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಪುನಃ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

ಇದನ್ನೂ ಓದಿ:ಮತ್ತೆ ರಕ್ತದ ಕಲೆ ಕಂಡ ಚೋಟಾ ಮುಂಬೈ ಹುಬ್ಬಳ್ಳಿ

ಭಿಕ್ಷುಕಿಯನ್ನು ರೈಲ್ವೆ ನಿಲ್ದಾಣದ ಬಳಿ ಹಿಂಬಾಲಿಸಿದ ವ್ಯಕ್ತಿಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೃಷ್ಣ ಭವನದ ಬಳಿಯ ಸಿಸಿಟಿವಿಯಲ್ಲೂ ಅವನದ್ದೇ ದೃಶ್ಯಾವಳಿ ಇತ್ತು. ಅವನ ಭಾವಚಿತ್ರ ಹಿಡಿದು ಧಾರವಾಡ ಮುನ್ನೂರಕ್ಕೂ ಹೆಚ್ಚು ಭಿಕ್ಷುಕರನ್ನು ಸಂಪರ್ಕಿಸಲಾಯಿತು. ಅವರಲ್ಲೊಬ್ಬರು ಅವನ ಪರಿಚಯ ಹಿಡಿದು, ಪತ್ತೆಗೆ ಸಹಕರಿಸಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ:ಅನ್ಯಜಾತೀಯ ಹುಡುಗರನ್ನು ಪ್ರೀತಿಸಿ ಮದುವೆಯಾಗುವ ಹುಡುಗಿಯರೇ ಹುಷಾರ್!!!

ಈ ತನಿಖೆಯನ್ನು ಮುಂದುವರಿಸಿದಾಗ 2020 ಜುಲೈ ತಿಂಗಳಲ್ಲಿ ಸ್ಟೇಷನ್ ರಸ್ತೆಯ ಕಾಮತ್ ಹೋಟೆಲ್ ಎದುರು ಮಲಗಿದ್ದ ಭಿಕ್ಷುಕನೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿದ್ದ. ಪೊಲೀಸರು ಅದನ್ನು ಸ್ವಾಭಾವಿಕ ಮರಣ ಎಂದು ದಾಖಲಿಸಿಕೊಂಡಿದ್ದರು. ಇದೇ ರೀತಿ ಬೇರೆಡೆಯೂ ಅವನು ಹತ್ಯೆ ಮಾಡಿರುವ ಬಗ್ಗೆ ಮಾಹಿತಿಯಿದ್ದು, ವಿಚಾರಣೆಯಿಂದ ತಿಳಿಯಬೇಕಿದೆ ಎಂದು ಹೇಳಿದರು.

ಇದನ್ನೂ ಓದಿ:ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಪೂರ್ವಾ

ಆರೋಪಿ ಧಾರವಾಡದಲ್ಲಿ ಖಾಲಿ ಬಾಟಲಿಗಳನ್ನು ಆಯ್ದು ವ್ಯವಹಾರ ನಡೆಸುತ್ತಿದ್ದ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಇನ್ನೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಡಿಸಿಪಿ ಸಾಹಿಲ ಬಾಗ್ಲಾ, ಡಿಸಿಪಿ ಕ್ರೈಂ ಗೋಪಾಲ ಎಂ ನ್ಯಾಕೋಡ್ ಇದ್ದರು.

Related posts

ರಾಜ್ಯಕ್ಕೆ ಶಾ; ಸಾರ್ವತ್ರಿಕ ಚುನಾವಣೆ ತಯಾರಿಗೆ‌ ಅಡಿಗಲ್ಲು? ಕೋರ್ ಕಮೀಟಿ ಸಭೆ ಸೆಂಟರ್ ಆಫ್ ಎಟ್ರಾಕ್ಷನ್!! 

eNewsLand Team

ಧಮ್ ಮಾರೋ ಧಮ್!! ಗಾಂಜಾ ಸಾಗಿಸುತ್ತಿದ್ದವ ಮುದುಕ ಅಂದರ್!!

eNewsLand Team

ಭಾರತದ ಹರ್ನಾಜ್ ಕೌರ್ ಈಗ ಜಗದೇಕ ಸುಂದರಿ!!

eNewsLand Team