28.2 C
Hubli
ಜೂನ್ 29, 2022
eNews Land
ಮಹಿಳೆ

ಸಂವಿಧಾನ ಮಹಿಳೆಯರಿಗೆ ಪೂರಕವಾಗಿದೆ: ಸಿ.ಎಂ.ನಿಂಬಣ್ಣನವರ

Listen to this article

ಇಎನ್ಎಲ್ ಕಲಘಟಗಿ: ನಮ್ಮ ದೇಶದಲ್ಲಿ ಮಹಿಳೆಯರಿಗೆ ಇರುವ ಪೂಜ್ಯ ಸ್ಥಾನ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಭಾರತದ ಸಂವಿಧಾನವು ಮಹಿಳೆಯರಿಗೆ ಪೂರಕವಾಗಿದೆ ಎಂದು ಶಾಸಕ ನಿಂಬಣ್ಣನವರ ಹೇಳಿದರು. ಸ್ಥಳೀಯ ಜನತಾ ಇಂಗ್ಲೀಷ ಸ್ಕೂಲ್‌ನಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ, ತಾಲೂಕಾ ಘಟಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಲಘಟಗಿ ಇವರ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆ ಉದ್ಘಾಟಕರಾಗಿ ಮಾತನಾಡಿ ಮಹಿಳೆಯರಿಗೆ ಸ್ವಾತಂತ್ರ್ಯ ಇಲ್ಲ ಎಂಬುದನ್ನು ಶರಣ ಬಸವಣ್ಣನವರು ಹನ್ನೆರಡನೇ ಶತಮಾನದಲ್ಲೇ ಖಂಡಿಸಿದ್ದಾರೆ.

ಇದನ್ನೂ ಓದಿ:ನನ್ನ ತಾಯಿಯೇ ನನಗೆ ಹೀರೋ : ಸಂತೋಷ ಲಾಡ್

ಮಹಿಳೆಯರ ಸಬಲೀಕರಣವಾಗಬೇಕು, ಶಿಕ್ಷಣ, ಭಾರತೀಯ ಸೇನೆ, ವೈದ್ಯಕೀಯ ಸೇವೆ, ಕ್ರೀಡೆ, ಸಂಗೀತ, ಹೀಗೆ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಮಹಿಳೆ ಸ್ಥಾನದಕ್ಕಿಸಿಕೊಂಡಿದ್ದಾಳೆ. ಇತ್ತೀಚಿಗೆ ಗಂಡoದಿರ ಕುಡಿತದಿಂದ ಅನೇಕ ಸಂಸಾರಗಳು ನಾಶ ಆಗುತ್ತಿವೆ. ಒಂದು ಮನೆ ಸುಂದರವಾಗಿಲು ಮಹಿಳೆ ಕಾರಣ, ನಾವೆಲ್ಲರೂ ಮಹಿಳೆಯರನ್ನು ಗೌರವದಿಂದ ಕಾಣಬೇಕು ಎಂದು ಎಲ್ಲರಿಗೂ ಮಹಿಳಾ ದಿನಾಚರಣೆ ಶುಭಾಶಯ ಹೇಳಿದರು.

ಇದನ್ನೂ ಓದಿ: ಕೊರೋನಾ ವಾರಿಯರ್ಸ್’ಗಳಿಗೆ ಸನ್ಮಾನ: ಮಾಜಿ ಸಚಿವ ಸಂತೋಷ್ ಲಾಡ್

ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ನಾನು ಮಹಿಳೆಯಾಗಿ ಈ ಸ್ಥಾನ ವಹಿಸಿಕೊಂಡದ್ದು ತುಂಬಾ ಸಂತೋಷವಾಗಿದೆ. ತಾವೆಲ್ಲರೂ ಉತ್ತಮ ಸಂಸ್ಕಾರ, ಸಂಸ್ಕೃತಿಯ ಶಿಕ್ಷಣ ಪಡೆಯಿರಿ, ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು ಎಂದರು. ಪ್ರಾಸ್ಥಾವಿಕವಾಗಿ ಮಾತನಾಡಿದ ಎಸ್.ಎ.ಚಿಕನರ್ತಿ 1908ರಲ್ಲಿ ಅಮೇರಿಕದಲ್ಲಿ ಮಹಿಳೆಯರ ಸಮಾನ ಹಕ್ಕಿಗೆ ಹೋರಾಟ ಮಾಡಿ 1975ರ ಮಾರ್ಚ 08ನ್ನು ವಿಶ್ವ ಸಂಸ್ಥೆಯು “ಅಂತರಾಷ್ಟ್ರಿಯ ಮಹಿಳಾ ದಿನಾಚರಣೆ”ಯನ್ನಾಗಿ ಘೋಷಿಸಿತು. ನಮ್ಮಲ್ಲಿ ಮಹಿಳಾ ಆಯೋಗ ಇದೆ, ಕಾನೂನು ಅರಿವು, ಉಚಿತ ಶಿಕ್ಷಣ, ಲಿಂಗ ಸಮಾನತೆ ಹೀಗೆ ಸ್ತ್ರೀ ಇಂದು ಸಮಾನತೆ ತೋರುತ್ತಿದ್ದಾಳೆ ಎಂದರು.
ಕಾರ್ಯಕ್ರಮದಲ್ಲಿ ವಾಯ್.ಎಚ್.ಬಣವಿ, ವಿ.ಎಫ್.ಚುಳಕಿ, ರಾಜಶೇಖರ ಹೊನ್ನಪ್ಪನವರ, ಶ್ರೀಧರ ಪಾಟೀಲ ಕುಲಕರ್ಣಿ, ಆರ್.ಎಮ್.ಹೊಲ್ತಿಕೋಟಿ, ಆಯ್.ವಿ.ಜವಳಿ, ಪುಟ್ಟಪ್ಪ ಭಜಂತ್ರಿ, ಗುರುರಾಜ ಎಚ್, ಎಮ್.ಎಚ್. ಪಾಟೀಲ, ವಿ.ವಿ.ದೇಶಪಾಂಡೆ, ಎನ್.ಆಯ್.ಕೊಂಗಿ, ರಾಜು ಲಮಾಣಿ, ವಿದ್ಯಾರ್ಥಿಗಳು, ಶಿಕ್ಷಕರು, ಹಾಗೂ ಮುಂತಾದವರು ಉಪಸ್ಥಿತರಿದ್ದರು. ಉಮೇಶ ಬೇರುಡಗಿ ಸ್ವಾಗತಿಸಿದರು.

ಇದನ್ನೂ ಓದಿ:ಅನ್ಯಜಾತೀಯ ಹುಡುಗರನ್ನು ಪ್ರೀತಿಸಿ ಮದುವೆಯಾಗುವ ಹುಡುಗಿಯರೇ ಹುಷಾರ್!!!

 

Related posts

ಯುವತಿಯರಿಗೆ ಫ್ಯಾಷನ್ ಡಿಸೈನಿಂಗ್ ಬ್ಯುಟಿಷಿಯನ್ ತರಬೇತಿ

eNewsLand Team

ಹುಡುಗಿಯರು ಸೀರೆ ಧರಿಸುವ ಮುನ್ನ ಈ ತಪ್ಪುಗಳನ್ನು ಮಾಡಬಾರದು !!

eNewsLand Team

ಧಾರವಾಡ ಜಿಲ್ಲಾ ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ

eNewsLand Team