29 C
Hubli
ಮೇ 4, 2024
eNews Land
ರಾಜ್ಯ

ಸ್ವಯಂ ಸೇವಕರಿಗೆ ಎನ್.ಡಿ.ಆರ್.ಎಫ್. ತಂಡದಿಂದ ತರಬೇತಿ

ಇಎನ್ಎಲ್ ಧಾರವಾಡ: ಭಾರತ ಸರಕಾರ ನೆಹರು ಯುವ ಕೇಂದ್ರ ಮತ್ತು ರಾಷ್ಟೀಯ ವಿಪತ್ತು ನಿರ್ವಹಣಾ ಪಡೆಯ 10ನೇ ತಂಡದಿಂದ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ಸ್ವಯಂ ಸೇವಕರಿಗೆ ಇಂದು ಬೆಳಿಗ್ಗೆ ವಿಪತ್ತು ನಿರ್ವಹಣೆ ಮತ್ತು ಪ್ರಾಣ ರಕ್ಷಣೆ ಕುರಿತು ತರಬೇತಿ ನೀಡಲಾಯಿತು.

ಈ ಎನ್.ಡಿ.ಆರ್.ಎಫ್. ತರಬೇತಿಯಿಂದ ಆಪತ್ತಿನಲ್ಲಿರುವ ಜನರಿಗೆ ಆತ್ಮಸ್ಥರ್ಯ ತುಂಬಿ, ಅವರು ಜೀವ ಉಳಿಸುವಲು ಸಹಾಯ ಆಗುತ್ತದೆ. ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಎಮ್ ಗೌತಮ್ ರೆಡ್ಡಿ ಮಾತನಾಡಿದರು.
ತುರ್ತು ಸಂದರ್ಭಗಳಾದ ಡಿಜಾಸ್ಟ್ರರ್ ಮ್ಯಾನೆಜ್ಮೆಂಟ್ ತರಬೇತಿಯಲ್ಲಿ ನ್ಯಾಚುರಲ್ ಡಿಜಾಸ್ಟ್ರರ್, ಪ್ರವಾಹ ಭೀತಿ ಎದುರಾದಾಗ ಸೈಕ್ಲೋನ್, ಭೂಕಂಪನ, ಲ್ಯಾಂಡ್ ಸ್ಲೈಡ್, ಆಕ್ಸಿಡೆಂಟ್ ಸಂದರ್ಭದಲ್ಲಿ ಗ್ಯಾಸ್ ಲಿಕಿಜ್ ಆದಂತಹ ಸಂದರ್ಭದಲ್ಲಿ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್. ತಂಡಗಳು ಬರುವುದು ತಡವಾದ ಸಂದರ್ಭದಲ್ಲಿ ನೆಹರೂ ಯುವ ಕೇಂದ್ರದ ಸ್ವಯಂ ಸೇವಕರು ತಕ್ಷಣ ಹೋಗಿ ಅವರ ಸಹಾಯ ಮಾಡಬಹುದು ಎಂಬ ಉದ್ದೇಶದಿಂದ ಸ್ವಯಂ ಸೇವಕರಿಗೆ ಈ ತರಬೇತಿಯನ್ನು ಎನ್.ಡಿ.ಆರ್.ಎಫ್. ತಂಡದಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್ ತಂಡದ ಇನ್‍ಸ್ಪೆಕ್ಟರ್ ಕಮಾಂಡರ್ ಸುಜೀತ್ ಗೋಪ್, ಎನ್.ಡಿ.ಆರ್.ಎಫ್ ಅಧಿಕಾರಿಗಳಾದ ದಿಲ್ಲೇಶ್ವರರಾವ, ಮಲ್ಲಿಕಾರ್ಜುನ ಮತ್ತು ನೆಹರೂ ಯುವ ಕೇಂದ್ರ ಹಿರಿಯ ಸ್ವಯಂ ಸೇವಕ ಶಿವಾಜಿ ಎನ್.ಕೆ ಹಾಗೂ ಕೆಸಿಡಿ ಸಮಾಜ ಕಾರ್ಯ ವಿಭಾಗದ ಕ್ಷೇತ್ರ ಕಾರ್ಯಕರ್ತರಾದ ಶಿಲ್ಪಾ ಮಾನೆ, ವೆಲನ್ಸ್ಸಿಯಾ ಆರ್, ಕಾವ್ಯಾ ಬಾದಾಮಿ, ಅನುರಾಧಾ ಇಂಚಲಮಠ ಇದ್ದರು. ಸಂಜಯಕುಮಾರ ಯ. ಬಿರಾದಾರ ನಿರೂಪಿಸಿ, ವಂದಿಸಿದರು.

Related posts

ಧಾರವಾಡ: 26ನೇಯ ರಾಷ್ಟ್ರೀಯ ಯುವಜನೋತ್ಸವಕ್ಕೆ ಭರ್ಜರಿ ಸಿದ್ಧತೆ

eNewsLand Team

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ ಕಲಿಕೆ ಕುರಿತು ತಪ್ಪು ಮಾಹಿತಿ:ನಾಡೋಜ ಡಾ.ಮಹೇಶ ಜೋಶಿ ಅಸಮಾಧಾನ

eNEWS LAND Team

ಹಿಜಾಬ್: ಕಾಂಗ್ರೆಸ್ ಬಗ್ಗೆ ಪ್ರಹ್ಲಾದ ಜೋಶಿ ಹೇಳಿದ್ದೇನು ಗೊತ್ತಾ?

eNewsLand Team