25 C
Hubli
ಮೇ 25, 2024
eNews Land
ರಾಜ್ಯ ಸುದ್ದಿ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ ಕಲಿಕೆ ಕುರಿತು ತಪ್ಪು ಮಾಹಿತಿ:ನಾಡೋಜ ಡಾ.ಮಹೇಶ ಜೋಶಿ ಅಸಮಾಧಾನ

ಇದನ್ನೂ ಓದಿ:ರಾಷ್ಟ್ರೀಯ ಜನಹಿತ ಪಾರ್ಟಿ ಅಸ್ಥಿತ್ವಕ್ಕೆ: 15 ಲಕ್ಷ ಗ್ಯಾರೆಂಟಿ ಕಾರ್ಡ್ : ಕುಕ್ಕರ್ ಚಿಹ್ನೆ ಬಿಡುಗಡೆ ಮಾಡಿದ ರಾಷ್ಟ್ರೀಯ ಅಧ್ಯಕ್ಷ ಮಂಜುನಾಥ

ಇಎನ್ಎಲ್ ಬೆಂಗಳೂರು: ಕನ್ನಡ ಭಾಷೆ ಎಂದರೆ ʻಸುಲಿದ ಬಾಳೆಯ ಹಣ್ಣಿನಷ್ಟು ಸರಳʼ ಎಂದು ಹೇಳಿದವರು ಅನುಭವಾಮೃತದ ಕವಿ ಮಹಾಲಿಂಗರಂಗ. ಆದರೆ ರಾಷ್ಟೀಯ ಶಿಕ್ಷಣ ನೀತಿ ಇಲಾಖೆಯು ಹೊರ ತಂದಿರುವ ಮೂರ ರಿಂದ ಎಂಟನೆಯ ವಯಸ್ಸಿನ ಕನ್ನಡ ಮಕ್ಕಳು ಕಲಿಯುವ ಕನ್ನಡ ಪಠ್ಯ ಕ್ರಮ ʻಚೌಕಟ್ಟು ಬುನಾದಿ ಹಂತʼ ದಲ್ಲಿ ಕನ್ನಡದ ಲಿಪಿ ದೇವನಾಗರಿ ಹಾಗೂ ಇಂಗ್ಲಿಷ್ಕ್ಕಿಂತಲೂ ಹೆಚ್ಚು ಸಂಕೀರ್ಣ ಎಂದು ಹೇಳಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ. ಎಳೆಯ ಮನಸ್ಸುಗಳ ಮೇಲೆ ಭಾಷೆಯ ಕುರಿತು ತಪ್ಪಾದ ಅಭಿಪ್ರಾಯ ಬೆಳೆಯಲು ಇದು ಕಾರಣವಾಗುತ್ತದೆ ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಆತಂಕ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಆತಂಕ ಇಲ್ಲ: ಸಿಎಂ ಬೊಮ್ಮಾಯಿ

ಕನ್ನಡ ಭಾಷೆಯನ್ನು ಜಗತ್ತಿನಲ್ಲಿಯೇ ಅತ್ಯಂತ ವೈಜ್ಞಾನಿಕ ಭಾಷೆ ಎಂದು ಹಿರಿಯ ಸಂಶೋಧಕ ಡಾ. ಎಂ.ಗೋವಿಂದ ಪೈ ಅವರೇ ಹೇಳಿದ್ದಾರೆ. ಅದನ್ನು ಪ್ರಪಂಚದ ಬಹುತೇಕ ಭಾಷಾ ತಜ್ಞರು ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಒಪ್ಪಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಕನ್ನಡ ಭಾಷೆಯನ್ನು ಆಡಿದಂತೆ ಬರೆಯಬಹುದು, ಬರೆದಂತೆ ನುಡಿಯಬಹುದು ಎನ್ನುವುದು ಸಾರ್ವಕಾಲಿಕ ಸತ್ಯ. ಜಗತ್ತಿನ ಪರಿಪೂರ್ಣ ಎಂದು ಗುರುತಿಸಿಕೊಂಡ ಮೂರು ಭಾಷೆಗಳಲ್ಲಿ ಕನ್ನಡವೂ ಒಂದು ಎನ್ನುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ. ಈ ಕಾರಣದಿಂದಲೇ ಆರ್ಚಾರ್ಯ ವಿನಾಭಾ ಭಾವೆಯವರು ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆದಿದ್ದಾರೆ ಎಂದು ನಾಡೋಜ ಡಾ.ಮಹೇಶ ಜೋಶಿ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:ಗೋ ಸಾಗಾಣೆ ವೇಳೆ ವ್ಯಕ್ತಿ ಅನುಮಾನಸ್ಪದ ಸಾವು ಪ್ರಕರಣ
ಕೇಶಿರಾಜನು ಶಬ್ದಮಣಿ ದರ್ಪಣದಲ್ಲಿ ಕನ್ನಡ ಲಿಪಿಯ ವೈಶಿಷ್ಟ್ಯವನ್ನು ವರ್ಣಿಸಿ ಮೂಲ ಕನ್ನಡ ಪದಕ್ಕೆ ಮಹಾಪ್ರಾಣಗಳ ಅಗತ್ಯವಿಲ್ಲ ಎನ್ನುವುದನ್ನು ಸಾಧಿಸಿ ತೋರಿಸಿಕೊಟ್ಟಿದ್ದಾನೆ. ಕೇಶಿರಾಜನ ಪ್ರಕಾರ ಕನ್ನಡ ಭಾಷೆಯ ವಿಶೇಷವೆಂದರೆ ಭಾಷೆಯ ಲಿಪಿಯಲ್ಲಿ ಕನ್ನಡ ಭಾಷೆಯನ್ನು ಮಾತ್ರವಲ್ಲದೆ ಬೇರೆ ಭಾಷೆಗಳಿಂದ ಬಂದ ಪದಗಳನ್ನು ಸಹಜವಾಗಿಯೇ ಉಚ್ಚರಣೆ ಮಾಡಬಹುದು. ಇಂತಹ ವೈಶಿಷ್ಟ್ಯ ಭಾರತ ಯಾವುದೇ ಭಾಷೆಗಳಿಗೂ ಇಲ್ಲವೆಂದು ಹೇಳಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ನೆನಪಿಸಿಕೊಂಡಿದ್ದಾರೆ.
NCRT ಪಠ್ಯ ಕ್ರಮದಲ್ಲಿ ಕನ್ನಡ ಭಾಷೆಯ ಅಕ್ಷರ ಜೋಡಣೆಯ ನಿಯಮಗಳು ಸಂಕೀರ್ಣವಾಗಿದೆ, ಮೂಲಾಕ್ಷರಕ್ಕೆ ವಿಭಿನ್ನ ರೀತಿಯಲ್ಲಿ ಸ್ವರಗಳ ಜೋಡಣೆಯಾಗುತ್ತವೆ, ಹೀಗಾಗಿ ಕನ್ನಡ ಲಿಪಿಯಲ್ಲಿ ಹಿಡಿತ ಸಾಧಿಸಲು ಬಹಳ ವರ್ಷಗಳೇ ಬೇಕಾಗುತ್ತವೆ ಎಂದು ಉಲ್ಲೇಖಿಸಿರುವುದನ್ನು ಗಂಭೀರವಾಗಿ ಆಕ್ಷೇಪಿಸಿರುವ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಕನ್ನಡದ ಮಕ್ಕಳು ತಿಂಗಳೊಪ್ಪತ್ತಿನಲ್ಲಿಯೇ ಕನ್ನಡ ಅಕ್ಷರ ಮಾಲೆಯನ್ನು ಸುಲಲಿತವಾಗಿ ಕಲಿಯುತ್ತಿರುವುದನ್ನು ನಾವು ಹಿಂದಿನಿಂದಲೂ ನೋಡಿಕೊಂಡು ಬರುತ್ತಿದ್ದೇವೆ. ಕನ್ನಡ ವ್ಯಾಕರಣ ನಿಯಮಗಳು ಕಲಿಯಲು ಅತೀ ಸುಲಭವಾಗಿದ್ದು ಅಕ್ಷರ ಮಾಲೆಯ ಕ್ರಮವೂ ಕಂಠ, ನಾಭಿ, ಜಿಹ್ವಾ(ನಾಲಿಗೆ)ಗಳ ಚಲನೆಗೆ ಅನ್ವಯಕವಾಗಿ ಇರುವುದು ಭಾಷಾ ಶಾಸ್ತ್ರದ ನಿಯಮಗಳಂತೆ ದೃಢಪಟ್ಟಿದೆ. ಹೀಗಾಗಿ ಕನ್ನಡ ಭಾಷೆಯ ವೈಜ್ಞಾನಿಕತೆಯನ್ನು ಎತ್ತಿ ಹಿಡಿಯುವ ಕೆಲಸ ಇನ್ನಷ್ಟು ಆಗಬೇಕಿದೆಯೇ, ಹೊರತು ಇಂತಹ ತಪ್ಪು ಕಲ್ಪನೆಗಳನ್ನು ಬೆಳೆಸುವುದಲ್ಲ ಎಂದು ನಾಡೋಜ ಡಾ. ಮಹೇಶ ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ:ಬಿಜೆಪಿಗೆ ನಟ ಸುದೀಪ್ ಬೆಂಬಲ: ಸಿಎಂ ಬೊಮ್ಮಾಯಿ
ಅಕ್ಷರ ಮಾಲೆಯ ಮೇಲೆ ಪರಿಣಿತಿ ಸಾಧಿಸಲು ಎಷ್ಟು ಸಮಯ ಬೇಕಾಗಬಹುದು ಎಂಬ ಸ್ಪಷ್ಟ ತಿಳುವಳಿಕೆ ಪಠ್ಯ ಪುಸ್ತಕ ರೂಪಿಸಿದವರಿಗೆ ಇಲ್ಲದಿರುವುದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡುವ ಸಂಬಂಧ ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ಕರ್ನಾಟಕ ಪಠ್ಯಕ್ರಮದ ಚೌಕಟ್ಟು ನೋಡಿದರೆ ಸ್ಪಷ್ಟವಾಗುತ್ತಿದೆ. ಒಂದನೇ ತರಗತಿಯಲ್ಲಿ ಸ್ವರ ಚಿಹ್ನೆ, ಎರಡನೆಯ ತರಗತಿಯಲ್ಲಿ ಗುಣಿತಾಕ್ಷರಗಳನ್ನು ಕಲಿಯಬಹುದು ಎನ್ನುವುದನ್ನು ವಿನ್ಯಾಸಕಾರರ ಅಭಿಮತ, ಆದರೆ ಸಾಕ್ಷರತೆ ಲಿಪಿಗಳನ್ನು ಒಟ್ಟಾಗಿ ಕಲಿಯುವ ಮೂಲಕ ಮಾತ್ರ ಲಭ್ಯವಾಗಲು ಸಾಧ್ಯ. ಪಠ್ಯದಲ್ಲಿ ತಪ್ಪು ಮಾದರಿಯನ್ನು ನೀಡಿದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಅದು ಗಂಭೀರ ಪರಿಣಾಮ ಬೀರಬಹುದು ಎಂದು ನಾಡೋಜ ಡಾ.ಮಹೇಶ ಜೋಶಿ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ:ಹಿರಿಯ ರಂಗಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ನಿಧನ : ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಕಂಬನಿ
ಕನ್ನಡವನ್ನು ಎಲ್ಲಾ ಹಂತಗಳಲ್ಲಿ ಅನುಷ್ಠಾನಕ್ಕೆ ತರುವ ಸಮಗ್ರ ಭಾಷಾ ಅಭಿವೃದ್ಧಿ ಕಾನೂನು ಜಾರಿಗೆ ಬಂದಿರುವಾಗ ಎನ್ಇಪಿ ಮಾಡುತ್ತಿರುವ ಇಂತಹ ತಪ್ಪು ವ್ಯಾಖ್ಯಾನಗಳು ಕನ್ನಡ ಕಲಿಕೆಯ ಮೇಲೆ ಗದಾ ಪ್ರಹಾರ ಮಾಡಿದಂತಾಗುತ್ತದೆ. ಆದ್ದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ ಕಲಿಕಾ ಕ್ರಮದಲ್ಲಿನ ದೋಷವನ್ನು ಈ ಕೂಡಲೇ ಸರಿಪಡಿಸಬೇಕು ಎಂದು ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಆಗ್ರಹ ಪಡಿಸಿದ್ದಾರೆ.

ಇದನ್ನೂ ಓದಿ:ರೈಲುಗಳ ಸೇವೆಯಲ್ಲಿ ಕೆಲವು ಬದಲಾವಣೆ

Related posts

ಮದುವೆಯಾಗಲ್ಲ ಎಂದ ಯುವಕಗೆ ಆ್ಯಸಿಡ್ ಎರಚಿದ ಆಂಟಿ!

eNewsLand Team

ಲಸಿಕೆ ತಗೊಳದಿದ್ರೆ ಇವ್ಯಾವ್ದೂ ಸಿಗಲ್ಲ! ಹುಷಾರ್.!

eNewsLand Team

ಉತ್ತಮ ಸೇವೆ : ಟಿ.ಭೂಬಾಲನ್‍ಗೆ ರಾಷ್ಟ್ರೀಯ ಮನ್ನಣೆ

eNEWS LAND Team