30 C
Hubli
ಮೇ 5, 2024
eNews Land
ಸುದ್ದಿ

ನನ್ನ ತಾಯಿಯೇ ನನಗೆ ಹೀರೋ : ಸಂತೋಷ ಲಾಡ್

ಇಎನ್ಎಲ್ ಕಲಘಟಗಿ: ನನ್ನ ತಾಯಿಯೇ ನನಗೆ ಹೀರೊ, ಬಡವರ ಪರವಾಗಿ ದುಡಿಯುತ್ತೇನೆ, 15 ವರ್ಷ ಇದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದೇನೆ, ನಾನು ಈ ಮಟ್ಟಕ್ಕೆ ಬೆಳೆಯಲು ನನ್ನ ತಾಯಿ ಶೈಲಜಾ, ಪತ್ನಿ ಕೀರ್ತಿ ಲಾಡ್, ಸಹೋದರಿ ಸುಜಾತಾ ಲಾಡ್ ಅವರೇ ಕಾರಣ. ಈ ಕಾರ್ಯಕ್ರಮ ಎಲ್ಲ ತಾಯಂದಿರಿಗೂ ಮಹಿಳೆಯರಿಗೂ ಮೀಸಲು ಎಂದರು.

ಇದನ್ನೂ ಓದಿ:  ಕೊರೋನಾ ವಾರಿಯರ್ಸ್’ಗಳಿಗೆ ಸನ್ಮಾನ: ಮಾಜಿ ಸಚಿವ ಸಂತೋಷ್ ಲಾಡ್

         

  ಸ್ಥಳೀಯ ಅಮೃತ ನಿವಾಸದಲ್ಲಿ ಅಂತರಾಷ್ಟ್ರಿ ಯ ಮಹಿಳಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಲಾಡ್ ಅವರು ಕಲಘಟಗಿಯ ಮತಕ್ಷೇತ್ರದ ಋಣ ಈ ಜನ್ಮದಲ್ಲಿ ತೀರೀಸಲು ಸಾಧ್ಯವಿಲ್ಲ. ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸೇವಕಿಯರು ಮತ್ತು ಪೌರಕಾರ್ಮಿಕರು ಕೋವಿಡ್ ಸಮಯದಲ್ಲಿ ಪ್ರಾಣ ಪಣಕ್ಕಿಟ್ಟು  ಮಾಡಿದ ಸೇವೆ ದೇವರಿಗೆ ಸಮಾನ,  ಸರಕಾರ ಕೊಡುವ ಜುಜುಬಿ ಸಂಬಳಕ್ಕೆ ತಾವೆಲ್ಲರೂ ಸೇವೆ ಮಾಡಿದ್ದೀರಿ. ನಿಮ್ಮ ಆಶೀರ್ವಾದಿಂದ ಕಲಘಟಗಿಯಿಂದಲೇ ನನ್ನ ಸ್ಪರ್ಧೆ ಎಂದರು. ಈ ಸಂದರ್ಭದಲ್ಲಿ ಸಿಟಿಜನ್ ಟಿವಿ ಸಿಇಓ ಆದ ಸ್ವಾತಿ ಚಂದ್ರಶೇಖರ ಮಾತನಾಡಿ ಪತ್ರಿಕೆಯವರು ಯಾವಾಗಲೂ ರಾಜಕೀಯ ಮಾತಾಡೊಲ್ಲ, ಆದರೆ ಲಾಡ್ ಅವರು ಪಕ್ಷ ಮತ್ತು ಸಿದ್ಧಾಂತವನ್ನು ಮೀರಿ ಬೆಳೆದಿದ್ದಾರೆ. ಹೆಣ್ಣು ಎಂದಿಗೂ ಗಂಡಿಗೆ ಸಮ ಅಲ್ಲ, ಆದರೆ ಅವಳೊಂದು ಶಕ್ತಿ, ಅಮ್ಮ, ಅಕ್ಕ, ತಂಗಿ, ಹೀಗೆ ಸಂಸಾರದಲ್ಲಿ ತಾನು ಕಷ್ಟ ಪಟ್ಟು ಮಕ್ಕಳನ್ನು ಬೆಳೆಸುವವಳೇ ತಾಯಿ. ಸರಕಾರ ಕೊಡುವ ಕೇವಲ ಆರೇಳು ಸಾವಿರಕ್ಕೆ ತಮ್ಮ ಜೀವದ ಭಯ ತೊರೆದು ನಮ್ಮ ಜೀವನ ಉಳಿಸಿದ್ದೀರಿ, ಆತ್ಮ ಗೌರವದಿಂದ ಬದುಕೋಣ ಎಂದರು. ಕೆಪಿಸಿಸಿ ವಕ್ತಾರೆ ಕವಿತಾ ರೆಡ್ಡಿ ಮಾತನಾಡಿ ಸರಕಾರವು ಆಶಾ ಅಂಗನವಾಡಿ ಕಾರ್ಯಕರ್ತೆಯರನ್ನು, ಆರೋಗ್ಯ ಸೇವಕಿಯರನ್ನು, ಉಪಯೋಗ ತೆಗೆದುಕೊಂಡಿತು, ಆದರೆ ಲಾಡ್ ಅವರು ಈ ಬೃಹತ್ ಕಾರ್ಯಕ್ರಮದ ಮೂಲಕ ದೇಶಕ್ಕೇ ಈ ಗೌರವದ ಸಂದೇಶ ಕೊಟ್ಟಿದ್ದಾರೆ ಎಂದರು. ಲಾಡ್ ಫೌಂಡೇಶನ ಅಧ್ಯಕ್ಷ ಆನಂದ ಕಲಾಲ ಮಾತನಾಡಿ ಲಾಡ್ ಅವರ ಸೇವೆಗೆ ಈ ಜನ ಸಾಗರವೇ ಸಾಕ್ಷಿ, ಇದೊಂದು ಕಲಘಟಗಿ ಇತಿಹಾಸದಲ್ಲಿ ಮೈಲಿಗಲ್ಲು ಎಂದರು.

ಇದನ್ನೂ ಓದಿ:ಅನ್ಯಜಾತೀಯ ಹುಡುಗರನ್ನು ಪ್ರೀತಿಸಿ ಮದುವೆಯಾಗುವ ಹುಡುಗಿಯರೇ ಹುಷಾರ್!!!

           ವೇದಿಕೆಯಲ್ಲಿದ್ದ ಲಾಡ್ ಕುಟುಂಬದವರು, ಎಲ್ಲ ಗೌರವಾನ್ವಿತರೂ, ಎಲ್ಲ ಮಹಿಳೆಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶೈಲಜಾ ಲಾಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಆಯ್.ಜಿ.ಸನದಿ, ಎ.ಎಮ್. ಹಿಂಡಸಗೇರಿ, ಎನ್.ಎಚ್.ಕೋನರೆಡ್ಡಿ,  ಅನಿಲ್‌ಕುಮಾರ ಪಾಟೀಲ, ಮಂಜುನಾಥ ಮುರಳ್ಳಿ, ಎಸ್.ಆರ್.ಪಾಟೀಲ, ಶ್ರೀಕಾಂತ ಗಾಯಕವಾಡ, ಈರಮ್ಮ ದಾಸನಕೊಪ್ಪ, ಸೋಮಶೇಖರ ಬೆನ್ನೂರ, ಕಾಂಗ್ರೆಸ್’ನ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದು, ಹತ್ತು ಸಾವಿರಕ್ಕೂ  ಹೆಚ್ಚು ಮಹಿಳೆಯರನ್ನು ಸನ್ಮಾನಿಸಲಾಯಿತು.   

 

Related posts

EXPERIMENTAL STOPPAGES OF TRAINS AT BOBBILI STATION ಬೊಬ್ಬಿಲಿ ನಿಲ್ದಾಣದಲ್ಲಿ ರೈಲುಗಳ ಪ್ರಾಯೋಗಿಕ ನಿಲುಗಡೆಗಳು

eNEWS LAND Team

ಯುನೆಸ್ಕೋ ಪಟ್ಟಿಗೆ ಕೋಲ್ಕತ್ತಾ ದುರ್ಗಾಪೂಜೆ!!

eNewsLand Team

ಅಣ್ಣಿಗೇರಿ ತಾಲೂಕಿನ ಜೈನ ಸಮಾಜ ಬಾಂಧವರಿಂದ ಜೈನಮುನಿ ಹತ್ಯೆ ಖಂಡಿಸಿ ಮೌನಪ್ರತಿಭಟನೆ

eNewsLand Team