27.8 C
Hubli
ನವೆಂಬರ್ 12, 2024
eNews Land
ರಾಜಕೀಯ ರಾಜ್ಯ ಸುದ್ದಿ

ರಾಜ್ಯಕ್ಕೆ ಶಾ; ಸಾರ್ವತ್ರಿಕ ಚುನಾವಣೆ ತಯಾರಿಗೆ‌ ಅಡಿಗಲ್ಲು? ಕೋರ್ ಕಮೀಟಿ ಸಭೆ ಸೆಂಟರ್ ಆಫ್ ಎಟ್ರಾಕ್ಷನ್!! 

ಇಎನ್ಎಲ್ ಬೆಂಗಳೂರು:

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಗೆ ಪೂರ್ವತಯಾರಿಗೆ ಅಡಿಗಲ್ಲು ಎಂಬಂತೆ ಶುಕ್ರವಾರ ಸಂಜೆ ಇಲ್ಲಿನ ಕಚೇರಿಯಲ್ಲಿ ಅಮಿತ್‌ ಶಾ ನೇತೃತ್ವದಲ್ಲಿ ನಡೆಯಲಿರುವ ಕೋರ್ ಕಮೀಟಿ ಸಭೆಯತ್ತ ರಾಜ್ಯದ ಚಿತ್ತ ನೆಟ್ಟಿದೆ.

ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ, ರಾತ್ರಿ ಬಿಜೆಪಿ ಕೋರ್ ಕಮೀಟಿ ಸಭೆ ಸೇರಿ ಇತರೆ ಕಾರ್ಯಕ್ರಮಕ್ಕಾಗಿ ರಾಜ್ಯಕ್ಕೆ ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಆಗಮಿಸಿದ್ದು, ತಡರಾತ್ರಿ ಬಂದ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಅವರು ಶುಕ್ರವಾರ ರಾಜ್ಯದಲ್ಲಿ ಮಿಂಚಿನ ಸಂಚಾರ ಮಾಡಲಿದ್ದು, ಒಂದೇ ದಿನದಲ್ಲಿ ಮೂರು ಬೃಹತ್ ಕಾರ ಕ್ರಮಗಳಲ್ಲಿ ಪಾಲ್ಗೊಳ್ಳು ವುದರ ಜತೆಗೆ ಸಾಕಷ್ಟು ಕುತೂಹಲ ಮೂಡಿಸಿರುವ ಪಕ್ಷದ ಕೋರ್ ಕಮಿಟಿ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ.

ಗುರುವಾರ ತಡರಾತ್ರಿ ದೆಹಲಿಯಿಂದ ಬೆಂಗಳೂ ರಿಗೆ ಆಗಮಿಸಿದ ಅಮಿತ್ ಅವರು ಅವರು ಶುಕ್ರವಾರ ಬೆಳಗ್ಗೆ 10.30ಕ್ಕೆ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತಿ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲಿನ ಕಾರ್ಯಕ್ರಮ ಮುಗಿಸಿ ಮಧ್ಯಾಹ್ನ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿಯಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ನಂತರ ಬೆಂಗಳೂರಿನ ಅರಮನೆ ಆವರಣದಲ್ಲಿ ಆಯೋಜಿಸಿರುವ ಸಹಕಾರ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಂಜೆ 6 ಗಂಟೆಗೆ ಪಕ್ಷದ ಕಚೇರಿಯಲ್ಲಿ ಶಾ ಅವರ ನೇತೃತ್ವದಲ್ಲಿ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆ ನಡೆಯಲಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್,ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಪಸ್ಥಿತರಿರಲಿದ್ದಾರೆ.

ಇದನ್ನು ಓದಿ

ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಎಂ  ಬೊಮ್ಮಾಯಿ ಹೇಳಿದ್ಯಾಕೆ ಗೊತ್ತಾ?

ವಿಧಾನಸಭಾ ಚುನಾವಣೆಯ ಪೂರ್ವತಯಾರಿಯ ಮೊದಲ ಸಭೆ ಎಂದೇ ಇದನ್ನು ಪರಿಗಣಿಸಲಾಗಿದೆ. ಹೀಗಾಗಿ ಈ ಸಭೆ ಇವತ್ತು ರಾಜ್ಯದ ಸೆಂಟರ್ ಆಫ್ ಎಟ್ರಾಕ್ಷನ್ ಎನ್ನಿಸಿದೆ.

Related posts

“ಪತ್ರಿಕೋದ್ಯಮ ರತ್ನ” ಪ್ರಭುಲಿಂಗಪ್ಪ ರಂಗಾಪೂರ

eNEWS LAND Team

ಜೋಗದ ವೈಭವದ ದೃಶ್ಯ ಕಣ್ತುಂಬಿಕೊಂಡ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್

eNewsLand Team

ಪಿಎಂ-ಕಿಸಾನ್ ಕರ್ನಾಟಕ:47.86 ಲಕ್ಷ ರೈತರಿಗೆ ರಾಜ್ಯದ ಕಂತು 956.71 ಕೋಟಿ ರು. ಬಿಡುಗಡೆ

eNewsLand Team